Description
ಬಿದರಹಳ್ಳಿಯವರ ಹೊಸ ಕಥಾ ಸಂಕಲನ.
ಬಿದರಹಳ್ಳಿ ಇಂಗ್ಲಿಷ್ ಮೇಷ್ಟ್ರು. ಆದರೆ ಪಶ್ಚಿಮದ ಪ್ರಭಾವವು, ತಮ್ಮ ಸೃಜನಶೀಲತೆಯ ಮೇಲೆ ನೆರಳು ಕವಿಯದಂತೆ ನೋಡಿಕೊಂಡವರು ಇವರು. ಮಲೆನಾಡನ್ನು ಮೆಚ್ಚುವ ನನಗೆ ಶಿವಮೊಗ್ಗದ ಸುತ್ತಮುತ್ತಲ ಪರಿಸರ ತನ್ನೆಲ್ಲ ಒಲವು ಚೆಲುವಿನ ಜೊತೆಗೂಡಿ ಇವರ ಬರವಣಿಗೆಯಲ್ಲಿ ಒಡಮೂಡಿರುವುದೂ ಇವರ ಬರಹಗಳ ಬಗ್ಗೆ ಆಸಕ್ತಿ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿಯೇ ಅವರ ಕಥಾಸಂಕಲನವನ್ನು ಕುತೂಹಲದಿಂದ ಓದಲು ಆರಂಭಿಸಿದೆ.
ಬಿದರಹಳ್ಳಿ ಅವರು ಅನೇಕ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಕಥಾ ಪ್ರಕಾರವು ಇವರಿಗೆ ಹೆಚ್ಚು ಒಗ್ಗಿದ ಬರವಣಿಗೆ ಎಂದೆ ನನಗೆ ಅನ್ನಿಸಿದೆ. ಈ ಸಂಕಲನದ ೨೨ ಕಥೆಗಳಲ್ಲಿ ಸುಮಾರು ಎರಡು ದಶಕಗಳಿಂದಲೂ ಬರೆಯುತ್ತಾ ಬಂದಿರುವ ಕಥೆಗಳು ಸೇರ್ಪಡೆಯಾಗಿವೆ.
ಕಥೆಯನ್ನು ಹೇಳುವ ರೀತಿಯ ಅನೇಕ ಪ್ರಯೋಗಗಳು ಬಿದರಹಳ್ಳಿ ಅವರ ಇಲ್ಲಿನ ಬರಹದಲ್ಲಿ ಕಂಡುಬಂದರೂ ಅನುಭವವನ್ನು ಬಗೆಯುವ ಅವರ ಭಾಷೆಯೇ ಹೆಚ್ಚು ಸೂಕ್ಷ್ಮವಾಗಿದೆ ಎಂದು ನನಗೆ ಅನ್ನಿಸುತ್ತಿದೆ. ವಿವರಗಳ ಪಾತಳಿಯನ್ನು ಮೀರಿ ಭಾಷೆ ಇಲ್ಲಿ ಸಹಜ ಧ್ವನಿಯನ್ನು ಗಳಿಸಿಕೊಳ್ಳುತ್ತದೆ. ಇದೇ ಇಲ್ಲಿನ ಕೆಲವು ಕಥೆಗಳು ಗಟ್ಟಿಗೊಳ್ಳುವ ಒಂದು ಪ್ರಮುಖ ಅಂಶವಾಗಿದೆ. ಅದನ್ನೇ ಅವರು ಅನುಭಾವದಂತೆ ಗಟ್ಟಿ ಹಿಡಿಯಬೇಕೆಂದು ನನಗೆ ಪದೇ ಪದೇ ಅನಿಸುತ್ತಿದೆ. – ಡಾ, ಬಸವರಾಜ ಕಲ್ಗುಡಿ
Reviews
There are no reviews yet.