Description
ಕಥೆಗಾರ ಹಾಗೂ ಅನುವಾದಕ ಬಸು ಬೇವಿನಗಿಡದ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಬೇಂದ್ರೆ ಕಾವ್ಯ ಪ್ರಬಂಧ ಮಂಡನೆ ಮಾಡಿ ಪಿಎಚ್ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ತಾಯವ್ವ, ಬಾಳೆಯ ಕಂಬ, ಹೊಡಿ ಚಕ್ಕಡಿ, ಉಗುಳುಬುಟ್ಟಿ , ನೆರಳಿಲ್ಲದ ಮರ, ಬೀಳದ ಗಡಿಯಾರ (ಕಥಾ ಸಂಕಲನಗಳು), ಕನಸು, ಇಳೆಯ ಅರ್ಥ (ಕವನ ಸಂಕಲನಗಳು), ದಕ್ಕದ ಕಾಡು (ಅನುವಾದಿತ ಕಥೆಗಳ ಸಂಕಲನ) ಬಿ.ಎ. ಸನದಿ (ಜೀವನಚಿತ್ರ) , ನಾಳೆಯ ಸೈರ್ಯ, ಓಡಿ ಹೋದ ಹುಡುಗ (ಮಕ್ಕಳ ಕಾದಂಬರಿಗಳು), ಹಕ್ಕಿಗಮನದ ದಾರಿ, ಕಲ್ಲುಸಕ್ಕರೆ, ಕಾಲದ ಕನ್ನಡಿ (ವಿಮರ್ಶೆ ಸಂಕಲನಗಳು), ಇವರ ನೆರಳಿಲ್ಲದ ಮರ, ಓಡಿ ಹೋದ ಹುಡುಗ ಹಾಗೂ ಭಾರತೀಯ ಸಮಕಾಲೀನ ಕಥೆಗಳು (ಅನುವಾದಿತ ಕೃತಿ) ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ದೊರೆತಿದೆ. ಕಮಲಾದೇವಿ ಚಟ್ಟೋಪಾಧ್ಯಾಯ, ಹಸಿರು ಕಾಡಿನ ಗೆಳೆಯರು, ನಮ್ಮ ಮರ, ಸ್ವಾತಂತ್ಯ್ರ ಚಳವಳಿ ಹಾಗೂ ಭಾರತೀಯ ಮುಸ್ಲಿಮರು, ಸಾಮರಸೆಟ್ ಮಾಮ್ ಕಥೆಗಳು, ಭಾರತೀಯ ಸಮಕಾಲೀನ ಕಥೆಗಳು (ಅನುವಾದಿತ ಕೃತಿಗಳು) ಮಕ್ಕಳ ಹೊಸ ಕಾವ್ಯ (ಸಂಪಾದನೆ), ಪ್ರಶಸ್ತಿ-ಗೌರವಗಳು: ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಪುರಸ್ಕಾರಗಳು ಲಭಿಸಿವೆ. ರಾಜ್ಯಮಟ್ಟದ ಆಕಾಶವಾಣಿ ಸ್ಪರ್ಧೆಗಳಲ್ಲಿ ಸತತ ಮೂರು ಬಾರಿ ಪ್ರಥಮ ಬಹುಮಾನ, ರಾಷ್ಟ್ರಮಟ್ಟದ ಆಕಾಶವಾಣಿ ಸ್ಪರ್ಧೆಯಲ್ಲಿ ರೈತರ ಆತ್ಮಹತ್ಯೆ ಕುರಿತು ‘ಅನ್ನದಾತನ ಅಳಲು’ ನುಡಿಚಿತ್ರ ಹಾಗೂ ‘ಗೊಂಬೆಯಾಟ’ ರೂಪಕಕ್ಕೆ ಪ್ರಥಮ ಪುರಸ್ಕಾರ ದೊರೆತಿದೆ. ಇವರ ಕಥೆ-ಕವಿತೆಗಳು ಶಾಲಾ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಯಾಗಿವೆ. ರಾಜ್ಯದ ಪ್ರತಿಷ್ಠಿತ ಸಂಘ-ಸಂಸ್ಥೆಗಳಿಂದ ಹಲವು ಪುರಸ್ಕಾರಗಳು ಸಂದಿವೆ.
Reviews
There are no reviews yet.