Description
ನಾವು ಸಿದ್ಧಾಂತಗಳ ಬಗ್ಗೆ ಏಕೆ ಚರ್ಚೆ ಮಾಡಬೇಕು? ಎಂದು ಕೇಳಿದರೆ ಅದಕ್ಕೆ ಉತ್ತರ: ಇಪ್ಪತ್ತನೆಯ ಶತಮಾನದ ಜಗತ್ತು ಎಂದೂ ಕಂಡರಿಯದ ಹಿಂಸೆಯ ಇತಿಹಾಸ. ಈ ಇತಿಹಾಸವು ಸೈದ್ಧಾಂತಿಕ ಹಿಂಸೆಯ ಭೀಕರವಾದ ಇತಿಹಾಸವಾಗಿದೆ. ಮನುಷ್ಯ ನಾಗರಿಕತೆಯ ಇತಿಹಾಸದಲ್ಲಿ ಹಿಂಸೆಯು ಸ್ಥಾಯಿಯಾಗಿದೆ ಎನ್ನುವುದು ನಿಜವಾದರೂ, ಇಪ್ಪತ್ತನೆಯ ಶತಮಾನದ ವಿಶಿಷ್ಟವಾದ ಹಿಂಸೆಯು ಕೆಲವು ಬೃಹತ್ ಸಿದ್ಧಾಂತಗಳ ಆಧಾರದ ಮೇಲೆ ನಡೆಯಿತು. ಇವುಗಳಲ್ಲಿ ಮುಖ್ಯವಾದವು. ನಾಝಿವಾದ, ಫ್ಯಾಸಿಸಮ್ ಮತ್ತು ಸರ್ವಾಧಿಕಾರಿವಾದ ಇವುಗಳು ಎರಡು ಮಹಾಯುದ್ಧಗಳಿಗೆ ಕಾರಣವಾದವು ಮತ್ತು ಅನೇಕ ದೇಶಗಳಲ್ಲಿ ಅಸಂಖ್ಯಾತ ಮನುಷ್ಯರ ಕೊಲೆಗೆ ಕಾರಣವಾದ ಸರ್ವಾಧಿಕಾರಿ ವ್ಯವಸ್ಥೆಗಳಿಗೆ ಕಾರಣವಾದವು. ಈ ಹಿಂಸೆಯನ್ನು ಕೇವಲ ಸಿದ್ಧಾಂತಗಳ ಪರಿಣಾಮವೆಂದು ನೋಡುವುದು ಅಚಾರಿತ್ರಿಕವಾಗಬಹುದಾದರೂ ಅದಕ್ಕೆ ಪ್ರಮುಖ ಕಾರಣಗಳು ಸಿದ್ಧಾಂತಗಳು ಎನ್ನುವುದೂ ನಿಜವಾಗಿದೆ. ಹೀಗಾಗಿ ಆಧುನಿಕ ಸಮಾಜಗಳಲ್ಲಿ ಸಿದ್ಧಾಂತಗಳು ಹೇಗೆ ಕೆಲಸ ಮಾಡುತ್ತವೆ, ಹೇಗೆ ಸ್ವೀಕೃತವಾಗುತ್ತವೆ ಹಾಗೂ ವ್ಯಾಪಕವಾದ ಹಾಗೂ ವ್ಯವಸ್ಥಿತವಾದ ಹಿಂಸೆಗೆ ಹೇಗೆ ಕಾರಣವಾಗುತ್ತವೆ ಎನ್ನುವುದರ ಅಧ್ಯಯನವು ಅವಶ್ಯಕವಾಗಿದೆ. ಏಕೆಂದರೆ ನಾವು ಬದುಕುತ್ತಿರುವ ಇಪ್ಪತ್ತೊಂದನೆಯ ಶತಮಾನವು ಕೂಡ ಸೈದ್ಧಾಂತಿಕ ಹಿಂಸೆಯ ಕಡೆಗೆ ಚಲಿಸುತ್ತದೆ.
-ರಾಜೇಂದ್ರ ಚೆನ್ನಿ
(ಒಳಗಿನ ಪುಟಗಳಿಂದ)
Reviews
There are no reviews yet.