Description
ಲೇಖಕರು: ಸಂಧ್ಯಾ ವಿ.
ಪ್ರಕಾಶನ: ಕದಂಬ ಪ್ರಕಾಶನ
ಪುಟಗಳು : 280
*************
ಯಾವುದೇ ಇತಿಹಾಸ ರಚಿಸುವಾಗ ಸಾಮಾನ್ಯವಾಗಿ ಪುರುಷ ಪ್ರಧಾನವಾದ ಇತಿಹಾಸಕ್ಕೆ ಒತ್ತು ನೀಡುತ್ತೇವೆ,ರಾಜರು ಹಾಗೂ ಅವರ ಮಾಂಡಳಿಕರು ಹಾಕಿಸಿರುವ ಶಾಸನಗಳು. ಬರೆಸಿರುವ ಬರಹಗಳಲ್ಲಿ ಸ್ತ್ರೀ ಆಡಳಿತಗಾರರ ಬಗ್ಗೆ ಮಾಹಿತಿ ದೊರೆಯದಿರುವುದು. ಆಕರ ಸಾಮಾಗ್ರಿಯ ಕೊರತೆಯಾಗಿದೆ. ಡಾ. ಸಂಧ್ಯಾ ಅವರು ಅಂತಹ ಕಾಲದ ಸ್ತ್ರೀಯರು ಹೇಗೆ ಬಾಳಿ-ಬದುಕಿದರೆಂಬ ಬಗ್ಗೆ ” ಪ್ರಾಚೀನ ಕರ್ನಾಟಕದ ಮಹಿಳಾಲೋಕ” ಕೃತಿಯಲ್ಲಿ ತೋರಿಸಲು ಶ್ರಮಿಸಿದ್ದಾರೆ.ಇದರಲ್ಲಿಯೂ ಚೆನ್ನಾಗಿ ಆಡಳಿತ ನಡೆಸಿದ, ರಾಜಕೀಯದಲ್ಲಿದ್ದ ಸ್ತ್ರೀಯರ ಉಲ್ಲೇಖವೇ ಹೆಚ್ಚಾಗಿದೆ. ಮಕ್ಕಳಿಲ್ಲದೆ ರಾಜ ಸತ್ತಾಗ ರಾಜ್ಯದ ಜವಾಬ್ದಾರಿ ಹೊತ್ತ ಮಹಿಳೆಯರು ಅಸ್ತಿತ್ವವನ್ನು ಉಳಿಸಲು ಪಟ್ಟ ಕಷ್ಟ-ನಷ್ಟಗಳನ್ನು,ಕರ್ನಾಟಕದಲ್ಲಿ ರಾಣಿಯರ ದತ್ತಕಗಳು ಅಧ್ಯಾಯದಲ್ಲಿ ವಿವರಿಸಿದ್ದಾರೆ.ಹಾಗೆಯೇ ಪೆಣ್ಬುಯ್ಯಲ್, ಸಂಗೀತ ನೃತ್ಯಕಲೆಗಳಿಗೆ ಪ್ರಾಚೀನ ಅರಸಿಯರ ಕೊಡುಗೆ,ಮಹಿಳೆಯರ ಸಾಹಸ, ಧಾರ್ಮಿಕ ಕಾರ್ಯಗಳಲ್ಲಿ ಮಹಿಳೆಯರ ಪಾತ್ರ ಮೊದಲಾದ ಅಧ್ಯಾಯಗಳಲ್ಲಿ ಮಹಿಳೆಯರು ತಮ್ಮನ್ನು ಹೇಗೆ ತೊಡಗಿಸಿಕೊಂಡಿದ್ದರೆಂಬ ಬಗ್ಗೆ ವಿವರಿಸಿದ್ದಾರೆ.ಹೆಚ್ಚಿಗೆ ಶಾಸನಗಳನ್ನಾಧರಿಸಿ ಬರೆದಿರುವ ಈ ಲೇಖನಗಳ ಗುಚ್ಛ ಒಂದು ಅಧಿಕೃತ ಕೃತಿಯಾಗಿದೆ. ಇಲ್ಲಿ ಊಹಾ ಪೋಹಗಳಾಗಲೀ,ಕಲ್ಪಿತ ವಿಷಯಗಳಿಗಾಗಲೀ ಸ್ಥಳವಿಲ್ಲ.ಹೀಗಾಗಿ ಪ್ರಾಚೀನ ಕರ್ನಾಟಕದ ಮಹಿಳೆಯರ ಬಗ್ಗೆ ತಿಳಿದುಕೊಳ್ಳಲು ಇದೊಂದು ಅಧಿಕೃತ ಮಾಹಿತಿಯುಳ್ಳ ಗ್ರಂಥ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ಅಧಿಕೃತ ಮಾಯಿತಿಯುಳ್ಳ ಗ್ರಂಥ ರಚಿಸಿದ ಶ್ರೀಮತಿ ಡಾ.ಸಂಧ್ಯಾ ಅವರು ಅಭಿನಂದನಾರ್ಹರು.
– ಡಾ. ದೇವರಕೊಂಡಾರೆಡ್ಡಿ
(ಮುನ್ನುಡಿಯಿಂದ)
Reviews
There are no reviews yet.