Sale!

ಕೂಲಿ

360.00

Add to Wishlist
Add to Wishlist
Email

Description

ದೇಶ ವಿದೇಶಗಳಲ್ಲಿ ಅಪಾರ ಖ್ಯಾತಿ ತಂದುಕೊಟ್ಟ ಆಸ್ಪರ್ಶ್ಶ್ಯ ೧೯೩೫ರಲ್ಲಿ ಬಂದರೆ ಅದರ ಮರುವರ್ಷ, ೧೯೩೬ರಲ್ಲಿ, ಮುಲ್ಖ್‌ರಾಜ್ ಆನಂದ್ ಅವರಿಗೆ

ಅದೇ ಮಟ್ಟದ ಖ್ಯಾತಿಯನ್ನು ತಂದುಕೊಟ್ಟ ಕಾದಂಬರಿ ಎಂದರೆ ಕೂಲಿ .

ಸಾಮಾನ್ಯ ಶ್ರಮಜೀವಿಗಳ ಬದುಕು ಬವಣಿಗಳನ್ನು, ಸಣ್ಣ ಸಣ್ಣ ಸುಖ ಸಂತೋಷಗಳನ್ನು ಭಾವುಕತೆಗೆ ಒಳಗಾಗದೆ ಆದರೆ ಅನುಕಂಪದ ಸೆಲೆ

ಬತ್ತದ ಹಾಗೆ ವಾಸ್ತವಿಕ ನೆಲೆಯಲ್ಲಿ ಓದುಗರಿಗೆ ಈ ಪ್ರಪಂಚವನ್ನು ಕಾಣಿಸಿದ್ದು ಮುಲ್ಕ್ ರಾಜ್ ಆನಂದ್‌ರ ದೊಡ್ಡ ಸಾಹಿತ್ಯ ಸಾಧನೆ.

ಬಾಲ ಕಾರ್ಮಿಕರ ಬಗ್ಗೆ ವಿಶೇಷ ಗಮನ ಹರಿಸುತ್ತಿರುವ ನಮ್ಮ ಕಾಲಕ್ಕಂತೂ ಕೂಲಿ ಅತ್ಯಂತ ಪ್ರಸ್ತುತವಾದದ್ದು. ದೃಷ್ಟಾರನಂತೆ ಆನಂದ್ ಈ ಸಮಸ್ಯೆಯ ಮುಖಗಳನ್ನು ಎಂಟು ದಶಕಗಳ ಹಿಂದೆಯೇ ಕಂಡು, ಅವನ್ನು

ಕಲಾತ್ಮಕವಾಗಿ ಚಿತ್ರಿಸಿರುವುದು ಒಂದ ವಿಸ್ಮಯ. ಅದು ಅವರ ವಿಶೇಷ ಸಾಮಾಜಿಕ ಸಾಹಿತ್ಯಕ ಕೊಡುಗೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ ಮತ್ತಿತರ ಪುರಸ್ಕಾರಗಳಿಗೆ ಪಾತ್ರರಾಗಿರುವ ಡಾ. ಡಿ.ಎ.ಶಂಕರ್, ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಮೊದಲ ಎಮರಿಟಸ್ ಪ್ರೊಫೆಸರ್, ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡಿ ಹಾಗೂ ಕೊಲಂಬಿಯ

ವಿಶ್ವವಿದ್ಯಾನಿಲಯಗಳ ಫೆಲೋ.

ಅವರ ಇತ್ತೀಚಿನ ಕೃತಿ ಹಿಡಿದ ಹಾದಿಯ ಆಚೀಚೆ ಎನ್ನುವ ಕವನ ಸಂಪುಟ ಮತ್ತು ಮುಮ್ಮಡಿಯವರನ್ನು ಕುರಿತ ಇಂಗ್ಲಿಷ್ ನಾಟಕದ ಈ-ಆವೃತ್ತಿ.

“ಕನ್ನಡ ಸಾರಸ್ವತ ಲೋಕದಲ್ಲಿ ಪ್ರೊ. ಡಿ. ಎ. ಶಂಕರ್ ಅವರು ವಿಮರ್ಶಕರಾಗಿ, ಕವಿಯಾಗಿ ಅನುವಾದಕರಾಗಿ ಪ್ರಸಿದ್ಧರು

– ಡಿ.ಆರ್.ನಾಗರಾಜ್

Reviews

There are no reviews yet.

Be the first to review “ಕೂಲಿ”

Your email address will not be published.