ಮಹಾಭಾರತ – ಭೂಮಕಾವ್ಯ ಮತ್ತು ಭಾರತ ರಾಷ್ಟ್ರ

130.00

Add to Wishlist
Add to Wishlist
Email

Description

ಮಾಧ್ಯಮ ಭಾರತದಲ್ಲಿ ಸಾಮ್ರಾಜ್ಯಗಳೂ ರಾಜವಂಶಗಳೂ ಉದಯಿಸಿ ಅಸ್ತಮಿಸಿವೆ ; ಧಾರ್ಮಿಕ ಪಂಥಗಳು ಹುಟ್ಟಿ ಕಾಲಪ್ರವಾಹದಲ್ಲಿ ಕಣ್ಮರೆಯಾಗಿವೆ ; ತತ್ತ್ವಶಾಸ್ತ್ರೀಯ ಪ್ರಸ್ಥಾನಗಳು ಹೊಸ ಪ್ರಸ್ಥಾನಗಳಿಂದ ಸ್ಥಾನಪಲ್ಲಟಗೊಂಡಿವೆ ; ಕಲಾಪ್ರಕಾರಗಳು ಹೊರಹೊಮ್ಮಿ ಹಿಂದೆ ಸರಿದಿವೆ . ಆದರೆ ಮಹಾಭಾರತ ಮಾತ್ರ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ . ಬೆರಗು ಹುಟ್ಟಿಸುವಷ್ಟು ದೀರ್ಘವೂ ಆಳವೂ ಆದ ಅದರ ವ್ಯಾಖ್ಯಾನ ಪರಂಪರೆಯೂ ಮುಂದುವರಿದೇ ಇದೆ . ಮಹಾಭಾರತದ ಕಾಲಾತೀತ ಮಾಂತ್ರಿಕತೆಯ ರಹಸ್ಯವಾದರೂ ಏನು ? ನಮ್ಮ ಸುಪ್ತಪ್ರಜ್ಞೆಯ ಯಾವ ತಂತುವನ್ನದು ಮೀಟುತ್ತದೆ ? ನಿಬಿಡವಾದ ಆ ಕಥಾರಣ್ಯದಲ್ಲಿ ಸಾಗುವ ಬಗೆ ಹೇಗೆ ? ಭಾರತದ ಪ್ರಮುಖ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತಕರಲ್ಲೊಬ್ಬರಾದ ಗಣೇಶ ದೇವಿಯವರ ಈ ಕೃತಿ ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತ ಯಾಕೆ ಮಹಾಭಾರತವು ವಿವಾದಾತೀತವಾಗಿ ಭಾರತದ ರಾಷ್ಟ್ರೀಯ ಮಹಾಕಾವ್ಯವಾಗಿ ಉಳಿದಿದೆ ಎಂಬುದರ ಕಡೆ ಗಮನವನ್ನು ಸೆಳೆಯುತ್ತದೆ . ಇಂತಹ ಮಹಾಭಾರತ – ಭೂಮಕಾವ್ಯ ಮತ್ತು ಭಾರತ ರಾಷ್ಟ್ರ ಜಿ.ಎನ್.ದೇವಿ ಅನುವಾದ : ಎಂ.ಜಿ.ಹೆಗಡೆ

Reviews

There are no reviews yet.

Be the first to review “ಮಹಾಭಾರತ – ಭೂಮಕಾವ್ಯ ಮತ್ತು ಭಾರತ ರಾಷ್ಟ್ರ”

Your email address will not be published.