Description
ಪ್ರಮೀಳಾ ಸ್ವಾಮಿಯ ಪುಸ್ತಕ ಊರೆಂಬ ಉದರ, ಅಕ್ಷರ ಪ್ರಕಾಶನದಿಂದ ಇದೀಗ ಪ್ರಕಟಗೊಂಡು, ಮಾರುಕಟ್ಟೆಯಲ್ಲಿ ಲಭ್ಯವಿದೆ. ಕುಪ್ಪಹಳ್ಳಿ ಅವರು ಹುಟ್ಟಿ-ಬೆಳೆದ ಊರು. ಕರ್ನಾಟಕದಲ್ಲಿ ಸಂಕೇತಿ ಜನಾಂಗ ನೆಲೆಸಿದ್ದ ಕೆಲವು ಹಳ್ಳಿಗಳಲ್ಲಿ ಇದೂ ಒಂದು. ಆ ಊರಿನ ಜನ, ಸಾಂಸ್ಕೃತಿಕ ಜೀವನ, ಸಂಕೇತಿಗಳ ಅಡುಗೆ-ಆಚರಣೆ ಇವೆಲ್ಲದರ ಸ್ಮೃತಿಕೋಶವೇ ಈ ಪುಸ್ತಕ. ಇದು ಕಳೆದು ಹೋದ ಬದುಕಿನ ಸ್ಮರಣೆಯಾಗದೇ, ಮತ್ತೆ ಮತ್ತೆ ಪುನರ್ಜೀವಿಸಿ, ಆ ಮೂಲಕ ಅಂದಿನ ಬದುಕನ್ನು, ಸಮುದಾಯವನ್ನು, ಸಂಘ ಜೀವನವನ್ನು, ಕಥೆಗಳನ್ನು ಜೀವಂತವಾಗಿಡುವ ಪ್ರಯತ್ನ. ಈ ಕಥೆಗೆ ಹೇಮಾವತಿ ನದಿಯ, ಹೇಮಗಿರಿ ಬೆಟ್ಟದ ರಂಗನಾಥನ ಸಾಕ್ಷಿ ಇದೆ, ಇಂದಿಗೂ ಕಿಂಚಿತ್ತೂ ಮಾಸದ ಮನಃಸಾಕ್ಷಿಯ ಸಹವಾಸವಿದೆ.
Reviews
There are no reviews yet.