Sale!

ನೆನಪೇ ಸಂಗೀತ

(1 customer review)

180.00 170.00

Add to Wishlist
Add to Wishlist
Email

Description

ತಮ್ಮ ಸುಮಧುರ ಗಾಯನದಿಂದ ನಾಡಿನ ಮನ ಗೆದ್ದವರು ವಿದ್ಯಾಭೂಷಣರು. ದಾಸರ ಪದಗಳ ಗಾಯನಕ್ಕೆ ತಮ್ಮದೇ ಅನನ್ಯ ಕೊಡುಗೆ ನೀಡಿದ ಅವರು ಸನ್ಯಾಸ ತೊರೆದು ಸಂಸಾರಕ್ಕೆ ಪ್ರವೇಶಿಸಲು ಹಿಂದೇಟು ಹಾಕದೇ ಒಂದು ಕಾಲಘಟ್ಟದಲ್ಲಿ  ವಿದ್ಯಾಭೂಷಣರ ಕ್ರಾಂತಿಕಾರಕ ನಿಲುವು ಕರ್ನಾಟಕದಾದ್ಯಂತ ಮನೆ ಮಾತಾಗಿತ್ತು. ವಿದ್ಯಾಭೂಷಣರ ಬದುಕು ಮತ್ತು ಸಂಗೀತ ಈ ಪುಸ್ತಕದಲ್ಲಿ ಸೊಗಸಾಗಿ ಮೂಡಿ ಬಂದಿದೆ.

ಸಂಗೀತದಲ್ಲಿ ಆಸಕ್ತಿ ಮತ್ತು ಸಂಗೀತದ ಕುರಿತು ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಪತ್ರಕರ್ತ ಜಗದೀಶ ಕೊಪ್ಪ ಅವರು ಈ ಕೃತಿಯ ಬಗ್ಗೆ ಹೀಗೆ ಬರೆದಿದ್ದಾರೆ-

ಅತ್ಯಂತ ಪ್ರಾಮಾಣಿಕವಾಗಿ, ಯಾವುದೇ ರಾಗ ದ್ವೇಷಗಳಿಲ್ಲದೆ, ತಮ್ಮೊಳಗಿನ ಭಾವಗಳನ್ನು ಅತ್ಯಂತ ಸಂಯಮದಿಂದ ನವಿರಾದ ಭಾಷೆಯಲ್ಲಿ ವಿದ್ಯಾಭೂಷಣರು ಹಿಡಿದಿಟ್ಟಿರುವುದು ಈ ಕೃತಿಯ ವಿಶೇಷ.
ಆತ್ಮಚರಿತ್ರೆಗಳೆಂದರೆ, ಆತ್ಮವಂಚನೆಯ ದಾಖಲೆಯ ಕೃತಿಗಳು ಎಂಬ ಸ್ಥಿತಿ ತಲುಪಿರುವ ಈ ದಿನಗಳಲ್ಲಿ ಈ ಕೃತಿ ವಿಭಿನ್ನವಾಗಿ ನಿಲ್ಲುತ್ತದೆ.

