Sale!

ನೆನಪು ಅನಂತ

162.00

Add to Wishlist
Add to Wishlist
Email

Description

…ಮೇಷ್ಟ್ರು ದಿನವಿಡೀ ನಿರಂತರವಾಗಿ ಹನಿಗಡಿಯದ ವಿಚಾರಧ್ಯಾನದಲ್ಲಿದ್ದವರು. ಸದಾ ಮನೆ ತುಂಬಾ ಭೇಟಿಗೆ ಬರುವ ಜನ, ಮಾತು ಚರ್ಚೆಗಳೇ ತುಂಬಿದ್ದರೂ ಗಂಭೀರ ವಿಚಾರಗಳಾಚೆ ಒಂದು ಕ್ಷಣವೂ ಅವರು ಸಮಯ ಕಳೆದವರಲ್ಲ. ಮೇಡಂ ಇಲ್ಲಿ ಬರೆದುಕೊಂಡಂತೆ ಅವರು ಎಲ್ಲರಂತೆ ಒಬ್ಬ ಗೃಹಿಣಿ. ಪ್ರೀತಿಸಿ ಮದುವೆಯಾದ ಅವರಿಗೂ ಇಂತಹ ಜೀನಿಯಸ್ ಬರಹಗಾರ ಪತಿಯೊಡನೆ ಸಂಸಾರ ನಡೆಸುವುದು ಸರಳ ವಿಚಾರವಲ್ಲ. ಮೇಷ್ಟ್ರು ಸದಾ ಸಮಾನತೆಯ ಬುನಾದಿಯ ಮೇಲಿನ ಪ್ರಜಾಪ್ರಭುತ್ವದ ಆದರ್ಶ ಸಮಾಜದ ಕನಸುಗಾರರು. ಸಂಸಾರ ಲೌಕಿಕ ಜವಾಬ್ದಾರಿಯನ್ನು ಬೇಡುವ ವಾಸ್ತವ. ಮೇಷ್ಟರೊಡನೆ ಅವರ ಓದು ಬರಹದ ನಿರಂತರ ಧ್ಯಾನಗಳಿಗೆ ತೊಂದರೆ ಆಗದಂತೆ ಕುಟುಂಬವನ್ನು ಬೆಳೆಸಿದ ಜೀವಪ್ರೀತಿಯ ಕಥನವಿದು…

ಎಸ್.ಆರ್. ವಿಜಯಶಂಕರ

…ಪ್ರಸಿದ್ಧರ ಪತ್ನಿಯ ಏಳುಬೀಳುಗಳ ಮಾಮೂಲಿ ಕಥನವಾಗದೆ, ಏನೆಂಥ ಹೊತ್ತಿನಲ್ಲೂ ಹೆಣ್ಣಿನ ಆಯ್ಕೆ ಮತ್ತು ಆದ್ಯತೆಗಳು ಕುಟುಂಬವನ್ನು ಉಳಿಸಿ, ಬೆಳೆಸುತ್ತ, ಪೊರೆಯುವುದೇ ಆಗಿರುತ್ತವೆ ಎನ್ನುವುದನ್ನು ಈ ಕಥನ ಹೇಳುತ್ತದೆ. ಆದರೆ, ಇದು ಮಿತಿಯಲ್ಲ, ಇದಕ್ಕೂ ಕೊನೆಯಿಲ್ಲದ ತಾಳ್ಮೆ ಮತ್ತು ಶಕ್ತಿ ಬೇಕು. ಇದರಾಚೆಗೆ ಅನ್ನೋನ್ಯ ಸಖ್ಯದ ಸಂಭ್ರಮ ಮತ್ತು ಬಿಕ್ಕಟ್ಟುಗಳನ್ನೂ ಇದು ಧ್ವನಿಸುತ್ತದೆ… ಗೃಹಸ್ಥ ಧರ್ಮದ ಗಂಧ ತೇಯುವುದು ಹೆಣ್ಣಿನ ಮೂಲಧರ್ಮ ಎಂದು ಹೇಳಲಾಗುತ್ತದೆ. ಅದು ಕರಾರಲ್ಲ, ಸಾಮಾಜಿಕ ಹೇರುವಿಕೆಯ ಕಾರಣಕ್ಕಾಗಿ ಮಾತ್ರ ನಿಭಾಯಿಸುವಂಥದ್ದಲ್ಲ. ಅದನ್ನು ಹೆಣ್ಣು ತನಗೆ ಬೇಕಾಗಿ, ಕೊನೆಯಿಲ್ಲದ ಪ್ರೀತಿ ಮತ್ತು ತನ್ಮಯತೆಯಲ್ಲಿ ನಿಭಾಯಿಸುತ್ತಾಳೆ. ಅದಕ್ಕೆ ಲೋಕದ ಮನ್ನಣೆ ಈ ಕಾರಣಕ್ಕಾಗಿ ಸಲ್ಲಬೇಕು ಎಂದು ಎಸ್ತರ್ ಅವರ ಈ ನಿರೂಪಣೆ ಹೆಣ್ಣಿನ ಮೆಲುವಾಗಿಯೂ ಗಟ್ಟಿಯಾದ ವಿಶಿಷ್ಟ ಶೈಲಿಯಲ್ಲಿ ಒತ್ತಾಯಿಸುತ್ತದೆ.

ಎಂ. ಎಸ್. ಆಶಾದೇವಿ

Reviews

There are no reviews yet.

Be the first to review “ನೆನಪು ಅನಂತ”

Your email address will not be published.