Description
ಭಾರತದ ಸಂಗೀತದಲ್ಲಿ ಸಪ್ತ ಸ್ವರಗಳು ಒಂದೇ ಆದರೂ ಅವುಗಳನ್ನು ರಾಗಗಳ ಮೂಲಕ ಪ್ರಸ್ತುತ ಪಡಿಸುವ ವಿಚಾರದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಈ ಎರಡು ಪ್ರಕಾರಗಲು ಭಿನ್ನವಾಗಿ ಕವಲೊಡೆದಿರುವುದು ವಿಶೇಷ. ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತ ಮುನ್ನೆಲೆಗೆ ಬಂದಂತೆ, ಉತ್ತರ ಭಾರತದಲ್ಲಿ ಹಿಂದೂಸ್ತಾನಿ ಸಂಗೀತವು ರಾಜಾಶ್ರಯಗಳ ಮೂಲಕ ಮಜರಂಜನೆಯ ಭಾಗವಾಗಿ ಮತ್ತು ದೇವರ ಸ್ಮರಣೆ ಹಾಗೂ ಸ್ತುತಿಸುವ ಮಾಧ್ಯಮಗಳಾಗಿ ಇಂದಿಗೂ ಭಾರತದ ಜನಮಾನಸದಲ್ಲಿ ಅಗ್ರಸ್ಥಾನ ಪಡೆದಿವೆ.
ಸಂಗೀತಕ್ಕಾಗಿ ತಮ್ಮನ್ನು ತಾವು ತೆತ್ತುಕೊಂಡು ಉದಾತ್ತ ಮನೋಭಾವದಿಂದ ಘನತೆಯ ಬದುಕು ಬಾಳಿದ ಅನೇಕ ಕಲಾವಿದರ ಜೀವನ ಮತ್ತು ಅವರ ಸಿದ್ಧಾಂತಗಳು ಇಂದಿಗೂ ಸಹ ವರ್ತಮಾನದ ಭಾರತದ ಎಲ್ಲಾ ವಿಕಾರಗಳಿಗೆ ಮದ್ದಾಗಬಲ್ಲವು. ಈ ದೃಷ್ಟಿಕೋನದಿಂದ ಈಗಾಗಲೇ ಕರ್ನಾಟಕ ಸಂಗೀತದ ಮೇರು ಪ್ರತಿಭೆಗಳಾದ ಬೆಂಗಳೂರು ನಾಗರತ್ನಮ್ಮ, ಎಂ.ಎಸ್.ಸುಬ್ಬುಲಕ್ಷ್ಮಿ, ಎಂ.ಎಲ್.ವಸಂತಕುಮಾರಿ, ಪಿಟಿಲು ಚೌಡಯ್ಯ ಮತ್ತು ಭೈರವಿ ಕೆಂಪೇಗೌಡರ ಜೀವನ ಚರಿತ್ರೆಯನ್ನು ಬರೆಯುವುದರ ಮೂಲಕ ಅವರ ಉದಾತ್ತ ಗುಣ ಮತ್ತು ಸಾಧನೆಗಳನ್ನು ದಾಖಲಿಸಿದ್ದೇನೆ. ಈ ನಿಟ್ಟಿನಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ನಾನು ಪ್ರಥಮವಾಗಿ ಬಿಸ್ಮಿಲ್ಲಾಖಾನ್ರ ಬದುಕನ್ನು ಆಯ್ಕೆ ಮಾಡಿಕೊಂಡಿದ್ದೇನೆ.
ತಮ್ಮ ಶಹನಾಯ್ ಸಂಗೀತ ಮೋಡಿಯ ಮೂಲಕ ಉತ್ತರ-ದಕ್ಷಿಣವೆಂಬ ಬೇಧಭಾವವಿಲ್ಲದೆ ಭಾರತೀಯರನ್ನೂ ಸಮ್ಮೋಹನಗೊಳಿಸಿದ ಬಿಸ್ಮಿಲ್ಲಾ ಖಾನರು ಒಂದು ರೀತಿಯಲ್ಲಿ ಹಿಂದೂ ಹಾಗೂ ಇಸ್ಲಾಂ ಧರ್ಮಗಳ ನಡುವಿನ ಕೊಂಡಿಯಂತೆ, ಸೇತುವೆಯಂತೆ ಬದುಕಿದವರು. ಉತ್ತರ ಭಾರತದಲ್ಲಿ ಮಂಗಳಕರ ವಾದ್ಯ ಎಂದು ಕರೆಯುವ ಶಹನಾಯ್ಗೆ ಪ್ರಾಮುಖ್ಯತೆ ಇದ್ದರೂ ಸಹ, ಅದನ್ನು ದೇಗುಲಗಳು, ಅರಮನೆ ಹಾಗೂ ಜನಸಾಮಾನ್ಯರ ಗೃಹಗಳ ಹೊಸ್ತಿಲಾಚೆಗೆ ಸೀಮಿತಗೊಳಿಸಲಾಗಿತ್ತು. ಇಂತಹ ವಾದ್ಯವನ್ನು ಹಿಂದೂಸ್ತಾನಿ ಸಂಗೀತ ಕಚೇರಿಯ ವೇದಿಕೆಗೆ ಪರಿಚಯಿಸಿದವರಲ್ಲಿ ಬಿಸ್ಮಿಲ್ಲಾಖಾನ್ ಪ್ರಮುಖರು. ಹಿಂದೂಸ್ತಾನಿ ಸಂಗೀತದಲ್ಲಿ ಬಿಸ್ಮಿಲ್ಲಾಖಾನ್ ರವರ ಶಹನಾಯ್ ನುಡಿಸಾಣಿಕೆಯ ಪ್ರಭಾವ ಎಷ್ಟಿತ್ತೆಂದರೆ, ಇವರನ್ನು ಮೀರಿಸುವ ಅಥವಾ ಇವರ ಸಾಲಿಗೆ ನಿಲ್ಲಬಲ್ಲ ಒಬ್ಬ ಕಲಾವಿದ ಈವರೆಗೆ ಬರಲು ಸಾಧ್ಯವಾಗಿಲ್ಲ
Reviews
There are no reviews yet.