Description
ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ, ಪ್ರಖ್ಯಾತ ಸಂಗೀತಗಾರ, ನ್ಯಾಯನಿಷ್ಠುರಿ ಮಾತುಗಾರ, ಲೇಖಕ ಟಿ.ಎಂ.ಕೃಷ್ಣ ಜಾತಿ ವ್ಯವಸ್ಥೆಯ ಕಬಂಧಬಾಹುಗಳು ಹೇಗೆ ಕಲೆಯನ್ನು ಕಟ್ಟಿಹಾಕಿವೆ ಎಂಬ ಕುರಿತು ಆಳವಾಗಿ ಚಿಂತನೆ ನಡೆಸಿರುವ ಅಪರೂಪದ ಕಲಾವಿದ. ಕಲಾಪರಿಧಿಯ ಅಂಚಿನಲ್ಲಿರುವ ಮೃದಂಗ ತಯಾರಕರ ಬದುಕು, ಒದ್ದಾಟಗಳು, ಅವರ ಸೃಜನಶೀಲತೆ, ಹಸ್ತ ಕೌಶಲದ ಬಗ್ಗೆ ಬರೆಯಬೇಕೆಂದು ಹುಡುಕಿಕೊಂಡು ಹೊರಟ ಕೃಷ್ಣ, ಎರಡು ಮೂರು ವರ್ಷ ಸುತ್ತಾಡಿ, ಅವರ ಬದುಕನ್ನು ಹತ್ತಿರದಿಂದ ಅರಿತು, ಹತ್ತಾರು ಮೂಲಗಳಿಂದ ವಿಷಯ ಸಂಗ್ರಹಿಸಿ, ಅಧ್ಯಯನ ಮಾಡಿ ‘ಸೆಬಾಸ್ಟಿಯನ್ & ಸನ್ಸ್’ ಕೃತಿಯನ್ನು ಇಂಗ್ಲಿಷ್‌ನಲ್ಲಿ ಹೊರತಂದಿದ್ದಾರೆ. ಸುಮಂಗಲಾ ಅನುವಾದಿಸಿದ್ದಾರೆ.
Reviews
There are no reviews yet.