ಕೋಲ್ಜೇನು

100.00

Add to Wishlist
Add to Wishlist
Email

Description

‘ಅಜ್ಜಿ ಗುಂಡಿ’ಯಿಂದ ಹಿಡಿದು ‘ಹಳ್ಳಕ್ಕೆ ಬಂದ ಜಿಂಕೆ’ಯವರೆಗಿನ ಹದಿನೇಳು ಲಾಲಿತ್ಯಮಯವಾದ ಹಾಗೂ ಚೇತೋಹಾರಿಯಾದ ಪ್ರಬಂಧಗಳು ಬಾಲ್ಯಲೋಕದ ಗುಂಗು ಹಿಡಿಸುತ್ತವೆ. ತಮ್ಮಣ್ಣ ಬೀಗಾರ ಅವರು ಉತ್ತರ ಕನ್ನಡ ಜಿಲ್ಲೆಯವರಾಗಿ ಅಲ್ಲಿಯ ಪ್ರಾಕೃತಿಕ ಸೊಬಗು ಮತ್ತು ಆ ಪ್ರದೇಶದ ಮಕ್ಕಳು ಅನುಭವಿಸುವ ಸಂವೇದನೆಗಳನ್ನು ಚಿತ್ರಿಸಿದ್ದರೂ ಕಾಲ-ದೇಶಗಳನ್ನು ಮೀರಿ ಇಲ್ಲಿಯ ಬರಹಗಳು ಬೆಳೆಯುವ ಬಗೆ ವಿಸ್ಮಯ ತರಿಸುತ್ತದೆ. ಅಂದರೆ ಇಲ್ಲಿಯ ಬಾಲ್ಯಚಿತ್ರಣ ಕೇವಲ ಒಂದು ಪ್ರದೇಶ ಮತ್ತು ಶೈಕ್ಷಣಿಕ ಭಾಷಾವಲಯಕ್ಕೆ ಸೀಮಿತವಾಗಿಲ್ಲ. ನಾಡಿನ ಎಲ್ಲ ಭಾಗಗಳ ಮಕ್ಕಳು ಹಾಗೂ ಹಿರಿಯರು ಇವುಗಳನ್ನು ಆನಂದದಿಂದ ಓದಬಹುದಾಗಿದೆ. ಇಲ್ಲಿಯ ಮಕ್ಕಳು ಅಭಿವ್ಯಕ್ತಿಸುವ ಅನುಭವಗಳು ತುಂಬ ವಿಶಿಷ್ಟವೂ ವಿಭಿನ್ನವೂ ಆಗಿವೆ. ಈಗಷ್ಟೆ ಹದಿಹರಯಕ್ಕೆ ತಿರುಗುತ್ತಿರುವ ಮಕ್ಕಳ ಮನೋಲೋಕವನ್ನು ಅದರ ಎಲ್ಲ ಸ್ವಾರಸ್ಯ ಮತ್ತು ಸವಾಲುಗಳೊಂದಿಗೆ ನಿರೂಪಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಮನುಷ್ಯನಲ್ಲಿಯ ಮಗುತನವನ್ನು ಇಲ್ಲಿಯ ಪ್ರಬಂಧಗಳು ಉದ್ದೀಪಿಸುತ್ತವೆ! ಆ ಉದ್ದೀಪನೆ ಲೇಖಕರ ಆಶಯ ಮತ್ತು ಅವರು ಕಟ್ಟಿಕೊಟ್ಟಿರುವ ಆಕೃತಿಯೊಳಗೆ ಅಡಗಿದೆ.

-ಬಸು ಬೇವಿನಗಿಡದ

Reviews

There are no reviews yet.

Be the first to review “ಕೋಲ್ಜೇನು”

Your email address will not be published.