ಸೆಜುವಾನ್ ನಗರದ ಸಾಧ್ವಿ

180.00

Add to Wishlist
Add to Wishlist
Email
SKU: B-AKR-SNS- Category: Tag:

Description

ಬ್ರೆಖ್ಟ್ ೧೯೩೮-೪೦ರ ಅವಧಿಯಲ್ಲಿ ಬರೆದ ‘ಸೆಜುವಾನ್ ನಗರದ ಸಾಧ್ವಿ’ ೧೯೪೩ರಲ್ಲಿ ಮೊದಲು ಪ್ರದರ್ಶನಗೊಂಡಿತು. ಎಪಿಕ್ ಶೈಲಿಯನ್ನು ವಿಶದಗೊಳಿಸುವ ಮುಖ್ಯ ನಾಟಕಗಳಲ್ಲಿ ಇದೊಂದು. ಕಥೆ ಚೀನಾದಲ್ಲಿ ನಡೆದಂತೆ ಚಿತ್ರಿತವಾಗಿದ್ದರೂ ಈ ನಾಟಕ ಬಹುಮಟ್ಟಿಗೆ ಕಾಲದೇಶಗಳ ಬದ್ಧತೆಯನ್ನು ಮೀರಿಕೊಂಡದ್ದು…

ಸಮಾಜದ ಕೆಳಸ್ತರದಲ್ಲಿರುವ ವ್ಯಕ್ತಿಯೊಬ್ಬಳು ಒಳ್ಳೆಯವಳಾಗಿದ್ದುಕೊಂಡು ಅಕ್ಕಪಕ್ಕದವರಿಗೆ ಒಳ್ಳೆಯದು ಮಾಡುತ್ತ, ಪ್ರೀತಿಗಾಗಿ ಹಂಬಲಿಸುತ್ತ, ತನ್ನ ಕೂಸಿನ ಬದುಕು ತನ್ನದಕ್ಕಿಂತ ಉತ್ತಮವಾಗಬೇಕೆಂದು ಹಾರೈಸುತ್ತ ತನ್ನ ಪರಿಸರದ ಕಹಿಕೋಟಲೆ ಹಿಂಸೆಗಳ ದೆಸೆಯಿಂದ ವಿಫಲಳಾಗುವುದೇ ಈ ನಾಟಕದ ವಸ್ತು. ಸಾಧ್ವಿಯಾಗಿ ಬದುಕುವುದು ದುಸ್ಸಾಧ್ಯವಾದಾಗ ಶೆನ್‍ತೆ, ನಿಷ್ಠುರ ಮನಸ್ಸಿನ ಶುಯಿತಾನ ಮುಖವಾಡ ತೊಡುತ್ತಾಳೆ. ಕ್ರಮೇಣ ಆಕೆಗೆ ಶುಯಿತಾನ ಮುಖವಾಡವೇ ಹೆಚ್ಚು ಹೆಚ್ಚು ಅಗತ್ಯವಾಗುತ್ತ ಹೋಗುತ್ತದೆ. ಈ ಜಗತ್ತಿನಲ್ಲಿ ಒಳ್ಳೆಯವರಾಗಿ ಉಳಿಯುವುದು ಹೇಗೆ? ಎಂದು ಬ್ರೆಖ್ಟ್ ನಮ್ಮನ್ನೇ ಪ್ರಶ್ನಿಸುತ್ತಾನೆ; ನಮ್ಮನ್ನು ಯೋಚಿಸಲು ಹಚ್ಚುತ್ತಾನೆ…

ಈಗಾಗಲೇ ಹಲವು ರಂಗ ಪ್ರಯೋಗಗಳಲ್ಲಿ ಸಮರ್ಥವೆನಿಸಿಕೊಂಡಿರುವ ಅನುವಾದ ಇಲ್ಲಿದೆ.

Reviews

There are no reviews yet.

Be the first to review “ಸೆಜುವಾನ್ ನಗರದ ಸಾಧ್ವಿ”

Your email address will not be published.