Description
ಚನ್ನಕೇಶವ ಜಿ. ಅವರು ಚಿತ್ರಕಲೆ ಮತ್ತು ರಂಗಭೂಮಿಯ ಪದವೀಧರರು. ರಂಗಭೂಮಿಯ ವಿವಿಧ ಕ್ಷೇತ್ರಗಳಲ್ಲಿ
ತೊಡಗಿಸಿಕೊಂಡು, ಅಭಿನಯ, ನಿರ್ದೇಶನ, ನಾಟಕ ರಚನೆಯ ಜೊತೆಗೆ ರಂಗ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದ ಇವರು ಬೆಂಗಳೂರಿನ `ಲೋಕಚರಿತ ಟ್ರಸ್ಟ್' ನ ಸ್ಥಾಪಕ ಸದಸ್ಯರಾಗಿದ್ದರು. ೨೦೦೩ರಲ್ಲಿ ಅಮೇರಿಕಾದ `ಬ್ರೆಡ್ ಆಂಡ್ ಪಪೆಟ್ ಸಂಸ್ಥೆಯ ರಂಗ ಕಾರ್ಯಾಗಾರಕ್ಕೆ ಭಾರತದಿಂದ ವಿಶೇಷ ಆಹ್ವಾನಿತರಾಗಿದ್ದರು. ೨೦೦೯ರಲ್ಲಿ ಬ್ರಿಟಿಷ್ ಕೌನ್ಸಿಲ್ ಏರ್ಪಡಿಸಿದ್ದ ಸ್ಕಾಟ್ಲ್ಯಾಂಡ್ನ ಎಡಿನ್ಬರೋದಲ್ಲಿ ನಡೆದ `ಥಿಯೇಟರ್ ಸೂತ್ರ' ರಂಗ ಸಮ್ಮೇಳನಕ್ಕೆ ಭಾರತದ ಒಬ್ಬ ರಾಯಭಾರಿಯಾಗಿದ್ದರು. ೨೦೧೬ರಲ್ಲಿ ಅಮೇರಿಕಾದ ದಕ್ಷಿಣ ಕರೋಲಿನಾದ ವಿಶ್ವವಿದ್ಯಾಲಯದಲ್ಲಿ ನಡೆದ ಆಫ್ರಿಕಾ ಜನಾಂಗದವರ `ಮಹಿಳಾ ಕಲಾ ಸಮ್ಮೇಳನ'ಕ್ಕೆ ಸಿದ್ದಿ ಜನಾಂಗದ ಪ್ರತಿನಿಧಿಯಾಗಿ, ಸಿದ್ದಿ ಕಲಾವಿದೆಯರೊಡನೆ ವಿಶೇಷ ಆಹ್ವಾನಿತರಾಗಿದ್ದರು. ದೇಶಕಾಲ ಸಾಹಿತ್ಯ ಪತ್ರಿಕೆಯ ವಿನ್ಯಾಸಕರಾಗಿದ್ದ ಇವರು ೩೦೦ಕ್ಕೂ ಹೆಚ್ಚು ಪುಸ್ತಕ ವಿನ್ಯಾಸ ಮಾಡಿದ್ದಾರೆ.
*****
ಡಾ. ವಿಶಾಲಾ ವಾರಣಾಶಿ ಅವರು ಬೆಂಗಳೂರಿನ ಸುರಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ವಿದೇಶಿ
ಮೂಲದ ಅನೇಕ ಸಣ್ಣ ಕತೆಗಳನ್ನು ಅನುವಾದ ಮಾಡಿದ್ದು, ಅವು ಕನ್ನಡದ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಸುರಾನ ಕಾಲೇಜಿನಲ್ಲಿ ೨೦೦೭ರ ವರೆಗೆ ಮಾಡಿಸಿದ ಅನೇಕ ನಾಟಕಗಳಿಗೆ ಸಹಯೋಜಕರಲ್ಲಿ ಒಬ್ಬರಾಗಿ ಕೆಲಸ ಮಾಡಿದ್ದಾರೆ. ನಾಟಕ ಇವರ ಆಸಕ್ತಿಯ ಕ್ಷೇತ್ರಗಳಲ್ಲಿ ಒಂದು.
*****
ಡಾ. ಮೀರಾ ಚಕ್ರವರ್ತಿ ಅವರು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಸಾಂಸ್ಕöÈತಿಕ ಅಧ್ಯಯನಗಳ ವಿಭಾಗದಲ್ಲಿ ಡಾಕ್ಟರೇಟ್ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತತ್ವಶಾಸ್ತç, ಮಹಿಳಾ ಅಧ್ಯಯನ, ಸಾಂಸ್ಕöÈತಿಕ ಅಧ್ಯಯನ, ಕಾನ್ಶಿಯಸ್ನೆಸ್ ಸ್ಟಡೀಸ್ ಮತ್ತು ಅನುವಾದಕ್ಕೆ ಸಂಬAಧಪಟ್ಟ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಿಸಲಾಗಿರುವ ಹೆಸರಾಂತ ಬರಹಗಾರರ ಪುಸ್ತಕಗಳ ಅನುವಾದಗಳನ್ನೂ ಮಾಡಿದ್ದಾರೆ.
Reviews
There are no reviews yet.