ಕೃತಿ ಆಯ್ದ ಭಾಗ-

ಒಬ್ಬ ಭಯಂಕರ ಸಮಾಜಸುಧಾರಕನಾಗಿ ಹೊರಹೊಮ್ಮಿ ಜನತೆಯ ಉದ್ದಾರ ಮಾಡಿಬಿಡಬೇಕೆಂಬ ಉದ್ದೇಶವೇ, ಮಹತ್ವಾಕಾಂಕ್ಷೆಯೇ ನನಗಿರಲಿಲ್ಲ ಅದು ನನ್ನಿಂದ ಆಗುವ ಹೋಗುವ ಸಂಗತಿಯೇ ಆಗಿರಲಿಲ್ಲ. ಒಬ್ಬ ಜನ ಸಾಮಾನ್ಯನ, ಇನ್ನೂ ಸ್ವಲ್ಪ ಮರ್ಯಾದೆ ಕೊಟ್ಟು ಹೇಳುವುದಾದರೆ ಶ್ರೀಸಾಮಾನ್ಯನ ಸರ್ವೇ ಸಾಧಾರಣವಾದ ಜೀವನ್ಮುಖಿಯಾದ ಆಸೆ ಆಕಾಂಕ್ಷೆಗಳು ನನ್ನ ಮೆಚ್ಚಿನ ಮಡದಿ-ಬೆಚ್ಚನೆ ಮನೆ-ಮತ್ತೆ ವೆಚ್ಚಕ್ಕೆ ಹೊನ್ನು, ಇಷ್ಟೇ ನನ್ನ ಜೀವನದ ಗುರಿ. ಎಲ್ಲರಂತೆಯೇ ಸಂಗೀತ-ಸಾಹಿತ್ಯ ಸಾಲದೇ? ಆದರೆ ಇದೆಲ್ಲವೂ ಸಾತ್ವಿಕವಾಗಿ ಸಹಜವಾಗಿ ಬಂದುದಾಗಿರಲಿ ಎಂಬ ಸಣ್ಣ ಆದರ್ಶ, ಇವೇ ನನ್ನ ಗುರಿಯಾಗಿದ್ದುದು. ನಾನು ಪೀಠದಲ್ಲಿದ್ದು ಗುಟ್ಟಾಗಿಯೋ, ಅಥವಾ ಸ್ವಲ್ಪ ಮರ್‍ಯಾದೆಗೆಟ್ಟರೆ ಗೊತ್ತಾಗಿ, ಇದನ್ನು ಪಡೆಯಬಹುದಿತ್ತು. ಅದಕ್ಕಾಗಿ ಇಷ್ಟೊಂದು ಮಾನಸಿಕ ತೊಳಲಾಟವೇಕೆ? ಆದರೆ ನನ್ನ ಮನ ಒಪ್ಪಲೇ ಇಲ್ಲ. ನಮ್ಮ ತಂದೆಯವರಲ್ಲಿದ್ದ ಸಮಾಜದ ಕುರಿತಾದ ಅಂದರೆ, ಮೌಲ್ಯಗಳ ಕುರಿತಾದ ಗೌರವ ಬುದ್ದಿ ನನ್ನಲ್ಲಿದ್ದ ಆದರ್ಶ ಬದುಕಿನ ಕಲ್ಪನೆ, ನನ್ನನ್ನು ಹಾಗೆ ಮಾಡಲು ಬಿಡಲಿಲ್ಲ ಅದು ಹಿರಿಯರ ಪುಣ್ಯ.

1 review for ನೆನಪೇ ಸಂಗೀತ

  1. PADMANABHA RAO

    ಶ್ರೀ ವಿದ್ಯಾಭೂಷಣತೀರ್ಥ ಶ್ರೀಪಾದರು ಡಾ. ಮಿ. ವಿದ್ಯಾಭೂಷಣ್ ಆದರೂ ಅವರ ದೈವದತ್ತ ಸಂಗೀತ ಅವರನ್ನು ತೊರೆದಿಲ್ಲ. ಅವರು ಸ್ವಾಮಿಗಳು ಎಂದೇ ಪೂಜ್ಯ ಭಾವನೆಯಿಂದ ಅವರ ಎಲ್ಲ ಸಿಡಿಗಳನ್ನೂ ಸಂಗ್ರಹಿಸಿದ್ದೇನೆ. ಅವರ ರಾಗಾಲಾಪ ನನಗೆ ಹಿಡಿಸುವುದಿಲ್ಲ. ಅವರು ಹರಿದಾಸರ ಕೃತಿಗಳನ್ನು ಹೆಕ್ಕಿ ತೆಗೆದು ಹಾಡಿ ರಂಜಿಸಿದ್ದು ಸಾಮಾನ್ಯವೇನಲ್ಲ. ಈಗ ಮೊದಲು ಅವರು’ ಕೆಂಡಸಂಪಿಗೆ’ ಯಲ್ಲಿ ಬರೆದಿದ್ದ ಆತ್ಮಕತೆ ‘ ನೆನಪೇ ಸಂಗೀತ’ ಪುಸ್ತಕ ಪ್ರಕಟವಾಗಿದೆ. ಅವರ ಅಭಿಮಾನಿಗಳು ಯಾವ ಆಶ್ರಮದಲ್ಲಿ ಅವರಿದ್ದರೂ ಆಲಿಸಿ ಆನಂದಿಸುತ್ತಾರೆ. ಮತ್ಯಾಕೆ ಅದೇ ಆಶ್ರಮ ನಾಮ? ಇದು ಬ್ರಾಂಡಿಂಗ್ ಇರಬಹುದು, ಮಾರ್ಕೆಟಿಂಗಿನಲ್ಲಿ ಅತಿ ದಡ್ಡನಾದ ನನಗೆ ಹೇಗೆ ತಿಳಿದೀತು ಈ ಮರ್ಮ? ಪತ್ರಕರ್ತರಂತೂ ಅವರನ್ನು ‘ ವೀರಸನ್ಯಾಸಿ’ ಎಂದೇ ಹಾಡಿ ಹೊಗಳಿದರು. ಮುಗ್ಧ ಹೆಣ್ಣುಮಕ್ಕಳು ಈಗಲೂ ಅವರಿಗೆ ಪಾದಾಭಿವಂದನೆ ಮಾಡುತ್ತಾರೆ, ಅವರ ನಾದಮೋಡಿಗೆ!

Add a review

Your email address will not be published. Required fields are marked *