Sale!

ಸಂಗೀತ ಸಂವಾದ

140.00 126.00

Add to Wishlist
Add to Wishlist
Email

Description

ಸಂಗೀತವೆಂಬ ಅಮೂರ್ತ ಮಾಧ್ಯಮವನ್ನು ಕುರಿತು ಬರವಣಿಗೆಗಳು ಕಡಿಮೆ. ಇರುವ ಕೆಲವು ಕೂಡ ಶಾಸ್ತ್ರ-ಸಿದ್ಧಾಂತ-ಪ್ರಯೋಗಗಳನ್ನು ಕುರಿತು ತೀರಾ ಜಡ ಶಾಸ್ತ್ರೀಯ ಭಾಷೆಯಲ್ಲಿ ಮಾತಾಡುವಂಥವು.ಭಾಸ್ಕರ್ ಚಂದಾವರ್ಕರ್ ಅವರ ಈ ಪುಸ್ತಕ ಇದಕ್ಕೆ ಅಪವಾದ. ಪ್ರಸ್ತುತ ಪುಸ್ತಕವು ಸಂಗೀತಮಾಧ್ಯಮ ಕುರಿತಂತೆ ತುಂಬ ಲವಲವಿಕೆಯಿಂದ ಸಂವಾದಿಸುತ್ತದೆ; ಕಥೆ-ಉಪಕಥೆ-ಐತಿಹ್ಯಗಳನ್ನು ಸ್ವಾರಸ್ಯವಾಗಿ ಉಲ್ಲೇಖಿಸುತ್ತಲೇ ತೀರಾ ಕ್ಲಿಷ್ಟ ಪರಿಕಲ್ಪನೆಗಳನ್ನೂ ವಿವರಿಸುತ್ತದೆ. ಆದ್ದರಿಂದಲೇ ಸಂಗೀತ ತಜ್ಞರೊಂದಿಗೆ ವಿದ್ಯಾರ್ಥಿಗಳೂ ಸಂಸ್ಕ ತಿ ಆಸಕ್ತರೂ ಮತ್ತು ಸಾದಾ ಓದುಗರೂ ಈ ಪುಸ್ತಕದಿಂದ ಲಾಭ ಪಡೆಯಬಹುದು. ಜೊತೆಗೆ, ಶಾಸ್ತ್ರೀಯತೆಯನ್ನು ಮೀರಿದ ಕಥನವೊಂದರ ಆಕರ್ಷಕ ಗುಣವೂ ಈ ಪುಸ್ತಕಕ್ಕಿದೆ.೧೯೯೭ರ ಫೆಬ್ರವರಿಯಲ್ಲಿ ನೀನಾಸಮ್ ಪ್ರತಿಷ್ಠಾನವು ಹೆಗ್ಗೋಡಿನಲ್ಲಿ ಏರ್ಪಡಿಸಿದ ಐದು ದಿನಗಳ ಒಂದು ರಸಗ್ರಹಣ ಶಿಬಿರದಲ್ಲಿ ಮಾಡಿದ ಉಪನ್ಯಾಸಗಳ ಸಂಕಲನ ಈ ಪುಸ್ತಕ. ಅಲ್ಲಿ ಭಾಸ್ಕರ ಚಂದಾವರ್ಕರ್ ಆಡಿದ ಮಾತುಗಳನ್ನು ಶ್ರೀಮತಿ ವೈದೇಹಿಯವರು ಅಕ್ಷರಕ್ಕಿಳಿಸಿ ಅನುವಾದಿಸಿದ್ದಾರೆ.

Reviews

There are no reviews yet.

Be the first to review “ಸಂಗೀತ ಸಂವಾದ”

Your email address will not be published. Required fields are marked *