Description
ಕವಿ ರಂಗಮ್ಮ ಹೊದೇಕಲ್ ಅವರ ಕವನ ಸಂಕಲನ. ರಂಗಮ್ಮ ಹೊದೇಕಲ್ ತಮ್ಮ ಚೆಂದದ ಕೈ ಬರಹದ ಮೂಲಕ ಈಗಾಗಲೇ ನಾಡಿನಾದ್ಯಂತ ಚಿರಪರಿಚಿತ ಹೆಸರು. ನೋವೂ ಒಂದು ಹೃದ್ಯ ಕಾವ್ಯ ಅನ್ನುವ ರಂಗಮ್ಮ ಹೊದೇಕಲ್ ರವರ ಕವನ ಸಂಕಲನ ಅವರ ಸುಂದರ ಕೈಬರಹದಲ್ಲಿಯೇ ಪ್ರಕಟಗೊಂಡಿರುವ ಕಾರಣ, ಇಲ್ಲಿಯ ಕವಿತೆಗಳು ಮತ್ತಷ್ಟು ಆಪ್ತವಾಗುತ್ತವೆ. ಪುಟ್ಟ ಪುಟ್ಟ ಹನಿಯೊಳಗೆ ಇಡಿಯ ಬದುಕೇ ಅಡಕಗೊಂಡಿದೆ. ಗಾಯಗಳನ್ನು ಯಾವೊತ್ತೂ ತೋರಿಸಬಾರದು, ಗಾಯ ಎಷ್ಟೇ ಇರಲಿ ಬದುಕು ಕವಿತೆಯನ್ನು ದಯಪಾಲಿಸಿದರಷ್ಟೇ ಸಾಕು ಅನ್ನುವುದು ಅವರ ವಿನಮ್ರ ಪ್ರಾರ್ಥನೆ. ಕವಿತೆ ಮಾತ್ರ ನೋವು ಮೀರುವ ಹಾದಿಯಾಗಬಲ್ಲದು ಅನ್ನುವಂತದ್ದು ಇಲ್ಲಿಯ ಕವಿತೆಗಳ ಹೂರಣ.
Reviews
There are no reviews yet.