Description
ಜಪಾನಿನ ಆಧುನಿಕ ಕಥನ ಸಾಹಿತ್ಯವನ್ನು ಹೊರಳುದಾರಿಗೆ ಎಳೆತಂದ ಯೂನೊಸ್ಕೆ ಅಕ್ ತಗವ ಕಥೆಗಳು ಕಾಲ ಮತ್ತು ದೇಶಾತೀತವಾದ ಮನುಷ್ಯನ ಅಂತರಂಗಕ್ಕೆ ಕನ್ನಡಿ ಹಿಡಿಯುವ, ಸೌಂದರ್ಯ ಮತ್ತು ಭೀಬತ್ಸ ಮಿಲನಗೊಂಡ ವಿಲಕ್ಷಣ ಕಥಾನಕಗಳು. ತನ್ನ ಮನಸ್ಸಿನ ತುಮುಲಗಳನ್ನೆಲ್ಲ ಬಸಿದು ಕತೆಯಾಗಿಸಿದ ಅಕ್ ತಗವ ಸಮಾಜದ ಮೌಲ್ಯಗಳನ್ನು ಪ್ರಶ್ನಿಸುತ್ತಾನೆ. ಮನುಷ್ಯನ ಸಂಕೀರ್ಣ ಮನಸ್ಸಿನ ಭಾವಗಳಿಗೆ ನಾಟಕೀಯ ರೂಪ ನೀಡುತ್ತಾನೆ. ಅಂತರಂಗದ
ಪಾತಳಗಲ್ಲಿರುವ ಅಹಂಕಾರವನ್ನು ಹೊರಗೆಳೆಯುತ್ತಾನೆ. ಮನುಷ್ಯನ ಅಪ್ರಮಾಣಿಕತೆಗೆ ಕನ್ನಡಿ ಹಿಡಿಯುತ್ತಾನೆ. ಚರಿತ್ರೆ , ಪುರಾಣ, ಸಮಕಾಲಿನ
ಬದುಕು, ಪ್ಯಾಂಟಸಿ ಎಲ್ಲವನ್ನು ಬಳಸಿಕೊಂಡು ಅನನ್ಯವಾದ ಮನುಷ್ಯನ ಅಂತರಂಗವನ್ನು ಶೋಧಿಸಿ ಕತೆಯಾಗಿಸುತ್ತಾನೆ, ಅಹಮಿಕೆ ಸ್ವಾಭಿಮಾನ, ವಾಸ್ತವ-ಭ್ರಮೆ, ನೀತಿ ಅನೀತಿಗಳ ನಡುವೆ ಗೆರೆಕೊರೆಯದೆ ವಿಹ್ವಲಗೂಳಿಸುವ ಅಪೂರ್ವವಾದ ಕಥೆಗಳಿಂದ ಬೆಚ್ಚಿಬೀಳಿಸುತ್ತಾನೆ. ಅಪೂರ್ವವಾದ
ವ್ಯಂಗ್ಯ, ರಂಜನೆ, ಸಿಟ್ಟು ಬೆರೆತ ಸಾಮಾಜಿಕ ಟೀಕೆಯ ಅವನ ನಿರೂಪಣೆಗಳು ಜೆನ್ ಕತೆಗಳ ಅಸಂಗತವನ್ನು ಆಳವಾದ ದರ್ಶನವನ್ನು ಕಟ್ಟುವ ರಚನೆಗಳು.
ಜಗತ್ತಿನ ಸಿನಿಮಾ ನೋಡುಗರು ಬೆಚ್ಚಿ ಎದ್ದುಕೂರುವಂತೆ ಮಾಡಿದ ಅಕಿರ ಕೊರೊಸಾವನ ರಾಶೊಮಾನ್ ಚಿತ್ರವು ಅದರ ನಿರ್ದೇಶಕನ
ಜೊತೆಯಲ್ಲಿಯೇ ಕತೆಗಾರ ಅಕ್ ತಗವನನ್ನು ಜಗತ್ತಿಗೆ ಪರಿಚಯಿಸಿತು, ಈಗಲೂ ಜಗತ್ತಿನ ಸಾಹಿತ್ಯ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಾಗಿರುವ ಯೂನೊಸ್ಕೆ ಅಕ್ತಗವನ ಕಥೆಗಳು ಕನ್ನಡಕ್ಕೆ ಈ ಪ್ರಮಾಣದಲ್ಲಿ
ಪರಿಚಯವಾಗುತ್ತಿರುವುದು ಇದೇ ಮೊದಲು.
Reviews
There are no reviews yet.