Description
ಲೇಖಕರು: ಡಾ. ಮುಖ್ಯಮಂತ್ರಿ ಚಂದ್ರು
ಪ್ರಕಾಶನ: ಕವಿತಾ ಪ್ರಕಾಶನ, ಮೈಸೂರು
**********
ಹಳ್ಳಿ ಹೈದ ದಿಲ್ಲಿಗೆ ಬಂದ ಅನ್ನುವ ಹಾಗೆ ಹೊನ್ನಸಂದ್ರದಿಂದ ಚಂದ್ರು ಬೆಂಗಳೂರಿಗೆ ಬಂದಿದ್ದು, ವಿದ್ಯಾಭ್ಯಾಸದಲ್ಲಿಯೂ ಅಷ್ಟಕಷ್ಟೇ. ಅಲ್ಲಲ್ಲಿ ಉಳಿದು, ಕಲಿತು ಒಂದೊಂದೇ ಹೆಜ್ಜೆ ಮುಂದುವರಿಯುವ ಪ್ರಯತ್ನ, ಸಾಧನೆ, ಆದರೆ ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆ, ತನ್ನ ಹಳ್ಳಿಯ ಹುಡುಗನ ಕೀಳರಿಮೆ, ನಗರದ ವಾತಾವರಣದ ಹಿಂಜರಿಕೆ, ಬದುಕಿನ ಏಳುಬೀಳುಗಳು, ಒಡನಾಟ… ಎಲ್ಲವೂ ಚಂದುಗೆ ಒಡ್ಡಿದ್ದು ಪರೀಕ್ಷೆಯೇ.
ಕಾಲೇಜು-ನಾಟಕ-ಡಿಡಿಎಂ-ಮೂಕಾಭಿನಯ-ರಂಗ ತಂಡಗಳ ಒಡನಾಟ-ತಾಲೀಮು-ಊರಿಂದೂರಿಗೆ ತಿರುಗಾಟದ ಪ್ರದರ್ಶನಗಳು ಅವುಗಳಲ್ಲಿ ನಡೆದ ಘಟನೆಗಳು ಮರೆಯಲಾರವು, ಆಯಾಚಿತವಾಗಿ ಒಲಿದ ಸಿನಿಮಾ ಕ್ಷೇತ್ರ, ಇದರಿಂದ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ-ಖಳನಾಯಕ-ಹಾಸ್ಯ-ಪೋಷಕ ಪಾತ್ರಗಳಲ್ಲಿ ಮಿಂಚಿದರು. ಜೊತೆಗೆ ಕಿರುತೆರೆಯಲ್ಲಿ ಸಾವಿರಾರು ಕಂತುಗಳಲ್ಲಿ ನಟನೆ.
ಹುಡುಕಿಕೊಂಡು ಬಂದ ರಾಜಕಾರಣದಿಂದ ಗೌರಿಬಿದನೂರು ಕ್ಷೇತ್ರದ ಶಾಸಕರಾಗಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಸರ್ಕಾರದ ವಿವಿಧ ಸಮಿತಿಗಳ ಸದಸ್ಯರಾಗಿ ಜೊತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ದುಡಿದಿದ್ದಾರೆ.
‘ಮುಖ್ಯಮಂತ್ರಿ’ ನಾಟಕದ 800ಕ್ಕೂ ಅಧಿಕ ಪ್ರದರ್ಶನಗಳ ಜೊತೆಗೆ ಕಲಾಗಂಗೋತ್ರಿ ತಂಡ ಹಾಗೂ ಎಲ್ಲ ಗೆಳೆಯರೊಂದಿಗೆ ಖುಷಿಯಾಗಿ 70 ವರ್ಷಗಳನ್ನು ಕೂಡಿಸಿಕೊಂಡಿದ್ದಾರೆ. ಆರೋಗ್ಯದ ಏರಿಳಿತ, ಅಡಿಗಡಿಗೂ ಬಂದ ಅಡೆತಡೆಗಳಿಗೆ ಮನಸ್ಸು ಕೆಡಿಸಿಕೊಳ್ಳದೆ, ನಗುನಗುತ್ತಲೆ ಜೀವನದ ದೋಣಿಯಲ್ಲಿ ಪಯಣಿಸಿದ್ದಾರೆ.
ಸರಳ ಜೀವನ, ಹಾಸ್ಯಬೆರೆತ ಮಾತು, ಎಲ್ಲ ಕ್ಷೇತ್ರಗಳಲ್ಲೂ ನಿರಂತರ ಒಡನಾಟ… ಹೀಗೆ ಹೊನ್ನಸಂದ್ರ ನರಸಿಂಹಯ್ಯ ಚಂದ್ರಶೇಖರ ಅದೃಷ್ಟದ ರೇಖೆಯೊಡನೆ ನಡೆದು ಭವಿಷ್ಯಕ್ಕೆ ಜಿಗಿದು ಡಾ.ಮುಖ್ಯಮಂತ್ರಿ ಚಂದ್ರು ಆದರು.
ಈ ಕೃತಿ ಅವರ ಜೀವನ ಪಯಣದ ಯೋಗ-ಯೋಗ್ಯತೆಯ, ಸಾಧನೆ-ಸಿದ್ಧಿಯನ್ನು ಅವರದೇ ಹಾಸ್ಯಮಿಶ್ರಿತ ಭಾಷೆಯಲ್ಲಿ ಕಂಡಿರಿಸಿದ್ದಾರೆ. ಓದುವ ಋಷಿ ನಿಮ್ಮದಾಗಲಿ.
– See more at: https://amulyapustaka.myinstamojo.com/-ece6e/p3443165/#sthash.AOOgfKNE.dpuf
Reviews
There are no reviews yet.