Description
ಪಿ.ಆರಡಿಮಲ್ಲಯ್ಯ ಕಟ್ಟೇರ ಅವರು ಕರ್ನಾಟಕದ ಬಹಳ ಪ್ರಸಿದ್ದ ಹಾಗೂ ಜನಪ್ರಿಯ ಜನಪದ ಕಲೆಯಾದ ಬಯಲಾಟದ ಮೇಲೆ ಹೊಸ ಬೆಳಕು ಚೆಲ್ಲಲು ಪ್ರಸ್ತುತ ಕೃತಿಯಲ್ಲಿ ಪ್ರಯತ್ನಿಸಿದ್ದಾರೆ. ಬಯಲಾಟ ಸಂಕಥನದ ಹಿನ್ನೆಲೆಯಾಗಿ ಆರ್ಯ-ದ್ರಾವಿಡ ಸಂಘರ್ಷವನ್ನು ಪಿ. ಆರಡಿಮಲ್ಲಯ್ಯ ಕಟ್ಟೇರ ಇಲ್ಲಿ ವಿಮರ್ಶಿಸಿದ್ದಾರೆ. ಬಯಲಾಟಗಳ ಬಗ್ಗೆ ಇದುವರೆಗೆ ನಡೆದ ಅಧ್ಯಯನಗಳು ಬಹುಮಟ್ಟಿಗೆ ಅದರ ಇತಿಹಾಸ ಮತ್ತು ಪ್ರಯೋಗಗಳ ಬಗ್ಗೆ ಉದಾರವಾದಿ ನಿಲುವಿನ ಅಭಿಪ್ರಾಯಗಳನ್ನು ಪ್ರಕಟಿಸಿದರೆ, ಆರಡಿಯವರು ಆ ಸಾಂಪ್ರದಾಯಕ ಹಾದಿಯನ್ನು ಬಿಟ್ಟು, ಬಯಲಾಟ ಅಧ್ಯಯನಗಳ ಭಾಷಿಕ ಗಡಿರೇಖೆಗಳನ್ನು ಗಮನಾರ್ಹವಾಗಿ ವಿಸ್ತರಿಸುತ್ತಾ, ವಿವಿಧ ಕೃತಿಗಳ ಅಧ್ಯಯನದ ಮೂಲಕ ಅದಕ್ಕೊಂದು ಬಲವಾದ ತಾತ್ವಿಕ ಚೌಕಟ್ಟನ್ನು ನಿರ್ಮಿಸಿಕೊಡಲು ಪ್ರಯತ್ನಿಸಿದ್ದಾರೆ.
Reviews
There are no reviews yet.