Description
ಲೇಖಕರು: ಆನಂದ ಪಾಟೀಲ
ಪ್ರಕಾಶನ: ಅಭಿನವ, ಬೆಂಗಳೂರು
ಪುಟಗಳು: 388
……………….
ಆಗ ನಾನು ಟ್ರೇನಿನಲ್ಲಿ ಪ್ರಯಾಣ ಮಾಡ್ತಾ ಇದ್ದೆ. ಮಧ್ಯಾಹ್ನದ ಹೊತ್ತು. ಬಿಸಿಲು ಚೆನ್ನಾಗಿಯೇ ಇತ್ತು. ನನ್ನ ಬೋಗಿಯಲ್ಲಿ ಯಾರೂ ಇರಲಿಲ್ಲ. ನಾನು ಹೊರಟ ಸ್ವಲ್ಪ ಹೊತ್ತಿಗೆಲ್ಲ ಇಬ್ಬರು- ಅಪ್ಪ ಮಗಳು ಅಂತ ತಟಕ್ಕನೆ ಅಂದುಕೊಂಡೆ, ಹತ್ತಿದರು. ನನ್ನ ಮುಂದಿನ ಸೀಟಿನಲ್ಲಿ ಕುಳಿತುಕೊಂಡರು. ಕಿಟಕಿ ಪಕ್ಕಾ ಹುಡುಗಿ ಕೂತ್ಲು. ಅದು ಸಹಜ. ನನಗೊಂದಿಷ್ಟು ಸಹ ಪ್ರಯಾಣಿಕರು ಸಿಕ್ಕಿದರು. ಅದರಲ್ಲೂ ಒಂದು ಹುಡುಗಿ. ನಾನು ಮಕ್ಕಳಿಗೆ ಬರೆಯೋನಲ್ವೆ? ಮಕ್ಕಳ ಜೊತೆಗೆ ಮಕ್ಕಳ ಕತೆ- ಕಾದಂಬರಿ, ಕವಿತೆ ಅಂತೆಲ್ಲ ಸಮಯ ಮಾಡಿಕೊಳ್ಳುತ್ತ ಸುಮಾರು ಸಮಯವೇ ಕಳೆದಿತ್ತು. ಅದಕ್ಕೆ ಅನುಕೂಲ ಆಗುವಂತೆ ಆ ಹುಡುಗಿ ಬಂದು ಕೂತು ಒಂದಿಷ್ಟೆಲ್ಲ ಸೆಟಲ್ ಆಗುತ್ತಿದ್ದ ಹಾಗೆ ತನ್ನ ಪರ್ಸಿನಿಂದ ಒಂದು ಪುಸ್ತಕ ತೆಗೆದಳು. ಅದು ಸಾಕಷ್ಟು ದಪ್ಪವೇ ಇತ್ತು. ಹಾಗಾದರೆ ಹುಡುಗಿ ನಂ ಕಂಪನಿ ಅನಿಸಿತು. ನಾನು ಬಿಟ್ಟೇನೆ?
‘ಯಾವುದು ಪುಸ್ತಕ?’ ಅಂದೆ. ಅವರಪ್ಪ ಪೇಪರು ಓದುವುದಕ್ಕೆ ಬಿಡಿಸಿಕೊಳ್ಳುತ್ತಿದ್ದವರು ನನ್ನನ್ನು ನೋಡಿ ನಕ್ಕರು, ಮತ್ತೆ ಪೇಪರಿನಲ್ಲಿ ಮುಖ ತೂರಿಸಿದರು.
ಅವಳು ಮಾತಾಡಲಿಲ್ಲ. ಬದಲು ಪುಸ್ತಕದಲ್ಲಿ ಬೆರಳು ಇರಿಸಿಕೊಂಡೇ ಅದರ ಮುಖಪುಟ ತೋರಿಸಿದ್ಲು. ಅದು ರಾಲ್‍ಡಾಲ್‍ದು BFG( Big Friendly jiant) ಸಾಕಷ್ಟು ಹೆಸರು ಮಾಡಿದ ಪುಸ್ತಕ, ಆದರೆ ನಾನು ಓದಿರಲಿಲ್ಲ.
‘ರಾಲ್‍ಡಾಲ್ ನಿನಗೆ ಇಷ್ಟಾನಾ?’ ನಾನು ಮಾತು ಶುರು ಮಾಡಿಕೊಂಡೆ.
‘ಹೂಂ, ಇಷ್ಟಾ ಅನ್ನಬಹುದು…ಅವರದು ಮೂರು ಪುಸ್ತಕ ಓದೀದೀನಿ’
‘ಬರಿ ಇಂಗ್ಲಿಷಿಂದೇ ಓದ್ತಿರ್ತೀಯಾ?’
‘ಹಾಗೇನಿಲ್ಲ…ಆದರೆ ಕನ್ನಡದಲ್ಲಿ ಇಷ್ಟು ಓದಿಸಿಕೊಳ್ಳೋ ಕಾದಂಬರಿಗಳು ಸಿಗಲ್ಲ.’
‘ಡಿಸೋಜಾ ಅವರವು ಓದಿದಿಯಾ…?’
‘ಹೂಂ…ಎಲ್ಲಾ ಓದಿಯಾಗಿದೆ…ಅವೆಲ್ಲ ಚಿಕ್ಕವು, ಚೆನ್ನಾಗಿವೆ, ಆದರೆ ದೀರ್ಘವಾದುವು ಓದಲು ಬೇಕನಿಸುತ್ತೆ.’
‘ಯಾವ ಕ್ಲಾಸು ಈಗ…?’
‘ಎಂಟನೆಯ್ï ಕ್ಲಾಸು.’
ಅವಳ ಓದಿಗೆ ಅಡ್ಡಿಪಡಿಸಬಾರದು ಅಂತ ಒಂದಿಷ್ಟು ವಿರಾಮ ನೀಡಿದ ಹಾಗೆ ಮಾಡಿ ಮಾತಿಗೆ ಬ್ರೇಕ್ ಹಾಕಿದೆ. ಮಧ್ಯ ಒಂದುಕಡೆ ಸ್ಟೇಷನ್ನಿನಲ್ಲಿ ತಿಂಡಿ ಕೊಂಡು ತಿನ್ನೋದಾಯ್ತು. ಅವರೂ ಹಾಗೇ ಮಾಡಿದರು. ಅವರಪ್ಪ ಈಗ ಒಂದಿಷ್ಟು ಮಾತಿಗೆ ಇಳಿಯುವ ಸೂಚನೆ ನೀಡಿದರು… ಎಲ್ಲಿಗೆ ಹೊರಟಿರೋದು. ಅಂತೆಲ್ಲ ಔಪಚಾರಿಕ ಆಯ್ತು. ಮಾತು ಶುರು ಹಚ್ಚಿಕೊಂಡಾಯ್ತು. ಅವರು ಹುಡುಗಿಯಮ್ಮನ ಕಡೆ ಅಜ್ಜಿ ತೀರಿಕೊಂಡದ್ದರಿಂದ ಅಲ್ಲಿಗೆ ಹೋಗಿ ವಾಪಸು ಬರುತ್ತಿದ್ದರು. ನಾನು `ನಿಮ್ಮನೆಯವ್ರು ಅಲ್ಲಿಯೇ ಉಳಿದ್ರಾ?’ ಅಂದೆ. ಅವರು ಮೆಲ್ಲಗೆ ನಕ್ಕರು…
(ಒಳಪುಟಗಳಿಂದ)
Reviews
There are no reviews yet.