ಕುಮಾರವ್ಯಾಸಭಾರತ ಎಂಬ ಕರ್ಣಾಟಕಭಾರತಕಥಾಮಂಜರಿ

2,000.00

Add to Wishlist
Add to Wishlist
Email

Description

(ಪರಿಷ್ಕೃತಪಠ್ಯ, ಹೊಸಗನ್ನಡ ಗದ್ಯಾನುವಾದ, ಕ್ಲಿಷ್ಟಪದಗಳ ಅರ್ಥ, ಟಿಪ್ಪಣಿಗಳು, ವಿಶೇಷವಿಷಯಗಳು, ಪರಾಮರ್ಶನಸಾಹಿತ್ಯ, ಪದ್ಯಗಳ ಅಕಾರಾದಿಸೂಚಿಸಹಿತ)
ಎರಡು ಸಂಪುಟಗಳಲ್ಲಿ ಹೊರಬಂದಿದೆ…
ಸಂಪುಟ 1 : ಆದಿಪಂಚಕ (ಆದಿಪರ್ವ, ಸಭಾಪರ್ವ, ಅರಣ್ಯಪರ್ವ, ವಿರಾಟಪರ್ವ, ಉದ್ಯೋಗಪರ್ವ)
ಸಂಪುಟ 2 : ಯುದ್ಧಪಂಚಕ (ಭೀಷ್ಮಪರ್ವ, ದ್ರೋಣಪರ್ವ, ಕರ್ಣಪರ್ವ, ಶಲ್ಯಪರ್ವ, ಗದಾಪರ್ವ)

*****************

‘ಕುಮಾರವ್ಯಾಸಭಾರತ’ ಎಂಬ ರೂಢಿಯ ಹೆಸರಿನ ‘ಕರ್ಣಾಟಭಾರತ ಕಥಾಮಂಜರಿ’ಯ ಹೊಸ ಪರಿಷ್ಕರಣವನ್ನು ಪರಿಶೋಧಿತವಾದ ಕಾವ್ಯಪಾಠ, ಹೊಸಗನ್ನಡ ಗದ್ಯಾನುವಾದ ಮತ್ತು ಅಭ್ಯಾಸಸಾಮಗ್ರಿಗಳೊಂದಿಗೆ ಕನ್ನಡಿಗರ ಕೈಗೆ ಒಪ್ಪಿಸುವ ಒಂದು ವಿನಮ್ರವಾದ ಪ್ರಯತ್ನವನ್ನು ನಾವು ಇಲ್ಲಿ ಮಾಡಿದ್ದೇವೆ.

ಪ್ರಸ್ತುತ ಪರಿಷ್ಕರಣಕ್ಕೆ ನಾವು ಈಗ ಅಭ್ಯಾಸಿಗಳಲ್ಲಿಯೂ ಗಮಕಿಗಳಲ್ಲಿಯೂ ಹೆಚ್ಚು ಪ್ರಚಾರದಲ್ಲಿರುವ ಜನಪ್ರಿಯವಾದ ೧೯೫೮ರ ಮೈಸೂರು ಸರ್ಕಾರದ ಪರಿಷ್ಕರಣವನ್ನೇ (ಸಂ. ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್) ಮೂಲವಾಗಿಟ್ಟುಕೊಂಡಿದ್ದೇವೆ. ಆದರೆ ಅಲ್ಲಿಯ ಪದ್ಯಪಾಠಗಳಲ್ಲಿ, ಹೆಚ್ಚು ತೃಪ್ತಿಕರವೂ ಸಂಭಾವ್ಯವೂ ಆಗಿ ತೋರುವ ಬೇರೆ ಮುದ್ರಿತ ಪರಿಷ್ಕರಣಗಳ ಮತ್ತು ಅವುಗಳಲ್ಲಿ ದೊರೆಯುವ ಪ್ರತ್ಯಂತರಗಳ ಪಾಠಭೇದಗಳನ್ನು ಒಂದು ಮಿತಿಯಲ್ಲಿ ನಾವು ಅಂಗೀಕರಿಸಿದ್ದೇವೆ. ಅಂಗೀಕೃತವಾದ ಪಾಠಗಳ ವಿಷಯದಲ್ಲಿ ಕೂಡ, ವಿರಳವಾಗಿ ಊಹಾತ್ಮಕ ಪರಿಷ್ಕರಣಕ್ಕೆ ಕೂಡ ಅವಕಾಶಮಾಡಿದೆ. ಯಾವುದೇ ಪಾಠವಿಷಯದಲ್ಲಿ, ಸಂದೇಹವೋ ಅಭಿಪ್ರಾಯಭೇದವೋ ವಿಶೇಷಸೂಚನೆಯೋ ಇದ್ದಾಗ ಆಯಾ ಪದ್ಯಗಳ ಅಡಿಟಿಪ್ಪಣಿಯ ಭಾಗದಲ್ಲಿ ತಕ್ಕ ಸಂಕೇತದೊಂದಿಗೆ ಅವನ್ನು ದಾಖಲಿಸಿದ್ದೇವೆ.

-ಟಿ.ವಿ. ವೆಂಕಟಾಚಲ ಶಾಸ್ತ್ರೀ
(ಅರಿಕೆಯ ಮಾತುಗಳಿಂದ)

Reviews

There are no reviews yet.

Be the first to review “ಕುಮಾರವ್ಯಾಸಭಾರತ ಎಂಬ ಕರ್ಣಾಟಕಭಾರತಕಥಾಮಂಜರಿ”

Your email address will not be published.