Description
ಸಂಪಾದನೆ ಹಾಗೂ ಅನುವಾದ: ಶೈಲಜಾ ಮತ್ತು ಟಿ. ಎಸ್. ವೇಣುಗೋಪಾಲ್
ತಾಯಿಗಂಟಿಕೊಂಡಿದ್ದ ಎಳೆಯ ರವಿಶಂಕರನಿಂದ ಪ್ರಾರಂಭವಾಗಿ ಬಣ್ಣರಂಜಿತ, ಕಲಾಮಯ ಬದುಕನ್ನು ಅನುಭವಿಸಿ ಕಿಂಗ್ ಲಿಯರ್‌ನಂತೆ ಪರಿಪಕ್ವತೆ ಸಾಧಿಸಿದ ಇಳಿವಯಸ್ಸಿನ ಸಂಗೀತಋಷಿಯವರೆಗಿನ ಪಯಣವನ್ನು ಒಂದು ಅದ್ಭುತ ಕಥಾನಕದಂತೆ ’ರವಿಶಂಕರ್’ ಸಂಚಿಕೆ ಹೆಣೆಯುತ್ತದೆ. ಸಿತಾರ್ ಸಂಗೀತ ನುಡಿಸುವುದಕ್ಕಾಗಿ ಬದುಕಿದ’ ಭಾರತೀಯ ಶಾಸ್ತ್ರೀಯಸಂಗೀತದ ರಾಯಭಾರಿಯ ಕತೆಯನ್ನು ಅನಗತ್ಯ ವೈಯಕ್ತಿಕ ವಿವರಗಳಲ್ಲಿ ಕಳೆದುಹೋಗದೆ, ರೋಚಕಗೊಳಿಸದೆ, ಜೀವನದ ಹುಡುಕಾಟಕ್ಕೆ, ಸಂಗೀತದ ಖುಷಿ ತಲ್ಲಣಗಳಿಗೆ, ಜೀವನತೀವ್ರತೆಗೆ, ತನ್ಮಯ ಬದುಕಿಗೆ ಒತ್ತುಕೊಡುವ ಮ್ಯಾಪಿಂಗ್‌ನ ಮೂಲಕ ಈ ಸಂಚಿಕೆ ಕಟ್ಟಿಕೊಟ್ಟಿದೆ. ಮೇರು ಕಲಾವಿದನೊಬ್ಬನ ವೈಯಕ್ತಿಕ ಪಯಣವನ್ನು ದಾಖಲಿಸುವ ಹೊತ್ತಿನಲ್ಲೇ ಆತನ ಸಂಗೀತಜೀವನದ ನಡೆಯನ್ನು ಬೇರೆ ಬೇರೆ ಹಾದಿಕಗಳ ಮೂಲಕ ಒಂದು ಕೇಂದ್ರಕ್ಕೆ ತಂದು ನಿಲ್ಲಿಸುತ್ತದೆ
ಸರ್ವಮಂಗಳ -ಪ್ರಜಾವಾಣಿ
Reviews
There are no reviews yet.