ಕಿರುವೆರಳ ಸಟೆ

75.00

Add to Wishlist
Add to Wishlist
Email

Description

ಪದವಿಪೂರ್ವ ಕಾಲೇಜು ಶಿಕ್ಷಕರ ನೇಮಕಾತಿ ಪರೀಕ್ಷೆಗೆ ನಿಗದಿಪಡಿಸಿದ ರತ್ನಾಕರವರ್ಣಿಯ ಭರತೇಶವೈಭವದ ಆಯ್ದ ಭಾಗ ‘ಕಿರುವೆರಳ ಸಟೆ’. ಸಾಹಿತ್ಯ ವಿದ್ಯಾರ್ಥಿಗಳಿಗೆ ಅಲಭ್ಯವಾಗಿದ್ದ ಈ ಪುಸ್ತಕವನ್ನು ಡಾ. ಶ್ರೀಧರ ಹೆಗಡೆ ಭದ್ರನ್ ಅವರು ಸಿದ್ದಪಡಿಸಿಕೊಟ್ಟಿದ್ದಾರೆ. ಈ ಕೃತಿಯನ್ನು ‘ಅಭಿನವ’ ಪ್ರಕಟಿಸಿದೆ. ………………. ಪ್ರಸ್ತುತ ಕಾವ್ಯಭಾಗದ ಸಂದರ್ಭ : ಅಖಂಡ ಭೂಮಂಡಲವನ್ನು ಗೆದ್ದು ತಿರುಗಿ ಬಂದ ಭರತ ಪೌದನಪುರದ ಹೊರಭಾಗದಲ್ಲಿ ಬಿಡಾರ ಹೂಡಿರುತ್ತಾನೆ. ತನ್ನನ್ನು ವಿರೋಧಿಸಿದ ಬಾಹುಬಲಿಯೊಂದಿಗೆ ಮಾತನಾಡಿ ಮನವೊಲಿಸುವಂತೆ ಸಂಧಾನಕ್ಕಾಗಿ ಗೆಳೆಯ ದಕ್ಷಿಣಾಂಕನನ್ನು ಕಳಿಸಿರುತ್ತಾನೆ. ಸಂಧಿಗೆ ಒಡಂಬಡದ ಬಾಹುಬಲಿ ಯುದ್ಧವೇ ಅನಿವಾರ್ಯ ಎಂದು ಹೇಳಿ ಕಳಿಸುತ್ತಾನೆ. ವಾಕ್ಪಟುವೆಂದೇ ಹೆಸರಾಗಿದ್ದ ದಕ್ಷಿಣಾಂಕ ತನ್ನ ಕಾರ್ಯಕೈಗೂಡಲಿಲ್ಲವೆಂದು ಖಿನ್ನನಾಗಿ ತಿರುಗಿ ಬರುತ್ತಾನೆ. ಮತ್ತು ಭರತನಿಗೆ ವರದಿ ಒಪ್ಪಿಸುತ್ತಾನೆ. ಭರತಚಕ್ರಿಗೆ ತಮ್ಮನ ಮೇಲೆಯೇ ಕೈಮಾಡಬೇಕಾಗಿ ಬಂದ ಪ್ರಸಂಗ ಮನಸ್ಸನ್ನು ಕೊರೆಯುತ್ತದೆ. ಆ ರಾತ್ರಿ ಭರತನಿಗೆ ನಿದ್ದೆಯೇ ಬರಲಿಲ್ಲ. ಸಪ್ಪಗೆ ಮುಖಮಾಡಿ ಕುಳಿತೇ ಇರುತ್ತಾನೆ. ಆ ನಿಶ್ಶಬ್ಧ, ಪ್ರಶಾಂತ ವಾತಾವರಣದಲ್ಲಿ ಸೈನ್ಯವೆಲ್ಲ ಸುಖನಿದ್ರೆಯಲ್ಲಿತ್ತು. ಆಗ ಇಬ್ಬರು ಸೈನಿಕರು ತಮ್ಮಲ್ಲೇ ಮಾತಾಡಿಕೊಳ್ಳುತ್ತಿರುತ್ತಾರೆ. “ಸೈನ್ಯದ ಸಹಾಯದಿಂದ ಭರತ ಚಕ್ರವರ್ತಿಯಾದ. ನಾವಿಲ್ಲದಿದ್ದರೆ ಅವನದೇನು ಬಲ? ಅವನೂ ನಮ್ಮಂತೆ ಸಾಮಾನ್ಯ ಮನುಷ್ಯನೇ ಸರಿ. ಹನಿಹನಿಗೂಡಿ ಹಳ್ಳ ನಾರು ನಾರು ಸೇರಿ ಹಗ್ಗ” ಎಂದು. ಇದನ್ನು ಕೇಳಿದ ಭರತನಿಗೆ ತನ್ನ ಸಾಮಥ್ರ್ಯ ಪ್ರರ್ದಶಿಸಬೇಕೆನ್ನಿಸುತ್ತದೆ.

Reviews

There are no reviews yet.

Be the first to review “ಕಿರುವೆರಳ ಸಟೆ”

Your email address will not be published.