ನನ್ನ ರಸಯಾತ್ರೆ

75.00

Add to Wishlist
Add to Wishlist
Email

Description

ನನ್ನ ತಾಯಿಯು ನನ್ನ ಸಾಧನೆಗೆ ಬೇಕಾದ ಎಲ್ಲ ಅನುಕೂಲತೆಗಳನ್ನು ಒದಗಿಸಿಕೊಡುತ್ತಿದ್ದಳು. ನಾನು ಕೋಣೆಯಲ್ಲಿ ಕುಳಿತು ಸಾಧನೆಯನ್ನು ಮಾಡುತ್ತಿರುವಾಗ ಒಳಗೆ ಯಾರನ್ನೂ ಬಿಡದೆ, ನನಗೆ ಆಯಾಸವಾಗಿರಬಹುದೆಂದು ಅನಿಸಿದಾಗಲೆಲ್ಲ ತಾನೇ ಹಾಲು, ಹಣ್ಣು, ಹಂಪಲಗಳನ್ನು ನನಗಾಗಿ ಒಳಗೆ ತಂದುಕೊಡುತ್ತಿದ್ದಳು. ನನ್ನ ತಾಯಿಯು ಕರುಣಾಮೂರ್ತಿಯಾಗಿದ್ದಳು. ನವನೀತಕ್ಕಿಂತ ಕೋಮಲವಾದ ಆಕೆಯ ಹೃದಯ ಬೇರೆಯವರ ದುಃಖದ ತಾಪಕ್ಕೆ ಕರಗಿ, ಕಷ್ಟದಲ್ಲಿದ್ದವರಿಗೆ ನೆರವಾಗುವುದು ಆಕೆಯ ಸ್ವಭಾವವಾಗಿತ್ತು. ಮಾಡುವ ಕೆಲಸವನ್ನೆಲ್ಲ ಶಿವಾರ್ಪಣಭಾವದಿಂದ ಮಾಡುತ್ತಿದ್ದಳು.
-ಮಲ್ಲಿಕಾರ್ಜುನ ಮನ್ಸೂರ್
(ಒಳಪುಟಗಳಿಂದ)

ಮಲ್ಲಿಕಾರ್ಜುನ ಮನ್ಸೂರ್ ಅವರು ಮಹಾದೇವಿಯಕ್ಕನ ‘ಅಕ್ಕ ಕೇಳವ್ವ, ಅಕ್ಕಯ್ಯ ನಾನೊಂದು ಕನಸ ಕಂಡೆ’ ಎಂಬ ವಚನ ಹಾಡಿದ್ದನ್ನು ಕೇಳಿ ನಾನು ಅಪೂರ್ವ ರೀತಿಯ ರಸಾನುಭವ ಪಡೆದಿದ್ದೇನೆ. ಸರಳವಾದ ಭಾಷೆಯನ್ನು ಬಳಸಿಕೊಂಡ ಆ ವಚನದ ಸೊಗಸಾದ ಗಾಯನದ ಮೂಲಕ ಮಹಾದೇವಿಯಕ್ಕನ ಮಧುರವಾದ ಆಧ್ಯಾತ್ಮಿಕ ಮನೋಲೋಕವನ್ನು ಪ್ರವೇಶಿಸಿದ ಅನುಭವವಾಯಿತು.
-ಕುವೆಂಪು
(‘ನನ್ನ ರಸಯಾತ್ರೆ’ ಪ್ರಕಟವಾಗುತ್ತಿದೆ ಎಂಬ ವಿಷಯ ತಿಳಿದಾಗ ಎರಡು ನಿಮಿಷ ಮೌನವಾಗಿ ಹೇಳಿದ ಮಾತುಗಳು)

Reviews

There are no reviews yet.

Be the first to review “ನನ್ನ ರಸಯಾತ್ರೆ”

Your email address will not be published.