Description
ಇಟಲಿಯ ಜಗದ್ವಿಖ್ಯಾತ ನೋಬೆಲ್ ಬಹುಮಾನಿತ ಲೇಖಕ ದಾರಿಯೋ ಫೋ ನ ಒಂದು ನಾಟಕ ಮತ್ತು ಆಯ್ದ ಲೇಖನಗಳನ್ನು ಎಸ್ ಗಂಗಾಧರಯ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕನ್ನಡದಲ್ಲಿ ಮೊದಲ ಬಾರಿಗೆ “ದಾರಿಯೋ ಫೋ ವಾಚಿಕೆ” ಬರುತ್ತಿದೆ. ಫೋನ ಅತ್ಯಂತ ಪ್ರಸಿದ್ಧ ಮತ್ತು ಅಪಾರ ಜನಪ್ರಿಯತೆಯನ್ನು ಪಡೆದಿರುವ ನಾಟಕ “ಕೊಡೋದಿಲ್ಲ, ಕೊಡಕಾಗೋದೂ ಇಲ್ಲ” (“Can’t Pay! Won’t Pay!!” ಜಗತ್ತಿನ ರಂಗಭೂಮಿಗೆ ಹೊಸ ಆಯಾಮವನ್ನು ನೀಡಿದೆ. ಬಹುಮುಖ ಪ್ರತಿಭೆಯ ಫೋ ಬಂಡುಕೋರ ಬರಹಗಾರ; ಆತನ ಬರಹಗಳು ಪ್ರಭುತ್ವವನ್ನು ಕೆಂಗಣ್ಣಿಗೆ ಗುರಿಯಾಗಿದ್ದವು. ಫೋ ನಾಟಕಕಾರ, ಲೇಖಕ, ನಟ, ಆಕ್ಟಿವಿಸ್ಟ್-ನಾಗಿದ್ದ. ಈತನ ನಾಟಕಗಳು ಮತ್ತು ಕೃತಿಗಳು ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ.
Reviews
There are no reviews yet.