Description
ಪ್ರಕೃತಿ ಪ್ರಕಾಶನವು ಈಗ ಎರಡನೆಯ ಪುಸ್ತಕದ ಪ್ರಕಟನೆಗೆ ಸಜ್ಜಾಗಿದೆ. ನಾಗಶ್ರೀ ಶ್ರೀರಕ್ಷ ಬರೆದ ‘ನಕ್ಷತ್ರ ಕವಿತೆಗಳು’ ಕವನ ಸಂಕಲನವು ಇದೇ ತಿಂಗಳು ಬಿಡುಗಡೆಯಾಗಲಿದೆ. ಕೆಂಡಸಂಪಿಗೆಯಲ್ಲಿ ಶುರುವಾದ ನಕ್ಷತ್ರ ಕವಿತೆಯ ಸರಣಿಯು ಓದುಗರಲ್ಲಿ ಅನೇಕ ಬಗೆಯ ಅಲೆಗಳನ್ನು ಎಬ್ಬಿಸಿತು. ಕೆಂಡಸಂಪಿಗೆ ನಿಂತ ಮೇಲೆಯೂ ಈ ಸರಣಿ ಮುಂದುವರೆಯಿತು. ಕವಿಯೂ, ಅವರ ಕವಿತೆಗಳ ಪ್ರಥಮ ಸಂಕಲನವು ಎಲ್ಲಿ ತಲುಪುವೆವೋ ಎಂಬುದು ತಿಳಿಯದೆ ಹೊಸ್ತಿಲಲ್ಲಿ ನಿಂತಿರುವ ಕಾಲದ ಇಂಥ ವಿಕಟ ಸನ್ನಿವೇಶದ ಮುಂದೆ ಯಾವ ಮಾತನ್ನಾಡಿದರೂ ವ್ಯರ್ಥವೆನಿಸುತ್ತಿದೆ. ನಕ್ಷತ್ರ ಕವಿತೆಗಳು ನಮ್ಮೆಲ್ಲರ ಹಗಳಿರುಳುಗಳಲ್ಲಿ ಮಿನುಗುತ್ತಿರಲಿ.
‘ರಾಮು ಕವಿತೆಗಳು’ ಸಂಕಲನವು ಓದುಗರಲ್ಲಿ ನಮ್ಮಿಂದ ಹುಟ್ಟಿಸಿದ ನಿರೀಕ್ಷೆಯನ್ನು ‘ನಕ್ಷತ್ರ ಕವಿತೆಗಳ’ ಮೂಲಕ ಕಾಪಿಟ್ಟುಕೊಳ್ಳುತ್ತಿದ್ದೇವೆ ಎಂಬ ನೆಮ್ಮದಿ ನಮ್ಮದು. ಇದುವರೆಗೆ ದೊರೆತ ಸಹೃದಯರ ಸ್ಪಂದನೆಯನ್ನು ಗೌರವಿಸುತ್ತ ‘ನಕ್ಷತ್ರ ಕವಿತೆ’ಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.
– ಪ್ರಕೃತಿ ಪ್ರಕಾಶನ
Reviews
There are no reviews yet.