ಪದಗಳಿವೆ ಎದೆಯೊಳಗೆ

351.00

Add to Wishlist
Add to Wishlist
Email

Description

ಪುಸ್ತಕ : ಪದಗಳಿವೆ ಎದೆಯೊಳಗೆ

ಲೇಖಕರು : ಜಗದೀಶ್ ಕೊಪ್ಪ ಎನ್

ಪ್ರಕಾಶನ : ನವಕರ್ನಾಟಕ

ಮುಖ ಬೆಲೆ : 390

ಪುಟಗಳು : 352

ನಮ್ಮ ಭಾರತೀಯ ಸಮಾಜದ ಪ್ರಧಾನ ಸಂಸ್ಕೃತಿಯಲ್ಲಿ ಜಾತಿಯ ಹೆಸರಿನಲ್ಲ ಮತ್ತು ಅಸ್ಪೃಶ್ಯತೆಯ ನೆಪದಲ್ಲಿ ಮನುಷ್ಯ ಸಮಾಜದಿಂದ ನೆಲಕ್ಕೆ ಕಳಚಿ ಬಿದ್ದ ಮರದ ಕೊಂಬೆಯೊಂದು ಬೇರು ಬಿಟ್ಟು ಮತ್ತೆ ಚಿಗುರಿದಂತೆ ಇನ ತಳ ಸಮುದಾಯದ ಜನತೆ ಜೀವಂತವಾಗಿರುವುದೇ ಸೋಜಿಗದ ಸಂಗತಿ. ಮೇಲ್ವರ್ಗದ ಎಲ್ಲಾ ಕಠಿಣ ನಿಯಮ ಹಾಗೂ ಪದ್ಧತಿಗಳನ್ನು ಒಪ್ಪಿಕೊಂಡು ಭಾರತೀಯ ಸಂಸ್ಕೃತಿಯ ಮುಖ್ಯ ಹಾಗೂ ಪ್ರಧಾನ ಕಲೆಗಳಾದ ನೃತ್ಯ, ಸಂಗೀತ, ವಾದನಕ್ರಿಯೆ ಹೀಗೆ ಎಲ್ಲವುಗಳನ್ನು ಘೋಷಿಸಿಕೊಂಡು ಬಂದ ಬಗೆಯನ್ನು ಒಮ್ಮೆ ನೆನೆಸಿಕೊಂಡರೆ ಈ ಮಹಾನ್ ಕಲಾವಿದರಿಗೆ ಮತ್ತು ಅವರ ನಿಸ್ವಾರ್ಥ ಸಂಸ್ಕೃತಿಗೆ ನಾವು ಅವರಿಗೆ ಸಾಷ್ಟಾಂಗ ನಮಸ್ತಾರ ಮಾಡಿದರೂ ಸಹ ನಮ್ಮ ಋಣ ತೀರುವುದಿಲ್ಲ.

ಇಂದು ನಾವು ಮಂಗಳಕರ ವಾದ್ಯ ಎನ್ನುವ ನಾದಸ್ವರ, ಶಹನಾಯಿ, ಡೋಲು, ಮೃದಂಗ, ತಬಲ, ಚೌಡಿಕೆ, ಕೊಳಲು ಇವೆಲ್ಲವೂ ಇಂದಿಗೂ ಸಹ ಚಲಾವಣೆಯಲ್ಲರುವುದು ಆ ಮಹಾತ್ಮರ ಸೇವೆಯಿಂದ ಎಂಬುದನ್ನು ನಾವು ಕೃತಜ್ಞತಾ ಭಾವದಿಂದ ನಮ್ಮ ಮುಂದಿನ ತಲೆಮಾರಿಗೆ ದಾಟಿಸಬೇಕಿದೆ, ಕೇವಲ ದೇಹ ಮಾರಿಕೊಳ್ಳುವ ಹೆಣ್ಣುಗಳು ಎಂದು ತಿರಸ್ಥಾರದಿಂದ ನಾವು ನೋಡುತ್ತಿರುವ ದೇವದಾಸಿಯರೆಂಬ ಈ ಹೆಣ್ಣುಮಕ್ಕಳು ಈ ನೆಲದ ಪುರುಷ ಸಮಾಜವು ತನ್ನ ಸ್ವಾರ್ಥಕ್ಕಾಗಿ, ಮನರಂಜನೆಗಾಗಿ ಮತ್ತು ಕಾಮತೃಷೆಗಾಗಿ ಸೃಷ್ಟಿಸಿದ ಶಾಸ್ತ್ರ ಮತ್ತು ನಿಯಮಗಳ ಫಲವೇ ಹೊರತು ದಿಢೀರನೆ ಆಕಾಶದಿಂದ ಉದುರಿದ ಸ್ವಾರ್ಥ ಜೀವಗಳಲ್ಲ,

ತಮ್ಮದಲ್ಲದ ತಪ್ಪಿಗೆ ಎಲ್ಲಾ ಕಟ್ಟುಪಾಡುಗಳನ್ನು ಸ್ವೀಕರಿಸಿ ತಮ್ಮ ಎದೆಯೊಳಗೆ ಅಡಗಿರುವ ನೋವಿನ ಪದಗಳನ್ನು ಬಚ್ಚಿಟ್ಟು ನೃತ್ಯ ಮತ್ತು ಸಂಗೀತಕ್ಕಾಗಿ ತಮ್ಮ ಜೀವವನ್ನು ಧಾರೆಯೆರೆಯುತ್ತಾ ಸಂತೋಷದ ಪದಗಳನ್ನು ಮಾತ್ರ ಹಾಡಿದ ಈ ಮಹಾನ್ ಕಲಾವಿದೆಯರು ನಮ್ಮ ಪಾಲಿಗೆ ದೇವದಾಸಿಯರಲ್ಲ, ಬದಲಾಗಿ ಈ ನೆಲದಲ್ಲ ಬದುಕಿ ನಮ್ಮೆಲ್ಲರ ನೋವುಗಳಿಗೆ ತಮ್ಮ ಕಲೆಗಳ ಮೂಲಕ ಮದ್ದು ಅರೆದ ದೇವತೆಗಳು, ಇದಕ್ಕಿಂತ ಮಿಗಿಲಾಗಿ ಅಕ್ಷರದಲ್ಲಿ ಅಥವಾ ಶಬ್ದದಲ್ಲಿ ಇವರನ್ನು ಬಣ್ಣಿಸಲು ಸಾಧ್ಯವಿಲ್ಲ.

Reviews

There are no reviews yet.

Be the first to review “ಪದಗಳಿವೆ ಎದೆಯೊಳಗೆ”

Your email address will not be published.