Description
ಪ್ರತಿರೋಧಕ್ಕೆ ಇನ್ನೊಂದು ರೂಪ ಕೂಡ ಇದೆ:
ವಾಸ್ತವವಾಗಿ ಪಂಥ್‌ನ ಸ್ಥಾಪನೆ ಈ ಪ್ರತಿರೋಧದ
ಆರಂಭದ ಘಟ್ಟ. ಸ್ವರ್ಣ ಮಂದಿರ ಮತ್ತು ಅಕಾಲ್
ತಖ್‌ನ ಸ್ಥಾಪನೆ ಅಥವಾ ಹರ್ ಮಂಬರ್ ಸ್ಥಾಪನೆ,
ಖಾಲ್ಸಾ ಮತ್ತು ಆನಂದ್‌ಪುರ್ ನಗರದ ಸ್ಥಾಪನೆ, ವಿವಿಧ ಆಧ್ಯಾತ್ಮಿಕ ವಿಶಿಷ್ಟತೆಗಳನ್ನು ಒಳಗೊಂಡ ಗುರು
ಗ್ರಂಥ ಸಾಹೇಬ್ ಧರ್ಮ ಗ್ರಂಥದ ಸಂಪಾದನೆ,
ಪ್ರತಿಯೊಬ್ಬ ಸಿಬ್ಬನನ್ನು ಸಿಂಗ್ ಎಂದು ನಾಮಕರಣ
ಮಾಡುವುದು, ಖಾಲ್ಲಾ ಸೈನ್ಯದ ಸ್ಥಾಪನೆ, ಇತ್ಯಾದಿ
ಸಬಾಲ್ಟರ್ನ್ ಪ್ರತಿರೋಧದ ವಿವಿಧ ಮಜಲುಗಳು,
ವಿವಿಧ ರೂಪಕಗಳು.
ಆಳವಾಗಿ ವಿಶ್ಲೇಷಿಸುವುದಾದರೆ ಅರ್ಜುನ್, ನಾನಕ್, ರವಿದಾಸ್, ಕರ್, ನಾಮ್‌ದೇವ್, ಫಲೀದ್ ಇವರೆಲ್ಲರೂ ಕೂಡ ಆ ಪ್ರತಿರೋಧದ ಮತ್ತು ಸಬಾಲ್ಟರ್ನ್ ಸಂಕೇತಗಳು, ಇವರೊಂದಿಗೆ ಸಿಖ್ ಸಮುದಾಯದಲ್ಲಿ ಬಂದು ಹೋದ ಹತ್ತು ಗುರುಗಳೂ ಕೂಡ ಈ ಸಬಾಲ್ಟರ್ನ್ ಧ್ವನಿಗಳು.
ಇದು ಸೋತು ಹೋದ ಸಬಾಲ್ಟರ್ನ್ ಕತೆಗಳಲ್ಲ
ಅಥವಾ ಧ್ವನಿಗಳಲ್ಲ. ಇಲ್ಲಿ ಸಬಾಲ್ಟರ್ನ್‌ರ
ಅಂತರ್ಗತವಾದ, ಸೂಕ್ಷ್ಮವಾದ ಆದರೆ ಗಟ್ಟಿಯಾದ
ಶಕ್ತಿಯ ದರ್ಶನವಿದೆ, ಸಮ್ಮಿಲನವಿದೆ.
– ಪ್ರೊ. ಮುಜಾಫರ್ ಅಸ್ಸಾದಿ
Reviews
There are no reviews yet.