Description
ರನ್ನನ ಗದಾಯುದ್ಧ ಒಂದು ಶಕ್ತಿಶಾಲೀ ಕಾವ್ಯ. ಕನ್ನಡಿಗರನ್ನು ಮತ್ತೆ ಮತ್ತೆ ಕಾಡುತ್ತಲೇ ಬಂದ ಪಠ್ಯ. ಕುಮಾರವ್ಯಾಸನು ಈ ಭಾಗವನ್ನು ಭಾಮಿನೀ ಷಟ್ಪದಿಯಲ್ಲಿ ಬರೆದರೆ ಗಮಕಿಗಳು ಗದಾಯುದ್ಧವನ್ನು ಜನರ ಹತ್ತಿರ ಕೊಂಡೊಯ್ದರು. ಡಚ್ ವಿದ್ವಾಂಸ ಅರ್ನಾಲ್ಡ್ ಬಾಕೆ 1927ರಷ್ಟು ಹಿಂದೆ ಶಾಲಾ ಮಾಸ್ತರರು ಈ ಪಠ್ಯವನ್ನು ಹಾಡಿನ ಮೂಲಕ ಹೇಗೆ ಮಕ್ಕಳಿಗೆ ತಲುಪಿಸುತ್ತಿದ್ದರು ಎಂಬುದನ್ನು ದಾಖಲಿಸಿದ್ದಾನೆ. ನಾನು ಮೊದಲು ಗದಾಯುದ್ಧದ ಕತೆ ಕೇಳಿದ್ದು 1964ರಷ್ಟು ಹಿಂದೆ ಪಂಜದಲ್ಲಿ ನಡೆದ ಹರಿಕತೆಯೊಂದರಲ್ಲಿ. ಕವಿಭೂಷಣ ವೆಂಕಪ್ಪ ಶೆಟ್ಟರು ಗದಾಯುದ್ಧವನ್ನು ಯಕ್ಷಗಾನ ಪ್ರಸಂಗವಾಗಿ ಬರೆದ ಮೇಲೆ ಅದು ಜನರ ನಡುವೆ ಸೇರಿಹೋಯಿತು. ಅಂದರೆ 10ನೇ ಶತಮಾನದ ಪಠ್ಯವೊಂದು ಸ್ಥಿತ್ಯಂತರಗೊಳ್ಳುತ್ತಾ ಬದುಕುಳಿದ ಬಗೆ ವಿಶೇಷವಾದ ಸಂಗತಿಯಾಗಿದೆ.
ಈಗ ರನ್ನನ ಗದಾಯುದ್ಧವು ಇಂಗ್ಲೀಷಿನಲ್ಲಿ ಪ್ರಕಟವಾಗಿದೆ. ಇದು ಜೆ ಎನ್ ಯು ಕನ್ನಡ ಅಧ್ಯಯನ ಪೀಠದ ಐದನೇ ಪ್ರಕಟಣೆ.
Reviews
There are no reviews yet.