ಲೋಹಿಯಾ ವ್ಯಕ್ತಿ ಮತ್ತು ವಿಚಾರ

200.00

Add to Wishlist
Add to Wishlist
Email

Description

ಭಾರತದ ಸಮಾಜವಾದಿ ಆಂದೋಲನದಲ್ಲಿ ರಾಮಮನೋಹರ ಲೋಹಿಯಾ ಅವರು ಒಂದು ಪ್ರಮುಖ ಪಾತ್ರವನ್ನು ವಹಿಸಿದ್ದರು ಎನ್ನುವುದರಲ್ಲಿ ಸಂದೇಹವಿಲ್ಲ. ಅವರ ಜನ್ಮ ಶತಮಾನೋತ್ಸವ ಮುಗಿಯುತ್ತಿರುವ ಸಂದರ್ಭದಲ್ಲಿ ಅವರ ವ್ಯಕ್ತಿತ್ವದ ಹಾಗೂ ವಿಚಾರಗಳ ಇನ್ನೊಂದು ಮಗ್ಗುಲನ್ನು ನೋಡುವ ಪ್ರಯತ್ನ ಈ ಪುಸ್ತಕ. ಲೋಹಿಯಾ ಅವರನ್ನು ಕೇಂದ್ರವಾಗಿಟ್ಟುಕೊಂಡು ಬಾಪು ಹೆದ್ದೂರಶೆಟ್ಟಿಯವರು ತಮ್ಮ ಈ ಪ್ರಯತ್ನದಲ್ಲಿ ಭಾರತದ ಸಮಾಜವಾದಿ ಆಂದೋಲನದ ಇತಿಹಾಸದ ಪುಟಗಳನ್ನೂ, ಭಾರತದ ಹಾಗೂ ವಿಶ್ವದ ಸಮಾಜವಾದಿ ಚಿಂತನೆಯ ಹಲವಾರು ಪದರಗಳನ್ನೂ ತಿರುವಿ ಹಾಕಿದ್ದಾರೆ. ಪುಸ್ತಕ ಓದಿದರೆ ಲೋಹಿಯಾ ಅವರ ವ್ಯಕ್ತಿತ್ವದ ಹಾಗೂ ವಿಚಾರಗಳ ಇನ್ನೊಂದು ಮಗ್ಗುಲದ ಪರಿಚಯವಾಗುವುದರ ಜೊತೆಗೆ ಓದುಗರಿಗೆ ಭಾರತದ ಸಮಾಜವಾದಿ ಆಂದೋಲನದ ಇತಿಹಾಸದ ಹಲವಾರು ಘಟನೆಗಳ ಬಗ್ಗೆ, ಸಮಾನತೆ, ಸಮಾನ ಅವಕಾಶ, ಕಲ್ಯಾಣ ರಾಜ್ಯ, ಮೊದಲಾದ ಸಮಾಜವಾದಿ ಪರಿಕಲ್ಪನೆಗಳ ಬಗೆಗೆ ಭಾರತದ ಹಾಗೂ ವಿಶ್ವದ ಚಿಂತನಾಕ್ರಮದ ಪರಿಚಯವೂ ಆಗುತ್ತದೆ. ಲೋಹಿಯಾ ಅವರ ವ್ಯಕ್ತಿತ್ವ ಹಾಗೂ ವಿಚಾರಗಳ ಪುನರ್ಮೌಲೀಕರಣಕ್ಕೆ ಈ ಪುಸ್ತಕ ನಾಂದಿಯಾಗಲಿದೆ ಎಂದು ನಿರೀಕ್ಷಿಸಬಹುದಾಗಿದೆ.

Reviews

There are no reviews yet.

Be the first to review “ಲೋಹಿಯಾ ವ್ಯಕ್ತಿ ಮತ್ತು ವಿಚಾರ”

Your email address will not be published.