ಮಾಯಾದರ್ಪಣ

200.00

Add to Wishlist
Add to Wishlist
Email
SKU: B-AKR-MYD Category:

Description

ತರುಣ ಲೇಖಕರಾದ ಎಂ ಎಸ್ ಶ್ರೀರಾಮ್ ಅವರ ಕತೆಗಳ ಸಂಕಲನ `ಮಾಯಾದರ್ಪಣ’ದಲ್ಲಿ ೧೩ ಕತೆಗಳಿವೆ; ತರುಣ ಬರಹಗಾರನೊಬ್ಬನ ಉತ್ಸಾಹ, ತಿಕ್ಕಲುತನ ತೋರುವ ಜೊತೆಗೇ ಈ ಕತೆಗಳು ತರುಣರ ಬೆಚ್ಚನೆಯ ಭಾವವನ್ನೂ ತೋರುತ್ತವೆ. ಇವೆಲ್ಲಕಿಂತ ಹೆಚ್ಚಾಗಿ ನಿಜಕ್ಕೂ ಸಾಹಿತಿಯಾದವನು ತಾರುಣ್ಯದಲ್ಲಿ ತೋರಲೇಬೇಕಾದ ನುಡಿಗಟ್ಟಿನ ಹೊಸತನ, ನೋಟದ ಹೊಸತನ ತೋರುತ್ತವೆ,
ಪಿ ಲಂಕೇಶ್

ಶ್ರೀರಾಮ್ ಅವರ ಎಲ್ಲ ಕತೆಗಳೂ ಕುತೂಹಲದಿಂದ ಓದಿಸಿಕೊಂಡು ಹೋಗುವುದರ ಜೊತೆಗೆ ಬದುಕಿನ ಸೂಕ್ಷ್ಮಗಳನ್ನು ಹೊಳೆಯಿಸುತ್ತವೆ. ಹಾಗೂ ಇಂದಿನ ಮೌಲ್ಯಗಳ ಕುಸಿತದ ಬಗ್ಗೆಯೂ ನಮ್ಮನ್ನು ಗಾಢವಾಗಿ ಚಿಂತನೆಯಲ್ಲಿ ತೊಡಗಿಸುತ್ತವೆ. ನಮ್ಮ ತರುಣ ಲೇಖಕರಿಂದ ಇಂತಹ ಉತ್ಕೃಷ್ಟ ಪ್ರಯೋಗಗಳು ಇನ್ನೂ ನಡೆಯುತ್ತಿರುವಾಗ ನವ್ಯ ಕತೆಗಳ ಪರಂಪರೆಗೆ ಭರತವಾಕ್ಯ ಹಾಡುವುದು ಅಕಾಲಿಕವೆನ್ನಿಸದಿರದು. ನವ್ಯತೆಯ ಒಂದು ಹೊಸ ಅಲೆಯ ಹುಟ್ಟಿನ ಅನುಭವವನ್ನು ತರುವ `ಮಾಯಾದರ್ಪಣ’ ಒಂದು ಸ್ವಾಗತಾರ್ಹ ಕೃತಿ.
ಕೆ ನರಸಿಂಹಮೂರ್ತಿ

ಎಂ ಎಸ್ ಶ್ರೀರಾಮ್ ಅವರ ಕತೆಗಳ ಮೊದಲ ಸಂಕಲನವಾಗಿ ಪ್ರಕಟವಾಗಿರುವ `ಮಾಯಾದರ್ಪಣ’ ಈ ವರ್ಷದ ಒಂದು ಗಮನಾರ್ಹವಾದ ಸಂಕಲನ… ಶ್ರೀರಾಮ್ ಅವರು ಕತೆಯ ಅಂಶಗಳನ್ನು ಗೌಣವಾಗಿಸಿ, ಸಂಭಾಷಣೆಯಲ್ಲಿ ಕತೆಯನ್ನು ನಿಜವಾಗಿಸುವ ಕೌಶಲವನ್ನು ಸಿದ್ಧಿಸಿಕೊಂಡಿದ್ದಾರೆ. ಅವರು ಪ್ರಜ್ಞೆಗೆ ಹೆಚ್ಚು ಒತ್ತು ಕೊಟ್ಟು ಕತೆಗಳನ್ನು ಬರೆದರೂ ಇತ್ತೀಚಿನ ಬಹುಮುಖ್ಯ ಕತೆಗಾರರಲ್ಲಿ ಒಬ್ಬರಾಗಿ ಭರವಸೆ ಹುಟ್ಟಿಸಿದ್ದಾರೆ.
ಕರಿಗೌಡ ಬೀಚನಹಳ್ಳಿ

ಎಂ ಎಸ್ ಶ್ರೀರಾಮ್ ಅವರ ಕತೆಗಳ ಮೊದಲ ಸಂಕಲನದಲ್ಲಿ ಹದಿಮೂರು ಕತೆಗಳಿವೆ. ಬದುಕಿನ ನಿಗೂಢತೆಯನ್ನೂ ಸಂಬಂಧಗಳ ನೈಜ ಸ್ವರೂಪತೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕೆಂಬ ಕಾಳಜಿ ಇವುಗಳಲ್ಲಿ ಸುಸ್ಪಷ್ಟವಾಗಿದೆ. ಮನುಷ್ಯ ಸಂಬಂಧಗಳ ನೆಲೆಯಲ್ಲಿ ವ್ಯಕ್ತಿಯ ಮನಸ್ಸು ಹಾಗೂ ವರ್ತನೆಗಳನ್ನು ಇವು ತೆರೆದಿಡುತ್ತವೆ. ಅಂತರ್ಮುಖ-ಬಹಿರ್ಮುಖಗಳ ಕೃತಕ ವಿಭಜನೆಯಿಲ್ಲದೆ ಸಮಗ್ರ ವ್ಯಕ್ತಿತ್ವದ ಶೋಧನೆಯನ್ನು ಇವು ಮಾಡುತ್ತವೆ. ಅತಿ-ಅಂತರ್ಮುಖತೆಯ ರಕ್ತಹೀನತೆಯಿಂದಲೂ ಅತಿ-ಬಹಿರ್ಮುಖತೆಯ ಆವೇಶದಿಂದಲೂ ಇವು ಪಾರಾಗಿವೆ. ಕನ್ನಡ ಸಾಹಿತ್ಯದ ಇಂದಿನ ಸಂದರ್ಭದಲ್ಲಿ ಇದು ಗಮನಿಸಬೇಕಾದ ಸಂಗತಿ.
ಎ ಆರ್ ನಾಗಭೂಷಣ

Reviews

There are no reviews yet.

Be the first to review “ಮಾಯಾದರ್ಪಣ”

Your email address will not be published.