ರವೀಂದ್ರನಾಥ ಠಾಕೂರ್ ಅವರ ಎರಡು ನಾಟಕಗಳು

100.00

Add to Wishlist
Add to Wishlist
Email

Description

ರವೀಂದ್ರನಾಠ ಠಾಕೂರ್ ಅವರ ನೂರ ಐವತ್ತನೆಯ ಜನ್ಮಶತಾಬ್ದಿಯು ದೇಶಾದ್ಯಂತ ಆಚರಣೆಯಾಗುತ್ತಿರುವ ಈ ಸಂದರ್ಭದಲ್ಲಿ, ಅಕ್ಷರ ಪ್ರಕಾಶನವು ಠಾಕೂರರ ಈ ಎರಡು ನಾಟಕಗಳ ಕನ್ನಡಾನುವಾದದ ಪ್ರಕಟಣೆಯ ಮೂಲಕ ಈ ಸ್ಮ ತಿ ಸಂಭ್ರಮಕ್ಕೆ ಸೇರಿಕೊಳ್ಳುತ್ತಿದೆ. ದಿ| ಕೆ.ವಿ. ಸುಬ್ಬಣ್ಣನವರು ಹತ್ತಾರು ವರ್ಷಗಳ ಹಿಂದೆಯೇ ಸಿದ್ಧಪಡಿಸಿದ ಅನುವಾದಗಳು ಇವು. ೧೯೯೮ರಲ್ಲಿ, ನೀನಾಸಮ್ ತಂಡದ ಪ್ರಯೋಗಕ್ಕಾಗಿ ಅವರು ಠಾಕೂರರ ‘ರಕ್ತ ಕರಬೀ’ ನಾಟಕವನ್ನು ‘ಕೆಂಪು ಕಣಗಿಲೆ’ ಎಂದೂ ೨೦೦೪ರಲ್ಲಿ ನೀನಾಸಮ್ ತಿರುಗಾಟದ ಪ್ರಯೋಗಕ್ಕಾಗಿ ‘ರಾಜಾ ಓ ರಾಣಿ’ ನಾಟಕವನ್ನು ‘ರಾಜ ಮತ್ತು ರಾಣಿ’ ಎಂದೂ ಕನ್ನಡೀಕರಿಸಿದ್ದರು. ಅವೆರಡೂ ಅನುವಾದಗಳನ್ನೂ ಈಗ ಸಣ್ಣಪುಟ್ಟ ಪರಿಷ್ಕಾರಗಳೊಂದಿಗೆ ಇಲ್ಲಿ ಪ್ರಕಟಿಸಲಾಗುತ್ತಿದೆ. ಮೇಲೆ ಉಲ್ಲೇಖಿಸಿದ ಪ್ರಯೋಗಗಳ ಸಂದರ್ಭದಲ್ಲಿ ಈ ನಾಟಕಗಳನ್ನು ಕುರಿತು ಪ್ರಕಟವಾದ ಟಿಪ್ಪಣಿಗಳೂ ಅನುಬಂಧದಲ್ಲಿ ಸೇರಿವೆ. ರಂಗಭೂಮಿಯ ಮೇಲೆ ತರುವುದಕ್ಕಾಗಿಯೇ ತಯಾರಾದ ಈ ಕನ್ನಡ ರೂಪಗಳು ರಂಗಾಸಕ್ತರನ್ನೂ ಮತ್ತು ಸಾಹಿತ್ಯದ ವಿದ್ಯಾರ್ಥಿಗಳನ್ನೂ ಆಕರ್ಷಿಸಲೆಂದು ನಮ್ಮ ಹಂಬಲ.

Reviews

There are no reviews yet.

Be the first to review “ರವೀಂದ್ರನಾಥ ಠಾಕೂರ್ ಅವರ ಎರಡು ನಾಟಕಗಳು”

Your email address will not be published.