ಕೊನೆಯ ಬ್ರಾಹ್ಮಣ

35.00

Add to Wishlist
Add to Wishlist
Email
SKU: B-AKS-KON Category: Tag:

Description

ಈ ಜೀವನಚರಿತ್ರೆಯು ಆರಂಭವಾಗುವುದೇ ವಿಚಿತ್ರವಾದ ಒಂದು ಧರ್ಮಸಂಕಟದಿಂದ. ಈ ಕಥನದ ಮುಖ್ಯಪಾತ್ರವಾದ ರಾಣೀ ನರಸಿಂಹ ಶಾಸ್ತ್ರಿಯವರು, ಇದೇ ೨೦೦೧ಕ್ಕೆ ಎಂಬತ್ತು ವರ್ಷ ತುಂಬಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ; ಆದರೆ ಅನಾರೋಗ್ಯಕ್ಕೂ ಮಿಗಿಲಾದ ಚಿಂತೆಯೊಂದು ಅವರನ್ನು ಬಾಧಿಸತೊಡಗಿದೆ- ಅವರ ಅಂತ್ಯಸಂಸ್ಕಾರಗಳನ್ನು ನಡೆಸಲು ಸಾಂಪ್ರದಾಯಿಕವಾಗಿ ಅರ್ಹತೆಯುಳ್ಳ ಉತ್ತರಾಧಿಕಾರಿಯೊಬ್ಬ ಅವರಿಗಿನ್ನೂ ಸಿಕ್ಕಿಲ್ಲ. ಹಾಗಂತ, ಅವರಿಗೆ ಇಬ್ಬರು ಮಕ್ಕಳಿದ್ದಾರೆ- ಆದರೆ, ಅವರಲ್ಲೊಬ್ಬ ನಾಸ್ತಿಕನಾಗಿ ಎಡಪಂಥೀಯ ವಿಚಾರದ ಪ್ರಭಾವಕ್ಕೊಳಗಾಗಿ ಸಂಪ್ರದಾಯವನ್ನು ತೊರೆದಿದ್ದಾನೆ. ಇನ್ನೊಬ್ಬ ಮಗ, ‘ಬ್ರಾಹ್ಮಣ ಸಂಪ್ರದಾಯ’ವನ್ನು ತೊರೆದು ‘ಹಿಂದೂಧರ್ಮ’ಕ್ಕೆ ಪರಿವರ್ತಿತನಾಗಿ ಹಿಂದುತ್ವವಾದಿ ಸಂಘಟನೆಗಳೊಂದಿಗೆ ಕೂಡಿಕೊಂಡಿದ್ದಾನೆ. ತಮ್ಮ ಇಡಿಯ ಬದುಕನ್ನು ತಾವು ನಂಬಿದ ‘ಆರ್ಷೇಯ ಪರಂಪರೆ’ಯ ಮಾರ್ಗದಲ್ಲಿ ಬದುಕಿರುವ ಶಾಸ್ತ್ರಿಗಳಿಗೆ ಈ ಇಬ್ಬರು ಮಕ್ಕಳೂ ಈಗ ‘ಮತಾಂತರ’ಗೊಂಡವರಾಗಿ ಕಾಣುತ್ತಿದ್ದಾರೆ. ಇದು ಈ ಧರ್ಮಸಂಕಟಕ್ಕೆ ಮೂಲ. ಇಂಥ ವಿಚಿತ್ರ ಸಮಸ್ಯೆಯಿಂದ ಮೊದಲುಗೊಳ್ಳುವ ಈ ಪುಸ್ತಕವು ಮುಂದೆ ನರಸಿಂಹಶಾಸ್ತ್ರಿಗಳ ಬದುಕು, ನಂಬಿಕೆ ಮತ್ತು ದರ್ಶನಗಳ ಒಂದು ಲೋಕವನ್ನೇ ನಮ್ಮೆದುರಿಗೆ ಬಿಚ್ಚುತ್ತಹೋಗುತ್ತದೆ…

Reviews

There are no reviews yet.

Be the first to review “ಕೊನೆಯ ಬ್ರಾಹ್ಮಣ”

Your email address will not be published.