ನಮ್ಮ ಮನೆಗೂ ಬಂದರು ಗಾಂಧೀಜಿ! (ನೆನಪುಗಳು)

150.00

Add to Wishlist
Add to Wishlist
Email

Description

ಲೇಖಕರು: ರಾಜೇಶ್ವರಿ ತೇಜಸ್ವಿ
ಪ್ರಕಾಶನ: ಅಭಿನವ, ಬೆಂಗಳೂರು

ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಷ್ಕೃತ ಕೃತಿ
ಈ ವರೆಗೆ ಮೂರು ಮುದ್ರಣಗಳನ್ನ ಕಂಡಿದೆ.


ನಾನು ಸಣ್ಣವಳಿದ್ದಾಗ ಅಮ್ಮನ ಜೊತೆಯಲ್ಲಿ ಬೆಂಗಳೂರಿನಿಂದ ಸೋಮವಾರಪೇಟೆಗೆ ಬಸ್ಸಿನಲ್ಲಿ ಹೋಗಿಬರುತ್ತಿದ್ದೆವು. ಕೆಲವೊಂದು ಸಲ ಅಣ್ಣ ವಾಸುನೂ ಸೇರಿಕೊಳ್ಳುತ್ತಿದ್ದ. ಆ ಪ್ರಯಾಣ ಒಂಥರ ಮಜವಿರುತ್ತಿತ್ತು. ಅವು ಲಕಟಾರಿ ಬಸ್ಸುಗಳು. ಕಾಡಿನ ದಾರಿಯಲ್ಲಿ ಸಂಚಾರ, ಪ್ರಯಾಣ, ಮೂರು ಕಡೆ ಬಸ್ಸು ಬದಲಿಸಬೇಕಿತ್ತು. ಅದೂ ಖುಷಿ ಕೊಡುತ್ತಿತ್ತು. ಮಕ್ಕಳಾದ ನಮಗೆ ಬಸ್ಸು ಹತ್ತೋದು ಇಳಿಯೋದು ಮಜವೇ.
ಲಟಕಾರಿ ಬಸ್ಸುಗಳ ಬಗ್ಗೆ ಚೂರು ಹೆಚ್ಚಿಗೆ ವಿವರಣೆ ಕೊಟ್ಟರೆ ನಿಮ್ಮ ಲಹರಿ ಇನ್ನೂ ರೋಚಕವಾಗಿರುತ್ತದೆ.
ಲಟಕಾರಿ ಬಸ್ಸುಗಳು ಎಂದರೆ ಎರಡನೆಯ ಮಹಾಯುದ್ಧದಲ್ಲಿ ಹರಾಜಾಗಿ ಬಂದಿದ್ದ ಫೋರ್ಡ್ ಚವರ್‍ಲೆಟ್ ಡಾಡ್ಜುಗಳಿಗೆ ಮರದ ಬಾಡಿ ಕಟ್ಟಿರುತ್ತಿತ್ತು. ಚಪ್ಪರದಂತೆ ಕಂಬಗಳ ಮೇಲೆ ನಿಂತ ಚಾವಣಿÉ, ಮೂರು ವಿಭಾಗ ಹೊಂದಿರುತ್ತಿದ್ದವು. ಮೊದಲಿನದು ಡ್ರೈವರನ ಪಕ್ಕದ್ದು ಎರಡು ಮುಂಭಾಗದ ಸೀಟುಗಳು ದೊಡ್ಡ ತೋಟದ ಸಾಹುಕಾರರುಗಳಿಗೇ ಮೀಸಲಿಟ್ಟವು. ಅವರ ಹಿಂದೆ ಅವರ ಹೆಂಗಸರಿಗೆ ಮೀಸಲಿಟ್ಟ ಒಂದು ಸಾಲು, ಅವರ ಹಿಂದಿನ ಭಾಗ Qaudrangleನಲ್ಲಿ ಉಳಿದವರಿಗೆ ಸಾಮಾನ್ಯರಿಗೆ ಅವಕಾಶ. ನಾವು ಮೊದಲೆರಡು ಭಾಗದಲ್ಲಿ ಎಂದಿಗೂ ಕೂರಲಿಲ್ಲ.

Reviews

There are no reviews yet.

Be the first to review “ನಮ್ಮ ಮನೆಗೂ ಬಂದರು ಗಾಂಧೀಜಿ! (ನೆನಪುಗಳು)”

Your email address will not be published.