Description
ಪ್ರಸ್ತುತ ಪುಸ್ತಕವು ರಂಗ ಅಭಿನಯ, ರಂಗ ತಂತ್ರಗಳು ಮತ್ತು ರಂಗ ಸಿದ್ಧತೆ ಎನ್ನುವ ಮೂರು ಭಾಗಗಳಲ್ಲಿ ರಂಗಭೂಮಿಯ ಪ್ರಾಯೋಗಿಕ ಅಂಗಾಂಶಗಳನ್ನು ಕುರಿತ ಪರಿಚಯಾತ್ಮಕ ಚರ್ಚೆ ನಡೆಸುತ್ತದೆ. ಪ್ರತಿಯೊಂದೂ ರಂಗಾಂಶದ ಐತಿಹಾಸಿಕ ಹಿನ್ನೆಲೆ, ಸಮಕಾಲೀನ ರಂಗಭೂಮಿಯಲ್ಲಿ ಆಯಾ ರಂಗಾಂಶಗಳನ್ನು ಯೋಜಿಸುವ ಮತ್ತು ನಿರ್ವಹಿಸುವ ವಿಧಾನಗಳು ಹಾಗೂ ಆಯಾ ರಂಗಾಂಶದ ವೈವಿಧ್ಯಮಯ ಸಾಧ್ಯತೆ-ಶೈಲಿಗಳು — ಇವುಗಳನ್ನು ಆರಂಭದ ರಂಗಕರ್ಮಿಗಳಿಗೆ ಮತ್ತು ಆಸಕ್ತರಿಗೆ ಉಪಯುಕ್ತವಾಗುವಂತೆ ಇಲ್ಲಿ ನಿರೂಪಿಸಲಾಗಿದೆ.
ಅಕ್ಷರ ಕೆ.ವಿ.
ದೆಹಲಿಯ ರಾಷ್ಟಿ ಯ ನಾಟಕಶಾಲೆ ಮತ್ತು ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದ ಅಕ್ಷರ ಕೆ.ವಿ. ನೀನಾಸಮ್ ಮತ್ತು ಅಕ್ಷರ ಪ್ರಕಾಶನ ಸಂಸ್ಥೆಗಳ ಮೂಲಕ ಕೆಲಸ ಮಾಡುತ್ತಿದ್ದಾರೆ; ಕರ್ನಾಟಕದ ವಿವಿಧೆಡೆ ರಂಗಶಿಬಿರ ನಡೆಸಿ ನಾಟಕಗಳನ್ನು ನಿರ್ದೇಶಿಸಿದ್ದಾರೆ. ನೀನಾಸಮ್ ತಿರುಗಾಟದಲ್ಲಿ ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ರಂಗ ಇತಿಹಾಸದ ಬಗ್ಗೆ ಇವರು ರಚಿಸಿದ ‘ರಂಗ ಪ್ರಪಂಚ’ ಪುಸ್ತಕಕ್ಕೆ ಮತ್ತು ನಾಟಕ ‘ಸಹ್ಯಾದ್ರಿ ಕಾಂಡ’ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ದೊರಕಿದೆ. ‘ಮಾವಿನ ಮರದಲ್ಲಿ ಬಾಳೆಯ ಹಣ್ಣು’ ಎಂಬ ರಂಗವಿಮರ್ಶಾ ಸಂಕಲನ, ‘ರಂಗಭೂಮಿಯ ಮುಖಾಂತರ’ ಎಂಬ ಲೇಖನ ಸಂಕಲನ, ‘ಚೂರಿಕಟ್ಟೆ ಅರ್ಥಾತ್ ಕಲ್ಯಾಣಪುರ’, ‘ಸ್ವಯಂವರಲೋಕ’ ಎಂಬ ನಾಟಕ ಗಳು — ಇವರ ಇನ್ನಿತರ ಪ್ರಮುಖ ಕೃತಿಗಳು.
Reviews
There are no reviews yet.