Sale!

ನಕ್ಷೆಗೆ ಎಟುಕದ ಕಡಲು

288.00

Add to Wishlist
Add to Wishlist
Email

Description

ಆಧುನಿಕ ಕನ್ನಡ ಸಾಹಿತ್ಯದಲ್ಲಿ ವಸಂತ ದಿವಾಣಜಿ ಅವರ ಬರವಣಿಗೆಯು ನೆಲದ ಮರೆಯ ನಿಧಾನದ ಹಾಗೆ. ಈ ಮಾತುಗಾರನ ಹಲವು ವಿಚಾರಗಳು ಕನ್ನಡ ಸಾಹಿತ್ಯದ ಕೆಲವು ಮೂಲ ಪ್ರಮೇಯಗಳನ್ನೇ ಪ್ರಶ್ನಿಸುತ್ತವೆ ಮತ್ತು ಗಂಭೀರವಾದ ಪರಿಗಣನೆಗೆ ಹೊಸ ಸಂಗತಿಗಳನ್ನು ಮಂಡಿಸುತ್ತದೆ.

ಅವರದು ಮಕರಂದ ಮಾರ್ಗ, ಜೇನು ಹುಳುಗಳು ಹಲವು ಹೂಗಳ ರಸವನ್ನು ಮಧುವಾಗಿ ಮಾರ್ಪಡಿಸಿದ ಬಳಿಕ ಆ ಹೂಗಳು ತಮ್ಮ ಅಸ್ಮಿತೆಯನ್ನು ಕಳೆದುಕೊಂಡು ಮಧುವಾಗಿ ಬಿಟ್ಟಿರುತ್ತದೆ. ಒಂದು ಹನಿ ಜೇನಿನಲ್ಲಿ ಎಷ್ಟು ಹೂಗಳ ಮಕರಂದ ಇರುವುದೆಂದು ಯಾರು ಬಲ್ಲರು! ಇದು ದಿವಾಣಜಿಯವರ ಜೀವನದರ್ಶನವನ್ನೇ ಹಿಡಿದಿಡುತ್ತದೆ, ಆ ಪದದ ನಿಜವಾದ ಅರ್ಥದಲ್ಲಿ ಅನಿಕೇತನ ಪ್ರಜೆಯನ್ನು ಬೆಳೆಸಿಕೊಂಡವರು.

ಅವರ ಪ್ರಕಾರ ಸಾಹಿತ್ಯಕ್ಕೆ ದೇಶ, ಕಾಲ, ಸಂದರ್ಭ, ಭಾಷೆಗಳ ಬಂಧನ ಮತ್ತು ಮಿತಿಗಳು ಇಲ್ಲ, ಇರಬಾರದು, ಸಾಹಿತ್ಯದ ಸಂವಹನಕ್ಕೆ ಸಂಸ್ಕೃತಿ ನಿರ್ದಿಷ್ಟವಾದ ಲಕ್ಷಣಗಳು ಅಡ್ಡಿಯಾಗುತ್ತವೆಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ.

ಇಲ್ಲಿಯ ಬರಹಗಳನ್ನು ನಿಧಾನವಾಗಿ ನಿಂತು ನಿಂತು ಓದುವದರಿಂದ ನನಗೆ ಬಹಳ ಪ್ರಯೋಜನ ಇದೆ. ಇವು ಒಳ್ಳೆಯ ಮನುಷ್ಯ, ಬಹುಶ್ರುತನಾದ ಮನುಷ್ಯ ಮತ್ತು ಜೀವನವನ್ನು ಗ್ರಹಿಸಿದ ಮೇಧಾವಿಯೊಬ್ಬರು ಒಂದುಗೂಡಿ ಬರೆದ ಬರಹಗಳು.

-ಎಚ್.ಎಸ್. ರಾಘವೇಂದ್ರ ರಾವ್

(ಪ್ರಸ್ತಾವನೆಯಿಂದ)

 

Reviews

There are no reviews yet.

Be the first to review “ನಕ್ಷೆಗೆ ಎಟುಕದ ಕಡಲು”

Your email address will not be published.