Description
ಎಲ್ಲಾ ಪದವಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅನುಕೂಲವಾಗುವಂತೆ ರಚಿಸಲಾದ ಪುಸ್ತಕ
ಲೇಖಕರು: ಎಂ. ಬಸವಣ್ಣ
ಮೊದಲನೆಯ ಮುದ್ರಣ: 1970
ಪರಿಷ್ಕೃತ ಮೊದಲ ಮುದ್ರಣ: 2021
ಶೈಕ್ಷಣಿಕ ಮನೋವಿಜ್ಞಾನ ಆಧುನಿಕ ಮನೋವಿಜ್ಞಾನದ ಒಂದು ಪ್ರಮುಖ ವಿಭಾಗ. ಅಮೆರಿಕಾದ ಮನೋವಿಜ್ಞಾನ ಸಂಘ ಹೇಳಿರುವ 54 ಮನೋವಿಜ್ಞಾನದ ವಿಭಾಗಗಳಲ್ಲಿ ಶೈಕ್ಷಣಿಕ ಮನೋವಿಜ್ಞಾನ ಹದಿನೈದನೆಯದು. ಯಾರಾದರೂ ಊಹಿಸಬಹುದಾದಂತೆ ಇದು ಕಲಿಯುವಿಕೆ ಮತ್ತು ಕಲಿಸುವಿಕೆಗೆ ಸಂಬಂಧಿಸಿದ ವಿಜ್ಞಾನ. ಕಲಿಕೆ ಕೇವಲ ಶಾಲಾ-ಕಾಲೇಜುಗಳಿಗೆ ಮಾತ್ರ ಸೀಮಿತವಾದುದಲ್ಲ. ಪ್ರತಿಯೊಬ್ಬರೂ ಹುಟ್ಟಿದಂದಿನಿಂದ ಕೊನೆಯವರೆಗೆ ಏನಾದರೊಂದನ್ನು ಕಲಿಯುತ್ತಲೇ ಇರುತ್ತಾರೆ. ಕಲಿಕೆ ಮನೋವಿಜ್ಞಾನದಲ್ಲಿ ಪ್ರಮುಖವಾದ ಅಧ್ಯಯನ ಮತ್ತು ಸಂಶೋಧನೆಗೆ ಒಳಗಾಗಿರುವ ವಿಷಯ. ಅದನ್ನು ಶಿಕ್ಷಣ ಪ್ರಕ್ರಿಯೆಯಲ್ಲಿ ಅನ್ವಯಮಾಡುವುದು ಶೈಕ್ಷಣಿಕ ಮನೋವಿಜ್ಞಾನದ ಆಶಯ. ಅಂದರೆ ಮಾನವರಿಗೆ ಏನನ್ನು ಕಲಿಸಬೇಕು, ಹೇಗೆ ಕಲಿಸಬೇಕು, ಕಲಿತದ್ದನ್ನು ಉಳಿಸಿಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡುವುದು ಹೇಗೆ? ಎಂಬುದನ್ನು ವಿವರಿಸುವುದು ಶೈಕ್ಷಣಿಕ ಮನೋವಿಜ್ಞಾನದ ಪ್ರಮುಖ ಉದ್ದೇಶ. ಯಾವುದೇ ದೇಶದಲ್ಲಿ ಕಲಿಯುವವರು ಮತ್ತು ಕಲಿಸುವವರ ಸಂಖ್ಯೆ ಬಹಳ ದೊಡ್ಡದು. ಅವರೆಡೆಗೆ ನಿರ್ದೇಶಿತವಾಗಿರುವ ಶೈಕ್ಷಣಿಕ ಮನೋವಿಜ್ಞಾನದ ವ್ಯಾಪ್ತಿ ಎಷ್ಟೆಂಬುದನ್ನು ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ಕಲಿಯುವವರಿಗಾಗಲೀ, ಕಲಿಸುವವರಿಗಾಗಲೀ ಮನಃಶಾಸ್ತ್ರದ ಅರಿವು ಅಷ್ಟಾಗಿ ಇಲ್ಲದಿರುವುದು ಒಂದು ದುರಂತ. ಅದಕ್ಕೆ ಮುಖ್ಯ ಕಾರಣ ನಮ್ಮಲ್ಲಿ ಅವರಿಗೆ ಬೇಕಾದ ಪಠ್ಯವಸ್ತುಗಳಿಲ್ಲದಿರುವುದು. ಆ ತೊಂದರೆಯನ್ನು ತಕ್ಕಮಟ್ಟಿಗಾದರೂ ಈ ಪುಸ್ತಕ ನೀಗಿಸುವುದೆಂಬುದು ಗ್ರಂಥಕರ್ತನ ಆಶಯ.
ಇಲ್ಲಿ ಕೆಲವು ಅಧ್ಯಾಯಗಳನ್ನು ಹೊಸದಾಗಿ ಬರೆಯಲಾಗಿದೆ. ಉಳಿದವುಗಳಲ್ಲಿ ಬಹಳ ಮಾರ್ಪಾಟು ಮಾಡಲಾಗಿದೆ. ಒಟ್ಟಾರೆಯಾಗಿ ನೋಡಿದರೆ, ಇದು ಹಳೆಯದರ ಪರಿಷ್ಕøತ ರೂಪವೆನ್ನುವುದಕ್ಕಿಂತ ಹೊಸಪುಸ್ತಕವೆನ್ನಬೇಕು. ಇದನ್ನು ಪಠ್ಯಪುಸ್ತಕದ ಮಾದರಿಯಲ್ಲಿ ರಚಿಸಲಾಗಿದೆ. ಈ ಪುಸ್ತಕವನ್ನು ಮನೋವಿಜ್ಞಾನವನ್ನು ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಬಿ.ಎ. ಮತ್ತು ಬಿ.ಎಡ್. ವಿದ್ಯಾರ್ಥಿಗಳಿಗೆ ಮತ್ತು ಎಲÁ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಉಪಯೋಗಕ್ಕೆ ಬರುವಂತೆ ರಚಿಸಲಾಗಿದ್ದರೂ, ಇದು ಪ್ರಗತಿಪರ ಬೋಧನೆಯಲ್ಲಿ ಆಸಕ್ತರಾಗಿರುವ ಅಧ್ಯಾಪಕರಿಗೂ ಉಪಯೋಗಕ್ಕೆ ಬರಬಹುದೆಂಬುದು ನನ್ನ ನಂಬಿಕೆ.
-ಎಂ. ಬಸವಣ್ಣ
– See more at: https://abhinavabook.myinstamojo.com/product/2972040/concise-educational-psychology/#sthash.m5kjJOwD.dpuf
Reviews
There are no reviews yet.