Sale!

ಸಮಗ್ರ ಕಾಮರೂಪಿ

225.00

Add to Wishlist
Add to Wishlist
Email
SKU: B-SCY-SAM Categories: ,

Description

ಸಂಚಯ ಪ್ರಕಟಿಸಿರುವ “ಸಮಗ್ರ ಕಾಮರೂಪಿ” ಪತ್ರಕರ್ತ, ಲೇಖಕ ಎಂ. ಎಸ್. ಪ್ರಭಾಕರ ಅವರ ಬರಹಗಳ ಸಮಗ್ರ .

“ಕಾಮರೂಪಿ” ಎಂದೇ ನಾಡಿನ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿರುವ ಎಂ . ಎಸ್ . ಪ್ರಭಾಕರ ಕೋಲಾರದವರು . ಪೂರ್ಣ ಹೆಸರು ಮೊಟ್ಣಹಳ್ಳಿ ಸೂರಪ್ಪ ಪ್ರಭಾಕರ. ಪತ್ರಕರ್ತರೂ , ಅಧ್ಯಾಪಕರೂ ಆಗಿದ್ದ ಅವರು ತಮ್ಮ ಓದು – ಉದ್ಯೋಗಗಳ ಕಾರಣಕ್ಕೆ ಸರಿಸುಮಾರು ನಾಲ್ಕು ದಶಕಗಳಷ್ಟು ಧೀರ್ಘಕಾಲ ಕರ್ನಾಟಕದಿಂದ ಹೊರಗೆ ನೆಲೆಸಿದರು . ದಕ್ಷಿಣ ಆಫ್ರಿಕಾದ ಸ್ತಿತ್ಯಂತರಗಳನ್ನು ಅಲ್ಲಿಯೇ ಇದ್ದು ವರದಿ ಮಾಡಿದ ಭಾರತೀಯ ವರದಿಗಾರರಲ್ಲಿ ಇವರದ್ದು ಪ್ರಮುಖ ಹೆಸರು .

ವೃತ್ತಿ ಜೀವನದ ಜಾಸ್ತಿ ಸಮಯವನ್ನು ಕಳೆದದ್ದು ಅಸ್ಸಾಂ . ಪ್ರಾಚೀನ ಅಸ್ಸಾಂನ ಹೆಸರು ಕಾಮರೂಪ. ಸುದೀರ್ಘ ಕಾಲ ಅಸ್ಸಾಂನಲ್ಲಿದ್ದುದರಿಂದಲೋ ಏನೊ, ಪ್ರಭಾಕರರಿಗೆ ಆ ಹೆಸರು ಪ್ರಿಯವಾಗಿರಬೇಕು. ಕನ್ನಡದಲ್ಲಿ ಪ್ರಭಾಕರರು ಬರೆದದ್ದು ಕಡಿಮೆ . `ಒಂದು ತೊಲ ಪುನುಗು ಮತ್ತು ಇತರ ಕತೆಗಳು’, ಕಿರು ಕಾದಂಬರಿಗಳಾದ `ಕುದುರೆ ಮೊಟ್ಟೆ’ ಮತ್ತು ಅಂಜಿಕಿನ್ಯಾತಕಯ್ಯ ‘ ಇವರ ಪ್ರಮುಖ ಸಾಹಿತ್ಯ. “ನನ್ನ ಮಟ್ಟಿಗೆ ನಾನು ಒಬ್ಬ ಆಕಸ್ಮಿಕ ಬರೆಹಗಾರ. ಇಂಗ್ಲಿಷ್ನಲ್ಲಿ ಹೇಳಿದರೆ ಆಕ್ಸಿಡೆಂಟಲ್ ರೈಟರ್. ” ಎಂದು ಅವರೇ ಹೇಳಿಕೊಂಡಿದ್ದಾರೆ. ಅಣಕ, ವ್ಯಂಗ್ಯ, ಕೀಟಲೆ, ಗಾಂಭೀರ್ಯದ ಬಲೂನನ್ನು ಚುಚ್ಚುವ ಧಾರ್ಷ್ಟ್ಯ, ಇವೆಲ್ಲ ಅವರ ಮೂರು ಕೃತಿಗಳಲ್ಲಿ ತಕ್ಕಮಟ್ಟಿಗಿದ್ದರೂ ಅವು ಕನ್ನಡ ಕಥನ ಸಾಹಿತ್ಯಕ್ಕೆ ತಂದುಕೊಟ್ಟ ಹೊಸ ಸಂವೇದನೆ, ನಿರೂಪಣಾ ತಂತ್ರ, ಕಾಣ್ಕೆ ಮೊದಲಾದುವುಗಳಿಂದಾಗಿ ಮುಖ್ಯವಾಗುತ್ತವೆ.

ಕೋಲಾರದಲ್ಲಿ ಆರಂಭಿಕ ವಿದ್ಯಾರ್ಥಿ ಜೀವನ . ನಂತರದಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ . ಬೆಂಗಳೂರು , ಧಾರವಾಡ , ಗೌಹಾಟಿಯಲ್ಲಿ ಇಂಗ್ಲೀಶ್ ಬೋಧನೆ . ಈ ಮಧ್ಯೆ ಕನ್ನಡದಲ್ಲಿ ಸೃಜನಶೀಲ ಸಾಹಿತ್ಯ ರಚನೆ . ಅಧ್ಯಯನಕ್ಕಾಗಿ ಅಮೆರಿಕ ಪ್ರವಾಸ . ಹಿಂದಿರುಗಿದ ಬಳಿಕ ಮತ್ತೆ ಅಧ್ಯಾಪಕ ವೃತ್ತಿ , ಮುಂದೆ ಮುಂಬೈ ಯ ‘ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲೀ ‘ ಯಲ್ಲಿ ಪತ್ರಕರ್ತನಾಗಿ ವೃತ್ತಿಜೀವನ ಆರಂಭ . ” ದಿ ಹಿಂದೂ ” ಪತ್ರಿಕೆಗಾಗಿ ಈಶಾನ್ಯ ರಾಜ್ಯಗಳ ವರದಿಗಾರನಾಗಿ ಕೆಲಕಾಲ ಕೆಲಸ ಮಾಡಿದ ನಂತರ ದಕ್ಷಿಣ ಆಫ್ರಿಕಾದ ವರದಿಗಾರರಾದರು. ಹಿಂದಿರುಗಿದ ನಂತರ ಪುನ: ಕಾಮರೂಪಕ್ಕೆ ಮರಳಿದರು . ಸದ್ಯ ಕೋಲಾರದ ತಮ್ಮ ಮನೆಯಲ್ಲಿ ಎಂಬತ್ತರ ಹರೆಯದಲ್ಲಿ ರಾಶಿ ಪುಸ್ತಕಗಳು ಮತ್ತು ಲ್ಯಾಪಟಾಪಿನೊಂದಿಗೆ ಏಕಾಂಗಿಯಾಗಿ ಹೊರ ಜಗತ್ತನ್ನ ನೋಡುತ್ತ ಕುಳಿತಿದ್ದಾರೆ.

Reviews

There are no reviews yet.

Be the first to review “ಸಮಗ್ರ ಕಾಮರೂಪಿ”

Your email address will not be published.