Description
ಸಂಪಾದಕರು: ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ
ಪ್ರಕಾಶನ: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
******************
ರನ್ನ ಕವಿಯ (ಕ್ರಿ.ಶ. 993) ‘ಸಾಹಸಭೀಮವಿಜಯಮ್’ (‘ಗದಾಯುದ್ಧಮ್’) ಎಂಬ ಜನಪ್ರಿಯ, ವಿದ್ವಜ್ಜನಪ್ರಿಯ ಚಂಪೂಕಾವ್ಯದ (ಸು.1000) ಹೊಸ ಪರಿಷ್ಕರಣವಿದು.
ಹಸ್ತಪ್ರತಿಗಳ ಲಭ್ಯತೆಯ ಕೊರತೆ, ಪಾಠನಿರ್ಣಯದ ಹಲವು ಬಗೆಯ ಕ್ಲೇಶಗಳು ಇವುಗಳ ನಡುವೆಯೇ ಈ ಪರಿಚಿತಪಠ್ಯವನ್ನು ವ್ಯಾಕರಣ-ಛಂದಸ್ಸು, ಅರ್ಥ-ಆಶಯ ಇವುಗಳ ದೃಷ್ಟಿಯಿಂದ ಇನ್ನಷ್ಟು ಉತ್ತಮಪಡಿಸುವ ಒಂದು ಸಂಪಾದಕೀಯ ಪ್ರಯತ್ನ ಇಲ್ಲಿಯದು. ಈ ಪ್ರಯತ್ನದಿಂದ ಕಾವ್ಯದ ವಾಚನ-ವ್ಯಾಖ್ಯಾನಗಳಿಗೆ, ಅಧ್ಯಯನ ಸಂಶೋಧನೆಗಳಿಗೆ ಹೆಚ್ಚು ಅನುಕೂಲವಾಗುವುದೆಂದು ಸಂಪಾದಕರ, ಪ್ರಕಾಶಕರ ನಿರೀಕ್ಷೆಯಾಗಿದೆ.
ಕಾವ್ಯಾಭ್ಯಾಸದ ಸಾಧನಸಾಮಗ್ರಿಯನ್ನು ಹೆಚ್ಚಿಸುವ ಅನುಬಂಧಗಳಲ್ಲಿ ಕೂಡ ಕೆಲವು ಹಳೆಯ ವಿಮರ್ಶೆ ವಿವೇಚನೆಗಳು ಇನ್ನಷ್ಟು ಪರಿಷ್ಕಾರಗೊಂಡಿವೆ, ಹೊಸ ಸಂಗತಿಗಳು ಸೇರಿವೆ. ಇವುಗಳ ಅನುಕ್ರಮ :
1. ಸಂಪಾದಕೀಯ ಪಾಠಪಟ್ಟಿಕೆ
2. ಪಾಠವಿಚಾರದ ಟಿಪ್ಪಣಿಗಳು
3. ವಸ್ತುವಿಚಾರದ ಟಿಪ್ಪಣಿಗಳು
4. ಐತಿಹಾಸಿಕ ವಿವರಗಳು : ವಿಶ್ಲೇಷಣೆ, ವಂಶಾವಳಿ
5. ಶಬ್ದಾರ್ಥಕೋಶ
6. ಹಸ್ತಪ್ರತಿಗಳ ಸೂಚಿ, ಪೀಳಗೆ ಮತ್ತು ಪರಿಷ್ಕರಣಗಳು
7. ಪದ್ಯಗಳ ಅಕಾರಾದಿ ಸೂಚಿ,
ಪ್ರೊ. ತೀ.ನಂ. ಶ್ರೀಕಂಠಯ್ಯನವರ ‘ ರನ್ನ ಕವಿ ಮತ್ತು ಅವನ ಕೃತಿಗಳು’ ಎಂಬ ಉಚಿತವಿಸ್ತಾರದ ಉಪನ್ಯಾಸ-ಲೇಖನ ಈ ಪರಿಷ್ಕರಣದ ಪೀಠಿಕೆಯಾಗಿದ್ದು, ಕವಿಕಾವ್ಯಪರಿಚಯದ ಹಾಗೂ ಸಹೃದಯ ವಿಮರ್ಶೆಯ ಒಂದು ಸೊಗಸಾದ ಪ್ರವೇಶಿಕೆಯೇ ಆಗಿದೆ.
(ಬೆನ್ನುಡಿಯಿಂದ)
Reviews
There are no reviews yet.