ಪೆಟ್ರಿಕೋರ್

120.00

Add to Wishlist
Add to Wishlist
Email

Description

ಲೇಖಕರು: ಚೈತ್ರಾ ಶಿವಯೋಗಿಮಠ

ಪ್ರಕಾಶನ: ಆತ್ಮಿಕಾ ಪುಸ್ತಕ

************

ಮೊದಲನೆಯದಾಗಿ ನಿಮ್ಮ ಕವಿತೆಗಳು ಒಂದು ಪ್ರಾರ್ಥನೆಯಂತಿವೆ. ಹಾಗೆ ನೋಡಿದರೆ ಕವಿವಾಣಿಯಂತೆ ಪ್ರತಿ ಕವಿತೆಯೂ ಪ್ರಾರ್ಥನೆಯೇ, ನಿಮ್ಮ ಕವಿತೆಗಳು ಉದ್ದೇಶಪೂರ್ವಕವಾಗಿ ಮಾಡುವ ಪ್ರಾರ್ಥನೆಯಂತಲ್ಲ; ಅಥವಾ ಆಚರಣಾಮೂಲದ ಒಂದು ಯಾಂತ್ರಿಕ ಕ್ರಿಯೆಯೂ ಅಲ್ಲ. ಅವು ಒಂದು ಬಗೆಯ ಪ್ಯಾಶನ್ನಿಂದ ಕೂಡಿದ ಪ್ರಾರ್ಥನೆ. ಅದರಲ್ಲಿ ಆರ್ತತೆಯನ್ನು ಹದವಾಗಿ ಬಗ್ಗಿಸಿ ಒಂದು ಪ್ರಾರ್ಥನೆಯನ್ನು ಸಲ್ಲಿಸುತ್ತೀರಿ. ಪ್ರೀತಿಸುವವರೊಂದಿಗೆ ಎಲ್ಲವನ್ನೂ ಹಂಚಿಕೊಂಡು, ಎಲ್ಲವನ್ನೂ ನಿವೇದಿಸಿಕೊಂಡು ಹೋಗುವ ದಿಟ್ಟತೆ ಅಲ್ಲಿ ಕಾಣುತ್ತದೆ. ಆದರೆ ಅದು ಸಂಪೂರ್ಣ ವಿನಯದಿಂದ ತನ್ನನ್ನು ತಾನು ಮರೆಯುವಂತದ್ದಲ್ಲ. ನಿಮ್ಮತನವನ್ನು ಉಳಿಸಿಕೊಂಡು ಇತರರನ್ನು ಪ್ರೀತಿ ಜಗತ್ತಿನಲ್ಲಿ ನೋಡಲು ಬಯಸುತ್ತೀರಿ. ಹಾಗಾಗಿ ಇಲ್ಲಿ ನಿಮ್ಮ ಭಾವನೆಗಳು ತಣ್ಣಗೆ ಎನ್ನಿಸಿದರೂ ಶಕ್ತಿಶಾಲಿಯಾಗಿವೆ. ಝೆನ್ ಉಕ್ತಿಯೊಂದು ಹೇಳುತ್ತದೆ: ‘ನೀರು ತುಂಬ ಮೃದು ಆದರೆ ಬಲಶಾಲಿ’. ಚೈತ್ರಾ ಇಲ್ಲಿ ನೀವು ಹೆಣ್ಣಾಗಿದ್ದೀರಿ ಎಂದು ನನಗೆ ಅನ್ನಿಸಿದೆ. ನೀವು ಪ್ರೀತಿಯನ್ನೇ ಧ್ಯಾನಿಸಿದ್ದೀರಿ, ಶರಣಾಗತಿಯ ಭಾವವನ್ನು ವಿಜೃಂಭಿಸಿದ್ದೀರಿ. ಆದರೆ ಮಿಲನದ ಆತ್ಯಂತಿಕ ತುದಿಯಲ್ಲಿಯೂ ನಿಮ್ಮ ಅಸ್ಮಿತೆಯ ಕುರುಹು ಇರಬೇಕೆಂಬ ಅಪೇಕ್ಷೆಯನ್ನು ಹೊಂದಿದ್ದೀರಿ. ನಿಮ್ಮ ಕವಿತೆಗಳು ಮತ್ತೊಬ್ಬನನ್ನು ಕುರಿತು ಧ್ಯಾನಿಸುವ ಸ್ಥಾಯಿಭಾವದಲ್ಲಿ ನಿಂತಂತೆ ತೋರಿದರೂ ಅವು ಆಳದಲ್ಲಿ ಅನೇಕ ಸಂಚಾರಿ ಭಾವಗಳನ್ನು ಹೊಂದಿವೆ. ಇದು ನೀವು ಕವಿತೆ ಬರೆಯುವಾಗ ಕಂಡುಕೊಳ್ಳುವ ಸಣ್ಣ ಸಣ್ಣ ಶೃತಿಗಳು.

-ಕೇಶವ ಮಳಗಿ

(ಒಳಪುಟಗಳಿಂದ)

Reviews

There are no reviews yet.

Be the first to review “ಪೆಟ್ರಿಕೋರ್”

Your email address will not be published.