Description
ಸಂಪಾದನೆ: ಡಾ. ಜಿ.ಎಂ. ಗಣೇಶ್
ಪ್ರಕಾಶನ: ನಿರಂತರ
*************
ದೇವರು ನಮಗೊಂದು ಬದುಕು ಕೊಟ್ಟಾನಾ, ನಿಮಗೊಂದು ಬದುಕು ಕೊಟ್ಟಾನಾ, ಇಡೀ ಜೀವಜಂತುಗಳಿಗೆಲ್ಲಾ ಒಂದು ಬದುಕಿದೆ. ಆ ಬದುಕನ್ನು ನಾವು ಅರ್ಥಮಾಡಿಕೊಳ್ಳಬೇಕು.
ಬದುಕು ದೀಪ ಇದ್ದಂಗೆ, ದೀಪಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ದೀಪದ ಮಹತ್ವ ಗೊತ್ತಾಗೋದು ಕತ್ತಲಾದಾಗ, ದೀಪಕ್ಕೆ ಮಾರುಕಟ್ಟೆಯಲ್ಲಿ ಹತ್ತು ಪೈಸೆ. ಆದರೆ ಅದು ನೀಡುವ ಬೆಳಕಿಗೆ ಬೆಲೆ ಕಟ್ಟಲು ಆಗುತ್ತದೇನು? ದೊಡ್ಡಮನೆ, ಅರಮನೆ, ಏನು ಸಂಪತ್ತು ಇದೆ! ಒಡವೆ ವಸ್ತುಗಳಿವೆ, ವೈಡೂರಗಳಿವೆ… ರಾತ್ರಿ ಆಯ್ತು. ಕತ್ತಲು ಆವರಿಸಿತು. ಅರಮನೆಯೊಳಗೆ ದೀಪ ಇಲ್ಲಾ ಅಂದರೆ ಸಂಪತ್ತು ಏನಕ್ಕ ಬಂತು? ನಮ್ಮ ಬದುಕು ದೀಪದಷ್ಟೇ ಮಹತ್ವದ್ದು, ಅದಕ್ಕೆ ಬೆಲೆ ಕಟ್ಟಲು ಆಗುತ್ತದೇನು?
-ಶ್ರೀ ಸಿದ್ಧೇಶ್ವರ ಸ್ವಾಮಿಗಳು
Reviews
There are no reviews yet.