Description
‘ನೀರೊಳಗೆ ಮಾಯದ ಜೋಳಿಗೆ’ ಕವಿ ರಾಜೇಂದ್ರ ಪ್ರಸಾದ್ ಅವರ ಆರನೇ ಕವನ ಸಂಕಲನ. ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರು ಪ್ರಸ್ತಾಪಿಸಿರುವಂತೆ ’ಕವಿತೆ ಎನ್ನುವುದು ಎಲ್ಲರೂ ಗುನುಗುವ, ಹಾಡುವ, ಕುಣಿಯುವ, ಜಡಗೊಂಡ ಜೀವವ ಬಡಿದೆಬ್ಬಿಸುವ ಬೆಳಕಾಗಬೇಕು ಎನ್ನುವ ಈ ಕವಿ, ಬೋದಿಲೇರ್ ಮಾದರಿಯನ್ನು ತಮ್ಮ ಕವಿತೆಯೊಂದರಲ್ಲಿ ಬಿಡಿಸಿಡುವ ಮೂಲಕ ತಮ್ಮ ಕಾವ್ಯದ ಹಾದಿಯನ್ನು ಸ್ಪಷ್ಟಪಡಿಸಿದ್ದಾರೆ’ ಎನ್ನುತ್ತಾರೆ.
ವಚನ ಸಾಹಿತ್ಯದ ನುಡಿಗಟ್ಟು ಮತ್ತು ಚಿಂತನೆಗಳು ಆಳದಲ್ಲಿ ಆವರಿಸಿವೆ. ಕಳೆದುಹೋದ ಲೋಕವನ್ನು ವರ್ತಮಾನದಲ್ಲಿ ಮತ್ತೆ ಕಡೆಯುತ್ತಾ ಪ್ರತಿಮಾನಿಷ್ಟವಾದ ಕವಿತೆಗಳನ್ನು ಬರೆಯುತ್ತಾ ಇರುವ ರಾಜೇಂದ್ರ ಪ್ರಸಾದ್ ತಮ್ಮ ಕವಿತೆಗಳ ಕುರಿತು ಸ್ವತಃ ಹೇಳಿಕೊಳ್ಳುವುದು ಹೀಗೆ: ’ಕವಿತೆಯನ್ನು ಕಾಣಲು ಶುರುವಾಗಿಬಿಟ್ಟರೆ ಲೋಕ ತಾನು ಬೇರೆಯಾಗಿ ಕಾಣುವುದೇ ಇಲ್ಲ ಈ ಎರಡೊಂದಾದ ಬಳಿಕ ಎಲ್ಲ ಮಾತುಗಳೂ ವೇಷ, ಹೀಗೆ ಉಳಿದುಹೋದ ಮಾತುಗಳೇ ಇಲ್ಲಿ ನಾನಾ ತಲೆಬರಹಗಳಲ್ಲಿ ಮೈವೆತ್ತಿ ನಿಂತಿವೆ.’
Reviews
There are no reviews yet.