Sale!

ಸಫಾ

324.00

Add to Wishlist
Add to Wishlist
Email

Description

ಲೇಖಕರು: ವಾರಿಸ್ ಡಿರಿ, Waris Dirie
ಅನುವಾದಕರು: ಪ್ರಸಾದ್ ನಾಯ್ಕ್, Prasad Naik

ಜಿಬೌಟಿಯ ಕೊಳಚೆಪ್ರದೇಶವೊಂದರಲ್ಲಿ ನೆಲೆಸಿರುವ ಹೆಣ್ಣು ಮಗು ಸಫಾ. ಜಿಬೌಟಿ ಎಂಬ ಹೆಸರಿನ ದೇಶವೂ ಇದೆ ಎಂದು ಹೊರಜಗತ್ತಿನ ದೇಶಕ್ಕೆ ಹೇಳಬೇಕಾದ ಪರಿಸ್ಥಿತಿಯುಳ್ಳ, ಆಫ್ರಿಕಾದ ಪುಟ್ಟ ಕೊಂಬಿನಂತಿರುವ ದೇಶದ ಮೂಲೆಯಲ್ಲಿ ಅನಾಮಿಕಳಂತಿದ್ದ ಸಫಾ ಒಂದು ಕಡೆ…

ಸೊಮಾಲಿಯಾದ ಮರಳುಗಾಡಿನಿಂದ ಬಂದು ಫ್ಯಾಷನ್ ಜಗತ್ತನ್ನು ಆಳಿ, ಹಾಲಿವುಡ್ ನ ಅಂಗಳಕ್ಕೂ ಕಾಲಿಟ್ಟು, ವಿಶ್ವಸಂಸ್ಥೆಯ ವಿಶೇಷ ರಾಯಭಾರಿಯಾಗಿ ಯೋನಿ ಛೇದನದ ವಿರುದ್ಧ ಸಾರಿದ ಮಹಾಯುದ್ಧದಿಂದಾಗಿ ವಿಶ್ವದಾದ್ಯಂತ ಸಂಚಲನವನ್ನು ಮೂಡಿಸಿದ ಲೇಖಕಿ, ನಟಿ, ಸೂಪರ್-ಮಾಡೆಲ್ ಹಾಗೂ ಸಾಮಾಜಿಕ ಕಾರ್ಯಕರ್ತೆ ವಾರಿಸ್ ಡಿರೀ ಇನ್ನೊಂದು ಕಡೆ…

ಇವರಿಬ್ಬರನ್ನೂ ಕೊಂಡಿಯಂತೆ ಬೆಸೆಯುವ “ಡೆಸರ್ಟ್ ಫ್ಲವರ್” ಎಂಬ ಒಂದು ಚಲನಚಿತ್ರ… ವಾರಿಸ್ ಡಿರೀಯ ಆತ್ಮಕಥನವನ್ನೇ ತೆರೆಯ ಮೇಲೆ ಮೂಡಿಸಿದ ಚಿತ್ರದಲ್ಲಿ ವಾರಿಸ್ ಳ ಬಾಲ್ಯದ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸುವ ಸಫಾ ಎಂಬ ಮುದ್ದು ಬಾಲಕಿ…

ಸಫಾಳನ್ನು ಯೋನಿಛೇದನಕ್ಕೊಳಪಡಿಸಬಾರದೆಂಬ ಒಪ್ಪಂದವನ್ನು ವಾರಿಸ್ ಡಿರೀಯ ಡೆಸರ್ಟ್ ಫ್ಲವರ್ ಫೌಂಡೇಷನ್ ಸಫಾಳ ಹೆತ್ತವರೊಂದಿಗೆ ಮಾಡಿದ್ದು ಹೌದಾದರೂ ಸಫಾಳ ಪತ್ರವೊಂದು ವಾರಿಸ್ ರನ್ನು ಜಿಬೌಟಿಯವರೆಗೂ ಹೇಗೆ ಎಳೆತಂದಿತು?

ಇದು ಸಫಾಳ ಕಥೆ… ತೂಗುಕತ್ತಿಯಂತೆ ತಲೆಯ ಮೇಲೆ ತೂಗುತ್ತಿರುವ ಯೋನಿ ಛೇದನವೆಂಬ ಸಾಮಾಜಿಕ ಅನಿಷ್ಟದ ಭಯದ ನೆರಳಲ್ಲೇ ಜೀವಿಸುತ್ತಿರುವ ಲಕ್ಷಾಂತರ ಸಫಾರ ಕಥೆ… ಅನಸ್ತೇಸಿಯಾಗಳ ನೆರವಿಲ್ಲದೆ, ತುಕ್ಕುಹಿಡಿದ ರೇಜರ್ ಬ್ಲೇಡುಗಳಡಿಗೆ ಹೇಳಹೆಸರಿಲ್ಲದಂತೆ ಬಲಿಯಾಗುತ್ತಿರುವ ಅಸಂಖ್ಯಾತ ಸಫಾರ ಕಥೆ…

ವಾರಿಸ್ ಡಿರೀ ಖುದ್ದಾಗಿ ಹೇಳುವಂತೆ ಇದೊಂದು ಮರುಭೂಮಿಯ ಹೂಗಳ ಕಥೆ…

Reviews

There are no reviews yet.

Be the first to review “ಸಫಾ”

Your email address will not be published.