Sale!

ಕುಮಾರವ್ಯಾಸ ಕಥಾಂತರ (ಕರ್ಣಪರ್ವ, ಶಲ್ಯಪರ್ವ, ಗದಾಪರ್ವ)

400.00 360.00

Add to Wishlist
Add to Wishlist
Email

Description

ಲೇಖಕರು: ಎಚ್.ಎಸ್. ವೆಂಕಟೇಶಮೂರ್ತಿ
ಪುಟಗಳು: 260 (ಹಾರ್ಡ್ ಬೈಂಡಿಂಗ್)

……………..
ಹದಿನೈದನೆಯ ಶತಮಾನದಲ್ಲಿ ಕನ್ನಡದಲ್ಲಿ ಸಂಭವಿಸಿದ ಬಹುದೊಡ್ಡ ಸಾಹಿತ್ಯಕ ಪವಾಡ ಗದುಗಿನ ಭಾರತ’ (ಎಚ್.ಎಸ್.ವಿ.). ಹಾಗೇನೇ, ಐದು ಶತಮಾನಗಳ ಬಳಿಕ, ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಎಚ್.ಎಸ್.ವಿ.ಯವರು ಕಥಿಸಿದ ಕುಮಾರವ್ಯಾಸ ಕಥಾಂತರ ಸರಣಿ ಇನ್ನೊಂದು ಪವಾಡ. ಕಥಾಂತರ ಎನ್ನುವುದು ಕುಮಾರವ್ಯಾಸನದೇ ಮಾತು- ತನ್ನ ಕಾವ್ಯಕಥನಕ್ಕೆ ಸಂಬಂಧಿಸಿದಂತೆ. ಕಥಾಂತರ ಎಂದರೆ ಒಂದು ಕಥೆಯನ್ನು ಇನ್ನೊಂದೇ ರೀತಿಯಲ್ಲಿ ಹೇಳುವುದು. ಎಚ್.ಎಸ್.ವಿ. ಇಲ್ಲಿ ಕುಮಾರವ್ಯಾಸ ಭಾರತದ ಒಟ್ಟು ಹತ್ತು ಪರ್ವಗಳನ್ನು ನಾಲ್ಕು ಸಂಪುಟಗಳಾಗಿವಿನೂತನ’ ಶೈಲಿಯಲ್ಲಿ ಕಥಾಂತರಿಸಿ ಕೊಟ್ಟಿದ್ದಾರೆ. ವ್ಯಾಸಪ್ರಣೀತ ಸಂಸ್ಕೃತ ಮಹಾಭಾರತ ಒಂದು ಐತಿಹಾಸಿಕ; ಅದನ್ನು ಕನ್ನಡದಲ್ಲಿ ಕಾವ್ಯವಾಗಿ ಕಥಾಂತರಿಸಿದವನು ಕುಮಾರವ್ಯಾಸ; ಅವನ ಕಾವ್ಯವನ್ನು ಈಗ ನವ್ಯವಾಗಿ ಕಥಾಂತರಗೊಳಿಸಿದವರು ಎಚ್.ಎಸ್.ವಿ. ಅನನ್ಯ ಕಾವ್ಯಶ್ರದ್ಧೆ, ಕವಿಭಕ್ತಿ, ಜನಾನುರಾಗ, ಶ್ರಮ, ಮುಖ್ಯವಾಗಿ ತಪಸ್ಸು (ಏಕಾಗ್ರತೆ) ಇಲ್ಲದಿರುತ್ತಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. `ನಾನೃಷಿಃ ಕುರುತೇ ಕಾವ್ಯಂ’ ಎಂಬ ಮಾತು ಎಲ್ಲ ಕಾಲಕ್ಕೂ ಸತ್ಯ.

-ಕೆ. ವಿ. ತಿರುಮಲೇಶ್

Reviews

There are no reviews yet.

Be the first to review “ಕುಮಾರವ್ಯಾಸ ಕಥಾಂತರ (ಕರ್ಣಪರ್ವ, ಶಲ್ಯಪರ್ವ, ಗದಾಪರ್ವ)”

Your email address will not be published. Required fields are marked *