ಮೊದಲ ಓದು

140.00

Add to Wishlist
Add to Wishlist
Email

Description

ಮಕ್ಕಳಿಗೆ ಬೇರೆ ಭಾಷೆಯಲ್ಲಿ ಆಕರ್ಷಕವಾದ ಪುಸ್ತಕಗಳು (ಬೋರ್ಡ್ ಬುಕ್ ) ಸಿಗುತ್ತಿದ್ದರೂ ಕನ್ನಡದಲ್ಲಿ ಅಷ್ಟು ವಿಶೇಷವಾದಂತಹಯಾವುದೇ ಪುಸ್ತಕಗಳು ದೊರಕಿರಲಿಲ್ಲ.ಈ ಸಂದರ್ಭದಲ್ಲಿಯೇ ನಮಗೆ ಪರಿಚಯವಾಗಿದ್ದು ಎಲ್ಲರ ಪುಸ್ತಕ ಪ್ರಕಾಶನ. ಇತ್ತೀಚೆಗೆ ಈ ಪ್ರಕಾಶನ ಮಕ್ಕಳಿಗಾಗಿ ರುಚಿ ಮತ್ತು ಮೊದಲುಓದು ಎಂಬ ಪುಸ್ತಕಗಳನ್ನು ಹೊರತಂದಿದೆ. ಇವನ್ನು ರಚಿಸಿದವರು ವನಿತಾ ಅಣ್ಣಯ್ಯ ಯಾಜಿ. ನೀನಾಸಂ ಮತ್ತು ಶಾಂತಿನಿಕೇತನದಲ್ಲಿ ಕಲೆ ಮತ್ತು ನಟನೆಯನ್ನು ಅಭ್ಯಾಸ ಮಾಡಿರುವ ವನಿತ ಅನೇಕ ಶಾಲೆಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಕಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು ರಚಿಸಿರುವ ಪುಸ್ತಕಗಳು ಮಕ್ಕಳಿಗೆ ತುಂಬಾ ಆಪ್ತವಾಗಲು ಅನೇಕ ಕಾರಣಗಳಿವೆ. ಈ ಪುಸ್ತಕಗಳನ್ನು ವನಿತಾಅವರು ರಚಿಸಿದ್ದು ತಮ್ಮ ಮಗಳು ಸುರಗಿಗಾಗಿ. ಮಗಳ ಕಲಿಕೆಯ ದೃಷ್ಟಿಯಿಂದ ಮಗಳಿಗೋಸ್ಕರವೇ ತಾವೇ ಕೈಯಲ್ಲಿ ಚಿತ್ರಿಸಿ ಬಟ್ಟೆಯ ಮುಖಪುಟವನ್ನು ಹೊದಿಸಿ ತಯಾರು ಮಾಡಿದ ಪುಸ್ತಕಗಳು ಇವು. ಚಿಕ್ಕ ಮಕ್ಕಳ ಪುಟ್ಟ ಬೆರಳುಗಳಿಗೆ ಪುಸ್ತಕದ ಪುಟಗಳನ್ನು ತಿರುಗಿಸುವುದುಸುಲಭವಾಗಲಿ ಎನ್ನುವ ಉದ್ದೇಶದಿಂದ ಪುಸ್ತಕದ ಪುಟಗಳನ್ನು ರಟ್ಟಿನಲ್ಲಿಮುದ್ರಿಸಲಾಗಿದೆ. ವರ್ಣರಂಜಿತ ಚಿತ್ರಗಳು ಮಕ್ಕಳ ಗಮನವನ್ನು ತಕ್ಷಣವೇ ಸಳೆಯುತ್ತವೆ.

Reviews

There are no reviews yet.

Be the first to review “ಮೊದಲ ಓದು”

Your email address will not be published.