Sale!

ಅರೆಶತಮಾನದ ಮೌನ

(1 customer review)

171.00

Add to Wishlist
Add to Wishlist
Email

1 review for ಅರೆಶತಮಾನದ ಮೌನ

  1. ಶ್ರೀನಿವಾಸ ನಟೇಕರ್‌ (verified owner)

    ಯಾನ್ ರಫ್-ʼಓʼಹರ್ನ್ ಬರೆದ “ಅರೆಶತಮಾನದ ಮೌನ” ವನ್ನು ಕನ್ನಡದ ಭಾಷೆಗೆ ಅತ್ಯುತ್ತಮವಾಗಿ ನಮ್ಮ ಭಾಷೆಯದೇ ಪುಸ್ತಕವೆಂಬಂತೇ ಅರುಣ್ ಅನುವಾದ ಮಾಡಿದ್ದಾರೆ. ಇದು ಅರೆಶತಮಾನಕ್ಕೂ ಮೀರಿ ಉಳಿಯುವ ಅನುವಾದದ ಕೃತಿ. ಅವರಿಗೆಷ್ಟು ವಂದನೆ ಸಲ್ಲಿಸಿದರೂ ಸಾಲದು. ಯುದ್ಧದ ಬೀಕರತೆಯನ್ನು ಮನ ಮುಟ್ಟಿ ಓದುಗನಿಗೂ ಕಣ್ಣೀರು ತರಿಸುವಂತೆ ಅಂತರಂಗ ಕಲಕುವಂತ ಘಟನೆಗಳನ್ನು ಈ ಆತ್ಮಕಥೆ ಒಳಗೊಂಡಿದೆ. ಒಂದು ಆತ್ಮಕಥೆ ಸಾಮಾಜಿಕ ಚಿಂತನೆಗಳು, ಜನತೆಯ ಸಾವು, ನೋವುಗಳು ಆತ್ಮಕಥೆಯ ಮೂಲಕ ಮೂಡಿದಾಗ ಆ ಕೃತಿ ಜಾಗತಿಕ ಕೃತಿಯ ಮೌಲ್ಯವನ್ನು ಹೊಂದುತ್ತದೆ ಅನ್ನುವುದಕ್ಕೆ ಈ ಕಥೆ ಸಾಕ್ಷಿ. ಇನ್ನೂ ಅರೆಶತಮಾನವಾದರೂ ಓದುವಂತೆ ಮಾಡುವ ಕೃತಿ ಇದು.
    ಅರೆಶತಮಾನದವರೆಗೂ ಸಮಾಜಕ್ಕೆ ಅಂಜಿ, ತನ್ನ ಮಕ್ಕಳು, ಮೊಮ್ಮಕ್ಕಳು ಏನು ಅಂದುಕೊಳ್ಳುತ್ತಾರೋ ಎಂದು ಮೌನವಾಗಿದ್ದ ಯಾನ್ ಹರ್ನ್ ಕೊನೆಗೂ ಜಪಾನಿನಲ್ಲಿ ಸಾಕ್ಷಿ ಹೇಳು ತೀರ್ಮಾನಿಸುತ್ತಾರೆ. ಸೈನ್ಯದ ಆಧಿಕಾರಿಗಳಿಗಾಗಿಯೇ ಮೀಸಲಿಟ್ಟ ವೇಶ್ವಾಗೃಹದಲ್ಲಿ ಬಂಧಿಯಾದ ಯಾನ್ ಹರ್ನ್ ಸೇರಿದಂತೆ ಸುಮಾರು 30 ಹೆಣ್ಣಿನ ನೋವಿನ, ಕಣ್ಣೀರಿನ ಕಥೆ. ನನಗಿಷ್ಟವಾದದ್ದು ಸುತ್ತಮುತ್ತಲಿನ ವಾತಾವರಣವನ್ನು, ಪರಿಸರವನ್ನು, ಎಲ್ಲರ ನೋವುಗಳನ್ನು ಕಣ್ಣಿಗೆ ಕಟ್ಟುವಂತೆ ಬರೆದ ಪರಿ ನನಗಿಷ್ಟವಾಯಿತು. ಯುದ್ಧದ ಭೀಕರತೆಯನ್ನು ಓದಿದಾಗ ಹೃದಯ ತಟ್ಟುತ್ತದೆ, ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ. ಯುದ್ಧವೆಂದರೆ ವಿಜಯೋತ್ಸವ, ಬರೀ ಅಕ್ರಮಣವಲ್ಲ, ಅದು ನೋವು, ಅತ್ಯಾಚಾರಗಳ ಗೂಡು.
    ನಮ್ಮ ಪ್ರಧಾನಿ ಯುದ್ಧಪ್ರಿಯನಾಗಿದ್ದರೂ, ಇದನ್ನು ಓದಿದಾಗ “ಯುದ್ಧ ಬೇಡ” ವೆಂದನಿಸುವಂತೆ ಕೃತಿ ಮೂಡಿ ಬಂದಿದೆ. ಯುದ್ಧದ ಹೆಸರಲ್ಲಿ ಮಾನವತೆ ಕರಗಿ ಹೋದರೂ, ಯದ್ಧದ ಬಳಿಕ ಜಪಾನಿಯರೇ ಸೈನ್ಯದ ದುಷ್ಕೃತ್ಯಗಳನ್ನು ಖಂಡಿಸುವುದು, ಸೈನ್ಯದ ಅಧಿಕಾರಿಗಳಿಗೆ ತಾವು ಮಾಡಿದ ತಪ್ಪಿಗೆ ಪಶ್ಚಾತಾಪ ಪಡುವುದೂ ಆತ್ಮಕಥೆಯಲ್ಲಿ ನಿರೂಪಿಸಿರುವುದು ಎಲ್ಲೋ ಮಾನವತೆಯ ಎಳೆ ಬದುಕಿದೆ ಎಂದು ತೋರಿಸುತ್ತದೆ. ಖಂಡಿತವಾಗಿ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ. ಯಾನ್ ಹರ್ನ್ ರವರ ಕೊನೆಯ ಮಾತುಗಳೊಂದಿಗೆ ನನ್ನ ಅಭಿಪ್ರಾಯವನ್ನು ಕೊನೆಗೊಳಿಸುತ್ತೇನೆ “ಎಂದೆಂದೂ ಅಂಥ ಕ್ರೂರ ಯುದ್ಧಾಪರಾಧಗಳು ನಡೆಯಬಾರದು ಎಂಬ ಏಕೈಕ ಉದ್ದೇಶದಿಂದ ನಾನು ನನ್ನ ಅರೆಶತಮಾನದ ಮೌನ ಮುರಿದು ಹೊರಜಗತ್ತಿಗೆ ನನ್ನ ಕತೆಯನ್ನು ಹೇಳಿದ್ದೇನೆ”.

Add a review

Your email address will not be published.