ರಿಕ್ಕು ರಿಕ್ಷಣ್ಣಾ

90.00

Add to Wishlist
Add to Wishlist
Email

Description

ವೃತ್ತಿಯಿಂದ ಇಂಜಿನಿಯರ್ ಆಗಿರುವ ಅನುಪಮಾ ಕೆ ಬೆಣಚಿನಮರಡಿ ಅವರು ಒಬ್ಬ ಸೃಜನಶೀಲ ಬರಹಗಾರ್‍ತಿ. ಹಲವಾರು ಪತ್ರಿಕೆಗಳಿಗೆ ಮಕ್ಕಳ ಕತೆ, ಪ್ರಬಂಧ, ವಿಜ್ಞಾನ ಮತ್ತು ಜೀವವಿಜ್ಞಾನದ ಬರಹಗಳನ್ನು ಬರೆದಿದ್ದಾರೆ. ಪರಿಸರದ ಮೇಲೆ ತುಂಬ ಒಲವಿರುವ ಇವರಿಗೆ, ತಮ್ಮ ಇಬ್ಬರು ಪುಟ್ಟ ಮಕ್ಕಳೊಂದಿಗೆ ಸುತ್ತಮುತ್ತಲಿನ ಪಕ್ಷಿ ಮತ್ತು ಕೀಟ ಪ್ರಪಂಚವನ್ನು ಗಂಟೆಗಟ್ಟಲೆ ಗಮನಿಸುತ್ತಾ ಅವರ ಪ್ರಶ್ನೆಗಳಿಗೆ ಉತ್ತರಿಸುವುದೆಂದರೆ ತುಂಬ ಇಷ್ಟ. ಪ್ರಾಣಿಗಳೊಂದಿಗೆ ಮಾತಾಡಬಲ್ಲ ರಿಕ್ಕು ಎಂಬ ಒಂದು ಚಂದದ ರಿಕ್ಷಾದ ಕತೆಯನ್ನು “ರಿಕ್ಕು ರಿಕ್ಷಣ್ಣಾ” ದಲ್ಲಿ ಅನುಪಮಾ ಹೇಳಿದ್ದಾರೆ. ಒಂದೊಂದು ಪುಟದಲ್ಲೂ ಸಂತೋಷ್ ಸಸಿಹಿತ್ಲು ಅವರು ಬಿಡಿಸಿದ ಬಣ್ಣಬಣ್ಣದ ಚಿತ್ರಗಳು ಮಕ್ಕಳನ್ನು ಮೋಡಿ ಮಾಡುವುದರಲ್ಲಿ ಎರಡು ಮಾತಿಲ್ಲ.

Reviews

There are no reviews yet.

Be the first to review “ರಿಕ್ಕು ರಿಕ್ಷಣ್ಣಾ”

Your email address will not be published.