Sale!

ಮಾವಿನಮರದಲ್ಲಿ ಬಾಳೆಯ ಹಣ್ಣು

167.00

Add to Wishlist
Add to Wishlist
Email

Description

ನಾಟಕಕಾರ, ನಿರ್ದೇಶಕ ಮತ್ತು ಬರಹಗಾರರಾದ ಕೆ.ವಿ. ಅಕ್ಷರ ಅವರು ರಂಗಭೂಮಿ ಮತ್ತು ನಾಟಕ ಕುರಿತು ಬರೆದ ಲೇಖನಗಳ ಸಂಕಲನ ಇದು. ಗುಬ್ಬಿ ಕಂಪೆನಿಯ ರಾಮಾಯಣ ಪ್ರಯೋಗದ ಒಂದು ಉಲ್ಲೇಖದಿಂದ ಈ ವಿಚಿತ್ರ ಹೆಸರನ್ನು ಎತ್ತಿಕೊಂಡಿರುವ ಈ ಪುಸ್ತಕವು ಕನ್ನಡ ರಂಗಭೂಮಿ ಮತ್ತು ನಾಟಕದ ಜಗತ್ತಿನೊಳಗೆ ಅಡಕವಾಗಿರುವ ವಿಚಿತ್ರ ಬಗೆಯ ಪರಸ್ಪರ ಸಂಬಂಧಗಳನ್ನೂ ಸಾಮ್ಯ-ಭಿನ್ನತೆಗಳನ್ನೂ ಅಂತರ್ ಪಠ್ಯೀಯತೆಯನ್ನೂ ಶೋಧಿಸಿ ಅದರ ಮೂಲಕವೇ ಆಧುನಿಕ ಕನ್ನಡ ರಂಗಭೂಮಿಯ ಒಂದು ವಿಶಿಷ್ಟ ಚಿತ್ರವನ್ನು ಕಟ್ಟಿಕೊಡುತ್ತದೆ. ಸಂಗ್ಯಾಬಾಳ್ಯಾ, ಸಂಸರ ನಾಟಕಗಳು, ಪುತಿನ ಅವರ `ಅಹಲ್ಯೆ?, ದ.ರಾ. ಬೇಂದ್ರೆ ಮತ್ತು ಪಿ. ಲಂಕೇಶ್ ಅವರ ನಾಟಕಗಳು – ಹೀಗೆ ಕನ್ನಡ ನಾಟಕದ ಬೇರೆಬೇರೆ ಬಗೆಗಳನ್ನು ಕುರಿತ ವಿಮರ್ಶಾತ್ಮಕ ಲೇಖನಗಳು ಈ ಪುಸ್ತಕದ ಒಂದು ಭಾಗವಾಗಿದ್ದರೆ, ಇನ್ನೊಂದು ಭಾಗದಲ್ಲಿ ಕನ್ನಡ ರಂಗಭೂಮಿಯ ಭೂತ-ವರ್ತಮಾನ-ಭವಿಷ್ಯಗಳನ್ನು ಕುರಿತ ಸುದೀರ್ಘ ಚಿಂತನೆಗಳಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಈ ಪುಸ್ತಕಕ್ಕೆ ದೊರೆತಿದೆ.

Reviews

There are no reviews yet.

Be the first to review “ಮಾವಿನಮರದಲ್ಲಿ ಬಾಳೆಯ ಹಣ್ಣು”

Your email address will not be published.