Description
ಆಧುನಿಕ ಭಾರತದ ಇತಿಹಾಸದಲ್ಲಿ ಜನ ಸಮುದಾಯದ ಮೇಲೆ ಗಾಂಧೀಜಿಯವರಷ್ಟು ಪ್ರಭಾವ ಬೀರಿದ; ಪರ, ವಿರೋಧದ ಚರ್ಚೆಗೊಳಗಾದ ಇನ್ನೊಬ್ಬ ವ್ಯಕ್ತಿ ಇಲ್ಲ. ಅವರು ನಿಧನರಾಗಿ ಸುಮಾರು 75 ವರ್ಷಗಳೇ ಆದರೂ ಅವರ ಬಗ್ಗೆ, ಅವರ ವಿಚಾರಗಳ ಬಗ್ಗೆ ಇಂದೂ ಚರ್ಚೆಗಳು ನಡೆಯುತ್ತಲೇ ಇರುವುದು ಅವರ ಮಹತ್ವ ಎಷ್ಟೆಂಬುದನ್ನು ಸಾರಿಹೇಳುತ್ತದೆ. ಗಾಂಧೀಜಿಯವರ ಹಾಗೂ, ಅವರ ವಿಚಾರಗಳ ಕುರಿತಾಗಿ ಎದ್ದ ಪ್ರಶ್ನೆಗಳಿಗೆ, ಭಿನ್ನಾಭಿಪ್ರಾಯಗಳಿಗೆ, ಟೀಕೆಗಳಿಗೆ ಉತ್ತರಿಸುವ ಪ್ರಾಮಾಣಿಕ ಪ್ರಯತ್ನವು ಈ ಕೃತಿಯಲ್ಲಿದೆ. ಕಥೆಗಾರರೂ ಸಾಮಾಜಿಕ ಹೋರಾಟಗಾರರೂ ಆಗಿರುವ ಶ್ರೀಎಂ.ಜಿ.ಹೆಗಡೆಯವರು, ಗಾಂಧೀಜಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು, ಕೃತಿಗಳನ್ನು ಅಧ್ಯಯನಮಾಡಿ ರಚಿಸಿರುವ ಈ ಕೃತಿಯು ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನವನ್ನು ಮಾಡುವ ಮೂಲಕ ಗಾಂಧೀಜಿಯನ್ನು ಇನ್ನಷ್ಟು ಹೆಚ್ಚಿಗೆ ಅರ್ಥಮಾಡಿಕೊಳ್ಳಲು ನೆರವಾಗಬಲ್ಲದು.
Reviews
There are no reviews yet.