ಋತ (ವಾರ್ಷಿಕ ಚಂದ – Rs 600)

600.00

Add to Wishlist
Add to Wishlist
Email

Description

ಕನ್ನಡಕ್ಕೆ ಜಗತ್ತಿನ ಎಲ್ಲ ಜ್ಞಾನಧಾರೆಗಳು ಬರಬೇಕು ಎನ್ನುವ ಆಶಯವನ್ನು ಆಗುಮಾಡುವ ಒಂದು ಪ್ರಯತ್ನ: “ಋತ’ ನಿಯತಕಾಲಿಕ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಪರಿಸರ-ಜೀವಿಶಾಸ್ತ್ರ, ಆಟೋಟ, ಕಲೆ-ಸಂಸ್ಕೃತಿ, ಶಿಕ್ಷಣ ಸೇರಿದಂತೆ ನಮ್ಮ ದೈನಂದಿನ ಬದುಕನ್ನು ಪ್ರಭಾವಿಸುವ ಭಾಗವಾಗಿರುವ ಎಲ್ಲ ಜ್ಞಾನಶಾಖೆಗಳ ಕುರಿತು ಚರ್ಚೆ-ಸಂವಾದ ನಮ್ಮ ಉದ್ದೇಶ, ಅಸಹನೆ ದೈನಂದಿನ ಭಾಗವಾಗಿರುವ ಇಂದಿನ ಜಗತ್ತಿನಲ್ಲಿ ಸಂವಾದವನ್ನು ಆರಂಭಿಸುವ ಹಾಗೂ ಮುನ್ನಡೆಸುವ ವೇದಿಕೆ-ಮನಸ್ಸುಗಳನ್ನು ಸೃಷ್ಟಿಸಲು ನಾವು ನೀಡುತ್ತಿರುವ ಕಿರು ಕಾಣಿಕೆ-‘ಋತ’.

ನಮ್ಮದು ಬಹು ಧರ್ಮ, ಭಾಷೆ, ಜನಾಂಗಗಳು, ನಂಬಿಕೆಗಳು ಮತ್ತು ಸಂಸ್ಕೃತಿಗಳು ಇರುವ ದೇಶ, ಸಾರ್ವಜನಿಕ ಹಿತಾಸಕ್ತಿ ಮತ್ತು ಪ್ರಜಾಸತ್ತಾತ್ಮಕ ಆಶಯಗಳನ್ನು ಎತ್ತಿಹಿಡಿಯುವುದು ನಮ್ಮ ಧೈಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ನಮ್ಮ ಆದರ್ಶ. ಸಂವಾದವನ್ನು ಗಾಂಭೀರದಿಂದ, ಘನತೆಯನ್ನು ಕಳೆದುಕೊಳ್ಳದೆ ನಡೆಸಬೇಕು ಎನ್ನುವುದು ನಮ್ಮ ನಿಲುವು.
ಪ್ರತಿ ಸಂಚಿಕೆ ಒಬ್ಬ ಚಿಂತಕ, ಒಂದು ಸಮಸ್ಯೆ-ವಿಷಯ ಇಲ್ಲವೇ ಒಂದು ತತ್ತ್ವ-ಸಿದ್ಧಾಂತದ ಬಗ್ಗೆ ಇರಲಿದೆ. ಕುರಿತ ಎಲ್ಲ ದೃಷ್ಟಿಕೋನಗಳನ್ನು ಪರಿಚಯಿಸುವುದು, ಸಂವಾದ ಹಾಗೂ ಚರ್ಚೆಗೆ ವೇದಿಕೆ ಕಲ್ಪಿಸುವುದು ನಮ್ಮ ಉದ್ದೇಶ. ‘ಋತ’ ನಿಮ್ಮ ಪತ್ರಿಕೆ.

– ಸಂಪಾದಕ ಮಂಡಳಿ, ಋತ

ಸೂಚನೆ : ಸಾಹಿತ್ಯಪ್ರತ್ರಿಕೆಯ ಪ್ರಕಟಣೆ ಮತ್ತು ರವಾನೆಯ ಸಂಪೂರ್ಣ ಜವಾಬ್ದಾರಿ ಪತ್ರಿಕೆಯ ಪ್ರಕಾಶಕರಾಗಿರುತ್ತದೆ. ಋತುಮಾನ ಸ್ಟೋರ್, ಈ ಪತ್ರಿಕೆಗೆ ಜನ ಚಂದಾದಾರಗಲು ಸೌಲಭ್ಯವನ್ನು ಮಾತ್ರ ಇಲ್ಲಿ ನೀಡುತ್ತಿದೆ. ದೂರು, ಸಲಹೆ, ಸೂಚನೆಗಳಿದ್ದಲ್ಲಿ ನೇರವಾಗಿ ಪ್ರತ್ರಿಕೆಯ ವಿಳಾಸವನ್ನು ಸಂಪರ್ಕಿಸಿ.

ಮೊಬೈಲ್: +919448076207 | ಇಮೇಲ್: email: [email protected]

Reviews

There are no reviews yet.

Be the first to review “ಋತ (ವಾರ್ಷಿಕ ಚಂದ – Rs 600)”

Your email address will not be published.